ರಾಜ್ಕೋಟ್ನ ನಿರಂಜನ್ ಶಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ನ ಎರಡನೇ ದಿನದಾಟದ ಆರಂಭದಲ್ಲೇ ಭಾರತ ಕುಸಿತ ಕಂಡಿತು. ಆದರೆ, ರವಿಚಂದ್ರನ್ ಅಶ್ವಿನ್ ಹಾಗೂ ಪದಾರ್ಪಣೆ ಪಂದ್ಯ ಆಡುತ್ತಿರುವ ಧ್ರುವ್ ಜುರೆಲ್ ಆಸರೆಯಾಗಿ ನಿಂತಿದ್ದು ತಂಡದ ಮೊತ್ತ 400ರ ಗಡಿದಾಟಿದೆ.
ಸದ್ಯ ಭೋಜನ ವಿರಾಮದ ವೇಳೆಗೆ ಭಾರತ 7 ವಿಕೆಟ್ ಕಳೆದುಕೊಂಡು 388 ರನ್ ಗಳಿಸಿದೆ. ಅಶ್ವಿನ್ 25 ಹಾಗೂ ಧ್ರುವ್ 31 ರನ್ ಗಳಿಸಿ ಕ್ರೀಸ್ನಲ್ಲಿದ್ದರು.ಮೊದಲ ದಿನ ಭಾರತದ ಪರವಾಗಿ ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ ಶತಕ ಗಳಿಸಿದರು. ತಮ್ಮ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನು ಆಡುತ್ತಿರುವ ಸರ್ಫರಾಜ್ ಖಾನ್ ಕೂಡ ಅರ್ಧಶತಕ ಗಳಿಸಿದರು. ಇಂಗ್ಲೆಂಡ್ ಬೌಲರ್ಗಳಲ್ಲಿ ಮಾರ್ಕ್ ವುಡ್ 3 ಮತ್ತು ಟಾಮ್ ಹಾಟ್ರ್ಲಿ ಒಂದು ವಿಕೆಟ್ ಪಡೆದಿದ್ದರು.
ಭಾರತ ಆರಂಭದಲ್ಲೇ ಯಶಸ್ವಿ ಜೈಸ್ವಾಲ್ 10, ಶುಭ್?ಮನ್ ಗಿಲ್ 0 ಮತ್ತು ಪಾಟಿದಾರ್ 5 ರನ್ ವಿಕೆಟ್ ಕಳೆದುಕೊಂಡಿತು. ಈ ಸಂದರ್ಭ ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ 204 ರನ್ಗಳ ಜೊತೆಯಾಟ ಆಡಿದರು. ಈ ಜೊತೆಯಾಟ ರೋಹಿತ್ ವಿಕೆಟ್ನೊಂದಿಗೆ ಮುರಿದುಬಿತ್ತು. 131 ರನ್ಗಳಿದ್ದಾಗ ರೋಹಿತ್ ಮಾರ್ಕ್ ವುಡ್ಗೆ ವಿಕೆಟ್ ಒಪ್ಪಿಸಿದರು. ನಂತ್ ಸರ್ಫರಾಜ್ ಜಡೇಜಾ 77 ರನ್ಗಳ ಕಾಣಿಕೆ ನೀಡಿದರು.
ಇಂದು ಎರಡನೇ ದಿನ ಜಡೇಜಾ ಹಾಗೂ ಕುಲ್ದೀಪ್ ಯಾದವ್ ಹೆಚ್ಚುಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. 110 ರನ್ ಗಳಿಸಿದ್ದ ರವೀಂದ್ರ ಜಡೇಜಾ ಇಂದು ಕೇವಲ 2 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಕುಲ್ದೀಪ್ ಯಾದವ್ 4 ರನ್ಗೆ ನಿರ್ಗಮಿಸಿದರು. ಬಳಿಕ ಆರ್. ಅಶ್ವಿನ್ ಹಾಗೂ ಧ್ರುವ್ ಜುರೆಲ್ ಅರ್ಧಶತಕದ ಜೊತೆಯಾಟ ಆಡಿ ಮುನ್ನುಗ್ಗುತ್ತಿದ್ದಾರೆ.