ಬೆಂಗಳೂರು: ರಂಜಾನ್ ಹಬ್ಬದ ಪ್ರಯುಕ್ತ ಭಿಕ್ಷಾಟನೆ ಮಾಡಿ 2000 ದಿಂದ 3000 ರೂಪಾಯಿ ಸಂಪಾದಿಸಿದ ವಿಷಯಕ್ಕೆ ಸಂಬAಧಪಟ್ಟ ಹಾಗೆ ಗಲಾಟೆ ತೆಗೆದು ಕೊಲೆಯಾಗಿರುವ ಘಟನೆ ಅಶೋಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಆನೆಪಾಳ್ಯದಲ್ಲಿ ಜರುಗಿದೆ.
ಇಡೀ ಕುಟುಂಬವೇ ಭಿಕ್ಷಾಟನೆಯಲ್ಲಿ ತೊಡಗಿದ್ದು ಶಕೀರ 70 ವರ್ಷದ ಮಹಿಳೆಯನ್ನು ಅಳಿಯ, ಮಗಳು ಹಾಗೂ ಇತರರು ಹಣ ಹಂಚಿಕೊಳ್ಳುವ ವಿಷಯಕ್ಕೆ ಜಗಳ ಶುರುವಾಗಿ ಕಲ್ಲಿನಲ್ಲಿ ತಲೆಗೆ ಹೊಡೆದ ಪರಿಣಾಮ ತೀವ್ರತರವಾದ ಗಾಯ ಸಂಭವಿಸಿ ಕೊಲೆಯಲ್ಲಿ ಅಂತ್ಯವಾಗಿರುತ್ತದೆ.
ಅಶೋಕನಗರ ಪೊಲೀಸರು ಕೊಲೆ ಮೊಕದ್ದಮೆ ದಾಖಲು ಮಾಡಿಕೊಂಡು ಮಗಳು ಅಳಿಯ ಹಾಗೂ ಇತರರನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿರುತ್ತಾರೆ.



