ಹೊಸದಿಲ್ಲಿ: ಟಿ20 ಮಾದರಿ ಯಲ್ಲೂ ಭಾರತ ತಂಡದ ನೇತೃತ್ವ ವಹಿಸುವಂತೆ ಬಿಸಿಸಿಐ ರೋಹಿತ್ ಶರ್ಮ ಅವರ ಮನವೊಲಿಸುವ ಸಾಧ್ಯತೆಯೊಂದು ಗೋಚರಿಸುತ್ತಿದೆ. ಮುಂದಿನ ಟಿ20 ವಿಶ್ವಕಪ್ಗೆ ಮಾರ್ಗಸೂಚಿಯೊಂದನ್ನು ರೂಪಿಸಿ ಬಲಿಷ್ಠ ತಂಡವೊಂದನ್ನು ರಚಿಸುವುದು ಬಿಸಿಸಿಐ ಯೋಜನೆಯಾಗಿದೆ.
ಬಿಸಿಸಿಐ ಕಾರ್ಯದರ್ಶಿ, ಆಯ್ಕೆ ಸಮಿತಿಯ ಸಲಹೆಗಾರರೂ ಆಗಿರುವ ಜೈ ಶಾ ಇದಕ್ಕೆ ಸಂಬಂಧಿಸಿದಂತೆ ಗಂಭೀರ ಚಿಂತನೆ ನಡೆಸುತ್ತಿದ್ದು, ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಅವರನ್ನು ಭೇಟಿಯಾಗಿ ಚರ್ಚಿಸಲಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಭಾರತ ತಂಡದ ಮುಂದಿನ ದಕ್ಷಿಣ ಆಫ್ರಿಕಾ ಪ್ರವಾಸಕ್ಕಾಗಿ ಈ ಯೋಜನೆ ಹಾಕಿಕೊಳ್ಳಲಾಗಿದೆ.
ರೋಹಿತ್ ವಿಶ್ವಕಪ್ನಲ್ಲಿ ತಂಡವನ್ನು ಮುನ್ನಡೆಸಿದ ರೀತಿಯಿಂದ ಬಿಸಿಸಿಐ ಪ್ರಭಾವಿತಗೊಂಡಿದೆ. ಹೀಗಾಗಿ ಮುಂದಿನ ವರ್ಷದ ಟಿ20 ವಿಶ್ವಕಪ್ಗೆ ಅವರನ್ನೇ ನಾಯಕರನ್ನಾಗಿ ನೇಮಿಸುವ ಯೋಜನೆಯಲ್ಲಿದೆ. ಹಾರ್ದಿಕ್ ಪಾಂಡ್ಯ ಮರಳಿದ ಬಳಿಕ ಏನಾದೀತು ಎಂಬ ಪ್ರಶ್ನೆ ಇದೆ. ಒಂದು ವೇಳೆ ನಾಯಕತ್ವಕ್ಕೆ ಒಪ್ಪಿದರೆ ಟಿ20 ವಿಶ್ವಕಪ್ನಲ್ಲಿ ಭಾರತ ರೋಹಿತ್ ಶರ್ಮ ಸಾರಥ್ಯದಲ್ಲೇ ಕಣಕ್ಕಿಳಿಯಲಿದೆ’ ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ.