“ರೋಹಿತ್ ಶರ್ಮಾ ಅವರು ಖಂಡಿತವಾಗಿಯೂ ಅದ್ಭುತ ನಾಯಕ. ಆದರೆ ಕ್ರೀಡೆಯಲ್ಲಿ ಇವೆಲ್ಲಾ ಸಾಮಾನ್ಯ. ಇದು ನನಗೆ, ದ್ರಾವಿಡ್ಗೆ ಆಗಿತ್ತು, ಶುಭಮನ್ ಗಿಲ್ ಕೂಡ ೪೦ನೇ ವಯಸ್ಸಿನಲ್ಲಿ ಇದೇ ಪರಿಸ್ಥಿತಿಯನ್ನು ಎದುರಿಸುತ್ತಾರೆ.” -ಇದು ಅನುಭವಿ ಆಟಗಾರ ರೋಹಿತ್ ಶರ್ಮಾ ಅವರನ್ನು ಭಾರತ ಏಕದಿನ ತಂಡದ ನಾಯಕತ್ವದಿAದ ಕೆಳಗಿಳಿಸಿದ್ದರ ವಿಚಾರವಾಗಿನಡೆಯುತ್ತಿರುವ ಚರ್ಚೆ ಬಗ್ಗೆ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ನೀಡಿರುವ ಖಡಕ್ ಪ್ರತಿಕ್ರಿಯೆ.
ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ರೋಹಿತ್ಶರ್ಮಾ ಅವರನ್ನು ಜವಾಬ್ದಾರಿಯಿಂದ ಮುಕ್ತಗೊಳಿಸಿರುವುದು ಸರಿಯಿದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.
ಈ ಬಗ್ಗೆ ಇಂಡಿಯಾ ಟುಡೆ ಜೊತೆ ಮಾತನಾಡಿದ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ, “ರೋಹಿತ್ ಶರ್ಮಾ ಅವರ ಜೊತೆ ಮಾತನಾಡಿದ ಬಳಿಕವೇ ಈ ನಿರ್ಧಾರ ತೆಗೆದುಕೊಳ್ಲಲಾಗಿದೆ ಎಂದು ನಾನು ಖಚಿತವಾಗಿ ಹೇಳಬಲ್ಲೆ, ಅವರನ್ನು ವಜಾ ಮಾಡಿರುವ ಸಾಧ್ಯತೆಗಳಿಲ್ಲ. ಇದು ಪರಸ್ಪರ
ಒಪ್ಪಿಗೆಯ ಮೇರೆಗೆ ಆದ ಚರ್ಚೆ ಎಂದು ನಾನು ಭಾವಿಸುತ್ತೇನೆ,” ಎಂದು ಗಂಗೂಲಿ ಇಂಡಿಯಾ ಟುಡೇಗೆ ತಿಳಿಸಿದ್ದಾರೆ.
“ರೋಹಿತ್ ಒಬ್ಬ ಅದ್ಭುತ ನಾಯಕ. ಅವರು ಖಿ೨೦ ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದಿದ್ದಾರೆ. ರೋಹಿತ್ ಶರ್ಮಾ ಅವರ ಪ್ರದರ್ಶನದಲ್ಲಿ ಯಾವುದೇ ಸಮಸ್ಯೆ ಇಲ್ಲ. ೨೦೨೭ ರಲ್ಲಿ ರೋಹಿತ್ ೪೦ ವರ್ಷದವರಾಗುತ್ತಾರೆ. ಕ್ರೀಡೆಯಲ್ಲಿ ಇದು ದೊಡ್ಡ ಸಂಖ್ಯೆ. ಇದು ನನಗೆ, ದ್ರಾವಿಡ್ಗೆ ಆಗಿತ್ತು. ಎಲ್ಲರಿಗೂ ಹೀಗೆ ಆಗುತ್ತದೆ. ಶುಭಮನ್ ಗಿಲ್ ಕೂಡ ೪೦ನೇ ವಯಸ್ಸಿನಲ್ಲಿ ಇದೇ ಪರಿಸ್ಥಿತಿಯನ್ನು ಎದುರಿಸುತ್ತಾರೆ.” ಎಂದು ತಿಳಿಸಿದರು. ಶುಭಮನ್ ಗಿಲ್ ನೇಮಕಕ್ಕೆ ಸಮರ್ಥನೆ ಇದೇವೇಳೆ ಯುವ ಬ್ಯಾಟರ್ ಶುಭಮನ್ ಗಿಲ್ ಅವರನ್ನು ಭಾರತದ ನೂತನ ಏಕದಿನ ನಾಯಕರನ್ನಾಗಿ ನೇಮಿಸಿರುವ ಬಿಸಿಸಿಐ ಆಯ್ಕೆ ಸಮಿತಿಯ ನಿರ್ಧಾರವನ್ನು ಸಹ ಗಂಗೂಲಿ ಬೆಂಬಲಿಸಿದರು.
