ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ೪೦ನೇ ಹುಟ್ಟುಹಬ್ಬವನ್ನ ಆಚರಿಸುತ್ತಿದ್ದಂತೆ, ಅಭಿಮಾನಿಗಳಗೆ ಅತಿದೊಡ್ಡ ಸಪ್ರ್ಪ್ರೈರ್ಸ್ೈಸ್ ನೀಡಿದ್ದಾರೆ. ಬಹುನಿರೀಕ್ಷಿತ ಸಿನಿಮಾ ʻಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ʼನ ಟೀರ್ ರಿಲೀಸ್ ಆಗಿದೆ. ಟೀಸರ್ನಲ್ಲಿ ಯಶ್ ಅವರ ಪಾತ್ರದ ಹೆಸರು ʻರಾಯ’ ಎಂದು ರಿವೀಲ್ ಆಗಿದೆ.
ರಾಕಿಂಗ್ ಸ್ಟಾರ್ ಯಶ್ ಅವರ ೪೦ನೇ ಹುಟ್ಟುಹಬ್ಬದಂದು ರಿಲೀಸ್ ಆದ ʻಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್ʼ ಸಿನಿಮಾದ ಟೀಸರ್ ಸಾಕಷ್ಟು ಸದ್ದು ಮಾಡುತ್ತಿದೆ. ಟೀಸರ್ನಲ್ಲಿ ಯಶ್ ಅವರ ʻರಾಯʼ ಪಾತ್ರದ ಮೊದಲ ಝಲಕ್ ಅಭಿಮಾನಿಗಳನ್ನ ರೋಮಾಂಚನಗೊಳಿಸಿದೆ. ಟೀಸರ್ ರಿಲೀಸ್ ಆಗುತ್ತಿದ್ದಂತೆಯೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ, ʻಪ್ಯೂರ್ ಹಾಲಿವುಡ್ ವೈಬ್ಸ್ʼ ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ʻಟಾಕ್ಸಿಕ್ʼ ಟೀಸರ್ ಬೆಳಿಗ್ಗೆ ೧೦:೧೦ಕ್ಕೆ ರಿಲೀಸ್ ಆಗಿದ್ದು, ಕೇವಲ ನಿಮಿಷಗಳಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಟೀಸರ್ನಲ್ಲಿ ಯಶ್ ಸಿಕ್ಸ್ ಪ್ಯಾಕ್ ದೇಹದೊಂದಿಗೆ ಮಾಸ್ ಮತ್ತು ಸ್ಟೈಲೀಶ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ ಯಶ್.
ಟಾಕ್ಸಿಕ್ʼ ಟೀಸರ್ ಒಂದು ಗೋರಿ ಸ್ಮಶಾನದ ಅಂತ್ಯಕ್ರಿಯೆ ದೃಶ್ಯದಿಂದ ಆರಂಭವಾಗುತ್ತದೆ. ಅಲ್ಲಿ ಕ್ರೈಮ್ ಬಾಸ್ ತನ್ನ ಮಗನ ಅಂತ್ಯಸಂಸ್ಕಾರಕ್ಕೆ ತನ್ನ ಗ್ಯಾಂಗ್ ಅನ್ನು ಸೇರಿಸಿ, ಯಾರೂ ಡಿಸ್ರ್ಬ್ ಮಾಡ್ಬರ್ದು ಎಂದು ಎಚ್ಚರಿಕೆ ನೀಡುತ್ತಾನೆ. ಆದರೆ, ರಾಯ (ಯಶ್) ಬಂದು ಎಲ್ಲವನ್ನೂ ತಲೆಕೆಳಗಾಗಿಸುತ್ತಾನೆ. ಗನ್ ಫೈಟ್, ರೂಥ್ಲೆಸ್ ಆಕ್ಷನ್ನೊಂದಿಗೆ ರಾಯ ಎಲ್ಲರನ್ನ ಹೊಡೆದುರುಳಿಸುತ್ತಾನೆ. ಯಶ್ ಅವರ ಸ್ವ್ಯಾಗ್, ಇಂಟೆನ್ಸ್ ಲುಕ್ ಮತ್ತು ಕೋಲ್ಡ್ ಬ್ಲಡೆಡ್ ವಿಲನ್ ಶೇಡ್ ಟೀಸರ್ನ ಹೈಲೈಟ್ ಆಗಿದೆ. ಟೀಸರ್ ನೋಡ್ತಿದ್ರೆ, ಇದು ಡರ್ಕ್, ಇಂಟೆನ್ಸ್ ಮತ್ತು ಗ್ಯಾಂಗ್ಸ್ಟರ್ ಡ್ರಾಮಾದ ಟೋನ್ ಸೆಟ್ ಮಾಡುತ್ತಿದೆ.
ಗೀತು ಮೋಹನ್ದಾಸ್ ನರ್ದೇಶನದ ಈ ಸಿನಿಮಾ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲದಲ್ಲಿ ನರ್ಮಾಣವಾಗುತ್ತಿದೆ. ಯಶ್ ಅವರೇ ಕಥೆಯಲ್ಲಿ ಪಾಲ್ಗೊಂಡಿದ್ದು, ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್ಗಳಡಿ ನರ್ಮಾಣವಾಗುತ್ತಿದೆ. ಸಿನಿಮಾದಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ಮತ್ತು ತಾರಾ ಸುತಾರುಯಾ ನಟಿಸುತ್ತಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಗೆ ಅತಿದೊಡ್ಡ ಸಪ್ರ್ಪ್ರೈಸ್ ನೀಡಿದ್ದಾರೆ



