ಬೆಂಗಳೂರು: ಉದ್ಯೋಗಯೋಗ್ಯತೆ ನೀಡುವಲ್ಲಿ ಆಸ್ಟ್ರೇ ಲಿಯಾದ ಮುಂಚೂಣಿಯ ಸಂಸ್ಥೆಯಾದ ಆರ್ಎಂಐಟಿ ವಿಶ್ವವಿದ್ಯಾನಿಲಯ ಚೆನ್ನೈನ ಕಿಂಗ್ಸ್ ಕಾರ್ನರ್ಸ್ಟೋನ್ ಇಂಟರ್ ನ್ಯಾಷನಲ್ ಕಾಲೇಜಿನಲ್ಲಿ ಪಾಲುದಾರಿಕೆ ಸಪ್ತಾಹ ಆಚರಿಸಿದೆ.
ಕಿಂಗ್ಸ್ ಕಾರ್ನರ್ಸ್ಟೋನ್ ಇಂಟನಾರ್ಯ್ಶನಲ್ ಕಾಲೇಜಿನೊಂದಿಗೆ ತನ್ನ ದೀರ್ಘಕಾಲದ ಪಾಲುದಾರಿಕೆ ಸಂಸ್ಮರಿಸಲು ಹರ್ಷಿಸುತ್ತದೆ.2016 ರಿಂದ, ಆರ್ಎಂಐಟಿ ವಿಶ್ವವಿದ್ಯಾನಿಲಯ ಮತ್ತು ಕಿಂಗ್ಸ್ ಕಾರ್ನರ್ಸ್ಟೋನ್ ಸಂಸ್ಥೆಗಳು ಸಹಭಾಗಿತ್ವದಲ್ಲಿ ಪರಿವರ್ತನಾತ್ಮಕ ಆಸ್ಟ್ರೇಲಿಯನ್ ವರ್ಗಾವಣೆ ಕಾರ್ಯಕ್ರಮಗಳನ್ನು ಸಾದರಪಡಿಸಿವೆ.
ಇವು ವಿದ್ಯಾರ್ಥಿಗಳು ತಮ್ಮ ಉನ್ನತ ಶಿಕ್ಷಣದ ಪ್ರಯಾಣದಲ್ಲಿ ಭಾರತದಿಂದ ಆಸ್ಟ್ರೇಲಿಯಾಕ್ಕೆ ಸೀಮಾತೀತವಾಗಿ ಪರಿವರ್ತಿತಗೊಳ್ಳಲು ನೆರವಾಗುತ್ತವೆ. 2016 ರಲ್ಲಿ ದೆಹಲಿಯ ಆಸ್ಟ್ರೇಲಿಯ ರಾಯಭಾರಿ ಕಚೇರಿಯಲ್ಲಿ ಆಸ್ಟ್ರೇಲಿಯನ್ ವರ್ಗಾವಣೆ ಕಾರ್ಯಕ್ರಮಕ್ಕೆ ಸಹಭಾಗಿತ್ವ ಕೈಗೊಳ್ಳಲು ಒಪ್ಪಂದಕ್ಕೆ ಉಭಯ ಸಂಸ್ಥೆಗಳು ಸಹಿ ಹಾಕಿದ್ದವು. ವಿದ್ಯಾರ್ಥಿಗಳಿಗೆ ಸಾಟಿಯಿಲ್ಲದ ಶೈಕ್ಷಣಿಕ ಅವಕಾಶಗಳನ್ನು ಪೂರೈಸುವ ಗುರಿ ಹೊಂದಿರುವ ಚಲನಶೀಲ ಮಾರ್ಗದ ಕಾರ್ಯಕ್ರಮವಾಗಿ ಬೆಳೆದಿದೆ.
ಸ್ಟೆಮ್ ಕಾಲೇಜಿನ ಕಾರ್ಯಕ್ರಮ ಜೀವನಾವರ್ತನ ಮತ್ತು ಆಡಳಿತ ವಿಭಾಗದ ಸಹಾಯಕ ನಿರ್ದೇಶಕರಾದ ಪ್ರೊ ಫೆಸರ್ ಅಭಿಜಿತ್ ಮಣಿ, ನಿಕೋಲ್ ಆರ್ವಿನ್, ಉಪನ್ಯಾಸಕರು, ಕ್ಲಿನಿಕಲ್ ಆಯೋಜಕರು: ನರ್ಸಿಂಗ್; ಪ್ರೊ ಫೆಸರ್ ರಾಜಾರಾಮನ್ ಎರಿ (ಎಂ ವಿ ಎಸ್ಸಿ, ಪಿಎಚ್ಡಿ), ಸಹ ಡೀನ್(ಬಯೋಸೈನ್ಸ್, ಫುಡ್ ಟೆಕ್ನಾಲಜಿ); ಡಾ. ಕೆವಿನ್ ಆರ್ಗಸ್, ಹಿರಿಯ ಉಪನ್ಯಾಸಕರು, ವಿನ್ಯಾಸ ಚಿಂತನೆ ಮತ್ತು ಮಾರುಕಟ್ಟೆ ಕಾರ್ಯ (ಇಎಂಬಿಎ ಮತ್ತು ಎಂಬಿಎ), ಎಂಬಿಎ ಕಾರ್ಯಕ್ರಮ ನಿರ್ದೇಶಕ; ಮತ್ತು ಅಸೋಸಿಯೇಟ್ ಪ್ರೊ ಫೆಸರ್ ಮೆರೆಡಿತ್ ಥರಾಪೋಸ್(ಅಕೌಂಟಿಂಗ್), ವಿಭಾಗೀಯ ಉಪ ಮುಖ್ಯಸ್ಥರು(ಲೆಕ್ಕಪತ್ರ ನಿರ್ವಹಣೆ), ಮುಂತಾದವರನ್ನು ಒಳಗೊಂಡ ಆರ್ಎಂಐಟಿ ವಿಶ್ವವಿದ್ಯಾಲಯದಿಂದ ಒಂದು ಪರಿಣತರ ನಿಯೋಗ ಇದಾಗಿದೆ.