ಬೆಂಗಳೂರು: ಭಾರತದ ಅತಿದೊಡ್ಡ ಡಿ2ಸಿ ನಿದ್ರೆ ಹಾಗೂ ಗೃಹ ಪರಿಹಾರಗಳ ಸರಬರಾಜು ಸಂಸ್ಥೆಗಳ ಪೈಕಿ ಒಂದಾದ ವೇಕ್ಫಿಟ್.ಕೊ(Wakefit.co), ತನ್ನ ಗ್ರೇಟ್ ಇಂಡಿಯನ್ ಸ್ಲೀಪ್ ಸ್ಕೋರ್ಕಾರ್ಡ್ (GISS) 2024ದ 7ನೆ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಈ ವರ್ಷದ ಸರ್ವೇಕ್ಷಣೆಯು, ಬೆಂಗಳೂರಿಗರ ನಿದ್ರಾ ಪ್ರವೃತ್ತಿಗಳು ಹಾಗೂ ಪ್ಯಾಟರ್ನ್ಗಳ ಸ್ಥಿತಿಗತಿಯ ಕುರಿತು ಅಚ್ಚರಿ ಮೂಡಿಸುವ ವಿವರಗಳನ್ನು ಬಹಿರಂಗಪಡಿಸಿದೆ.
ಎದ್ದ ನಂತರವೂ ಬೆಚ್ಚಿಬೀಳಿಸುವ 46% ಮಂದಿಯಲ್ಲಿ ಹೊಸತನ ಇರುವುದಿಲ್ಲ ಎಂದು ವರದಿಯ ಶೋಧಗಳು ತಿಳಿಸುತ್ತವೆ. ಮಲಗುವ ಮುನ್ನ ತಮ್ಮ ಮೊಬೈಲ್ಗಳನ್ನು ಬಳಸುತ್ತೇವೆ ಎಂದು 90% ಪ್ರತಿಕ್ರಿಯಾದಾರರು ಸೂಚಿಸಿದ್ದಾರೆ ಎಂದೂ ವರದಿ ತಿಳಿಸುತ್ತದೆ. ಕೆಳಗೆ, ಬೆಂಗಳೂರಿನಿಂದ ಬಂದ ಹೆಚ್ಚಿನ ಶೋಧಗಳ ವಿವರಗಳನ್ನು ಒದಗಿಸಲಾಗಿದೆ.
ತಡವಾದ ರಾತ್ರಿಗಳು, ನಿತ್ರಾಣ ಬೆಳಗುಗಳು:
ಬೆಂಗಳೂರಿನಲ್ಲಿ, 38% ಮಂದಿ, ರಾತ್ರಿ 11ರ ನಂತರ ನಿದ್ರಿಸುತ್ತಾರೆ. ನಿತ್ರಾಣಗೊಂಡು ಏಳುವ ಬೆಂಗಳೂರಿಗರ ಸಂಖ್ಯೆ 2023ದಲ್ಲಿ 34% ಇದ್ದದ್ದು, ಈ ವರ್ಷ 46%ಗೆ ಏರಿದೆ ಎಂದು ಕೂಡ ವರದಿಯು ಬಹಿರಂಗಪಡಿಸುತ್ತದೆ. ಆಸಕ್ತಿಕರ ವಿಷಯವೆಂದರೆ, 29% ಬೆಂಗಳೂರಿನ ನಿವಾಸಿಗಳು, ತಮ್ಮ ಭವಿಷ್ಯತ್ತಿನ ಬಗ್ಗೆ ಚಿಂತಿಸುತ್ತಾ ತಡರಾತ್ರಿಯವರೆಗೂ ಎದ್ದಿರುತ್ತಾರೆ. ಈ ನಗರದ ನಿವಾಸಿಗಳು, ತಡವಾದ ರಾತ್ರಿಗಳ ಕಾರಣದಿಂದಾಗಿ ತಮ್ಮ ನಿದ್ರಾ ಆರೋಗ್ಯದೊಂದಿಗೆ ರಾಜಿ ಮಾಡಿಕೊಳ್ಳುತ್ತಿರಬಹುದು, ಮತ್ತು ಇದು ಒಟ್ಟಾರೆ ಹಗಲಿನ ಉತ್ಪಾದಕತೆ ಮತ್ತು ಸ್ವಾಸ್ಥ್ಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತಿರವಹುದು ಎಂಬುದನ್ನು ಇದು ಸೂಚಿಸುತ್ತದೆ.
ಗ್ರೇಟ್ ಇಂಡಿಯನ್ ಸ್ಲೀಪ್ ಸ್ಕೋರ್ಕಾರ್ಡ್ ಒಂದು ನಿರಂತರವಾಗಿ ನಡೆಯುತ್ತಿರುವ ಸರ್ವೇಕ್ಷಣೆಯಾಗಿದ್ದು, 2024ರ ಆವೃತ್ತಿಯು, ಮಾರ್ಚ್ 2023ದಿಂದ ಫೆಬ್ರವರಿ 2024 ವರೆಗೆ 10,000+ ಪ್ರತಿಕ್ರಿಯೆಗಳನ್ನು ಪಡೆದುಕೊಂಡು ದಾಖಲಿಸಿತ್ತು. ಇದು, ಎಲ್ಲಾ ಭಾರತೀಯ ನಗರಗಳು, ವಿವಿಧ ವಯೋಗುಂಪುಗಳು ಹಾಗೂ ಹಲವಾರು ಭೌಗೋಳಿಕ ಪ್ರದೇಶಗಳ ಪ್ರತಿಕ್ರಿಯಾದಾರರನ್ನು ಒಳಗೊಂಡಿದೆ.
ಸಂಸ್ಥೆಯು ಇತ್ತೀಚೆಗೆ ದಿ ಹ್ಯಾಪ್ಪಿ ಹೋಮ್ ಇಂಡೆಕ್ಸ್ ಕೂಡ ಪ್ರಾರಂಭಿಸಿದ್ದು, ಒಂದು ಸಂತೋಷಕರವಾದ ಹಾಗೂ ಸುರಕ್ಷಿತವಾದ ವಾಸಸ್ಥಳ ಮಾಡುವುದಕ್ಕೆ ಕೊಡುಗೆ ಸಲ್ಲಿಸುವ ಹಲವಾರು ಅಂಶಗಳ ನಡುವಿನ ಅಂತರಸಂಬಂಧವನ್ನು ಅರ್ಥಮಾಡಿಕೊಳ್ಳುವುದಕ್ಕಾಗಿ ಇದನ್ನು ವಿನ್ಯಾಸಗೊಳಿಸಲಾಗಿತ್ತು. ಭಾರತದಾದ್ಯಂತ ನಿದ್ರೆ ಹಾಗೂ ಗೃಹ ಪರಿಹಾರಗಳ ಕುರಿತು ತನ್ನ ಶ್ರೋತೃಗಳಿಗೆ ಅರಿವು ಮೂಡಿಸಿ ಅರ್ಥಪೂರ್ಣ ಸಂವಾದಗಳನ್ನು ಸೃಷ್ಟಿಸುವ ಗುರಿಯಿರುವಂತಹ ಆಲೋಚನಾ ನಾಯಕತ್ವ-ನಿರ್ದೇಶಿತ ಕಂಟೆಂಟ್ ಸೃಷ್ಟಿಸಲು Wakefit.co ಶ್ರಮಿಸುತ್ತಿದೆ.