ರೋಲರ್ ಸ್ಕೇಟಿಂಗ್ ಫೆಡರೇಶನ್ ಆಫ್ ಇಂಡಿಯಾ 2023 ವತಿಯಿಂದ ಡಿಸೆಂಬರ 18 ರಿಂದ 22 ರವರೆಗೆ ಚೆನೈನಲ್ಲಿ ಹಮ್ಮಿ ಕೊಳ್ಳಲಾಗಿದ್ದ 61ನೇ ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಸ್ಪರ್ಧೆಯಲ್ಲಿ ತ್ರೀಶಾ. ಪಿ. ಜಡಾಲಾ ಮತ್ತು ಸಾಕ್ಷಿ .ಪಿ. ಕಡ್ಡಿ ರೋಲರ್ ಡರ್ಬಿಯಲ್ಲಿ ಕಂಚಿನ ಪದಕ ಪಡೆದು ವಿಜೇತರಾಗಿದ್ದಾರೆ.
ತರಬೇತಿದಾರ ಅಕ್ಷಯ ಸೂರ್ಯವಂಶಿ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿದ್ದಾರೆ. ಈ ಸಾಧನೆಯನ್ನು ಕರ್ನಾಟಕ ರೋಲರ್ ಸ್ಕೇಟಿಂಗ್ ಪ್ರಧಾನ ಕಾರ್ಯದರ್ಶಿಯವರಾದ ಇಂಧೂದರ ಸೀತಾರಾಂ, ಹುಬ್ಬಳ್ಳಿ ರೋಲರ್ ಸ್ಕೇಟಿಂಗ್ ಅಕಾಡೆಮಿ ಸದಸ್ಯರು , ಪೋಷಕರು, ಧಾರವಾಡ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಅಧ್ಯಕ್ಷರು, ಕಾರ್ಯದರ್ಶಿಗಳು ಪ್ರಶಂಸಿಸಿ, ಹರ್ಷ ವ್ಯಕ್ತಪಡಿಸಿದ್ದಾರೆ.