“ಗಿಲ್ ಅವರನ್ನು ಮುಂದುವರಿಸುವುದೇನೂ ಕೆಟ್ಟ ನಿರ್ಧಾರವಲ್ಲ. ಅವರು ಇಂಗ್ಲೆAಡ್ನಲ್ಲಿ ಸಾಕಷ್ಟು ಉತ್ತಮ ಪ್ರದರ್ಶನವನ್ನು ತೋರಿಸಿದ್ದಾರೆ. ಇದು ನ್ಯಾಯಯುತವಾದ ನಿರ್ಧಾರ ಎಂಬುದು ನನ್ನ ಭಾವನೆ. ರೋಹಿತ್ ಶರ್ಮಾ ಅವರ ಆಡುತ್ತಲೇ ಇರಬಹುದು. ಆ ವೇಳೆ ನೀವು ಒಬ್ಬ ಯುವ ನಾಯಕನನ್ನು ತಯಾರು ಮಾಡಬಹುದು,” ಎಂದು ಗಂಗೂಲಿ ಹೇಳಿದ್ದಾರೆ. “ಇದು ಬಹಳ ಬೇಗನೆ ಆದರೂ, ಅವರು ಆಡಿದ ರೀತಿ ಮತ್ತು ತಂಡವನ್ನು ಮುನ್ನಡೆಸಿದ ರೀತಿ ಅಸಾಧಾರಣವಾಗಿದೆ. ಆಟಗಾರನಾಗಿಯೂ, ನಾಯಕನಾಗಿಯೂ ಅವರಿಗೆ ಸಾಕಷ್ಟು ಸಾಮರ್ಥ್ಯವಿದೆ.” ಎಂದು ಗಿಲ್ ಅವರ ನೇಮಕವನ್ನು ಸಮರ್ಥಿಸಿಕೊಂಡರು.
ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರೂ ಇದೇ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ರೋಹಿತ್ ದೇಶೀಯ ಕ್ರಿಕೆಟ್ ನಲ್ಲಿ ಆಡಲಿ ರೋಹಿತ್ ಅವರ ಭವಿಷ್ಯದ ಬಗ್ಗೆ ಮಾತನಾಡಿದ ಗಂಗೂಲಿ “ಹೌದು, ೪೦ ವರ್ಷಗಳು ಬಹಳಷ್ಟು ವಯಸ್ಸು. ಅವರು ಎಷ್ಟು ಫಿಟ್ ಆಗಿರುತ್ತಾರೆ, ಎಷ್ಟು ಕ್ರಿಕೆಟ್ ಆಡುತ್ತಾರೆ ಮತ್ತು ಎಷ್ಟು ರನ್ ಗಳಿಸುತ್ತಾರೆ ಎಂಬುದರ ಮೇಲೆ ಇದು ಅವಲಂಬಿತವಾಗಿರುತ್ತದೆ ಎಂದರು.