This is the title of the web page
This is the title of the web page

ರೋಹಿತ್ ಶರ್ಮಾ ‘ಸೋಂಬೇರಿ’ ಎಂದು ಕಿಡಿ ಕಾರಿದ ನೆಟ್ಟಿಗರು!

ಓವಲ್: ಆಸ್ಟ್ರೇಲಿಯಾ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕಳಪೆ ಫೀಲ್ಡಿಂಗ್ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

ರೋಹಿತ್ ಮತ್ತು ಶ್ರಾದ್ಧೂಲ್ ಠಾಕೂರ್ ಮಿಡ್ ಆನ್ ಮತ್ತು ಮಿಡ್ ವಿಕೆಟ್ ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದರು. ಲಬುಶೇನ್ ಹೊಡೆದ ಚೆಂಡು ಇಬ್ಬರ ನಡುವೆ ಬಂದಿತ್ತು. ಆದರೆ ರೋಹಿತ್ ಬೌಂಡರಿ ಗೆರೆ ತಲುಪಬಹುದು ಎಂದು ಅದನ್ನು ಹಿಡಿಯುವ ಪ್ರಯತ್ನವನ್ನೂ ಮಾಡದೇ ಸೋಮಾರಿತನ ಪ್ರದರ್ಶಿಸಿದರು. ಆದರೆ ಶ್ರಾದ್ಧೂಲ್ ಠಾಕೂರ್ ಬಾಲ್ ಬೆನ್ನಟ್ಟಿ ಬೌಂಡರಿ ತಡೆದರು.

ಆದರೆ ರೋಹಿತ್ ರ ಈ ವರ್ತನೆಗೆ ನೆಟ್ಟಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ನಾಯಕನೇ ಈ ರೀತಿ ಸೋಮಾರಿತನ ಪ್ರದರ್ಶಿಸಿದರೆ ತಂಡದ ಗತಿಯೇನು. ಇದರಿಂದಲೇ ರೋಹಿತ್ ರ ಫಿಟ್ನೆಸ್ ಎಷ್ಟಿದೆ ಎಂಬುದು ಗೊತ್ತಾಗುತ್ತದೆ ಎಂದು ಕಿಡಿ ಕಾರಿದ್ದಾರೆ.