This is the title of the web page
This is the title of the web page

ಮತ್ತೆ ಅಭ್ಯಾಸಕ್ಕೆ ಮರಳಿದ ರಿಷಬ್ ಪಂತ್! ವಿಶ್ವಕಪ್ ತಂಡಕ್ಕೆ ವಾಪಸ್?

ಬೆಂಗಳೂರು: ರಸ್ತೆ ಅಪಘಾತದಿಂದಾಗಿ ಕಾಲು ಮುರಿತಕ್ಕೊಳಗಾಗಿದ್ದ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟಿಗ ರಿಷಬ್ ಪಂತ್ ಈಗ ಅಭ್ಯಾಸಕ್ಕೆ ಮರಳಿದ್ದಾರೆ. ಅವಧಿಗೂ ಮುನ್ನವೇ ರಿಷಬ್ ಚೇತರಿಸಿಕೊಳ್ಳುತ್ತಿರುವುದು ಖುಷಿಯ ಸಂಗತಿಯಾಗಿದೆ. ಅವರ ಆರೋಗ್ಯದ ಬಗ್ಗೆ ಲೇಟೆಸ್ಟ್ ಅಪ್ ಡೇಟ್ ಕೊಟ್ಟಿರುವ ಬಿಸಿಸಿಐ ಎರಡನೇ ಬಾರಿ ಶಸ್ತ್ರಚಿಕಿತ್ಸೆ ಅಗತ್ಯವಿಲ್ಲವೆಂದು ವೈದ್ಯರು ತಿಳಿಸಿದ್ದಾಗಿ ಮಾಹಿತಿ ನೀಡಿದೆ.

ಇದೀಗ ರಿಷಬ್, ಶಿಖರ್ ಧವನ್ ಬೆಂಗಳೂರಿನ ಎನ್ ಸಿಎಯಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಫೆÇೀಟೋಗಳು ವೈರಲ್ ಆಗಿವೆ. ಕೆಲವು ದಿನಗಳ ಹಿಂದಷ್ಟೇ ರಿಷಬ್ ಊರುಗೋಲಿನ ಸಹಾಯವಿಲ್ಲದೇ ನಡೆದಾಡುವ ಮಟ್ಟಿಗೆ ಚೇತರಿಸಿಕೊಂಡಿದ್ದರು. ನಿರೀಕ್ಷೆಗೂ ಮೀರಿ ರಿಷಬ್ ಚೇತರಿಸಿಕೊಂಡಿರುವುದು ಖುಷಿಯ ವಿಚಾರವಾಗಿದ್ದು, ಅವರು ವಿಶ್ವಕಪ್ ವೇಳೆಗೆ ತಂಡಕ್ಕೆ ವಾಪಸ್ ಆದರೂ ಅಚ್ಚರಿಯಿಲ್ಲ.