ಬೆಂಗಳೂರು: ಒಂದು ಅವಕಾಶ ನೀಡಿ ಆಮೇಲೆ ಆಗುವ ಬದಲಾವಣೆಗಳನ್ನು ನೋಡಿ ಎಂಬುದಾಗಿ ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್.ಕೆ.ರಮೇಶ್ ಮತದಾರರಲ್ಲಿ ವಿನಂತಿಸಿಕೊಂಡರು.
ಅವರು ಬೆಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಬೇಗೂರು ವಾರ್ಡ್ ವ್ಯಾಪ್ತಿಯ ಅಕ್ಷಯನಗರ ಹಾಗೂ ಎಳೇನಹಳ್ಳಿ ಉದ್ಯಾನವನಗಳು ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ನಿವಾಸಿಗಳು ಹಾಗೂ ಮತದಾರರನ್ನು ಬೇಟಿ ಮಾಡಿ ಮಾತನಾಡಿದರು.
ಇಷ್ಟು ವರ್ಷಗಳ ಬಿಜೆಪಿ ಆಡಳಿತದಿಂದ ಏನೆಲ್ಲ ಸಂಕಷ್ಟಕ್ಕೆ ಒಳಗಾಗಿದ್ದಿರಿ ಎಂಬುದನ್ನು ಸ್ವತಃ ತಾವೇಲ್ಲರೂ ಅನುಭವಿಸಿದ್ದಿರಿ, ಇಂತಹ ಕೆಟ್ಟ ಆಡಳಿತ ವ್ಯವಸ್ಥೆಯನ್ನು ಕಿತ್ತಾಕಲು ಈಗ ನಿಮ್ಮ ಮನೆ ಮನೆಯ ಬಾಗಿಲಿಗೆ ಬಂದಿದ್ದಿವಿ ನಾವುಗಳು ಪ್ರಜ್ಞಾವಂತ ನಾಗರೀಕರು ಯೋಚಿಸಿ ಒಂದು ಬಾರಿ ಅವಕಾಶ ಮಾಡಿಕೊಡಿ ನಿಮ್ಮಗಳ ಕನಸುಗಳಿಗೆ ಒತ್ತಾಸೆಯಾಗಿ ನಿಲ್ಲುತ್ತಿನಿ ಎಂದರು.
ಇದೇ ಸಂದರ್ಭದಲ್ಲಿ ಮಾಜಿ ಬಿಬಿಎಂಪಿ ಸದಸ್ಯರಾದ ಬೇಗೂರು ಆಂಜನಪ್ಪ, ಬೇಗೂರು ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ತೋಗೂರು ಕಾಂತರಾಜ್, ಸೇರಿದಂತೆ, ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
Leave a Review