ವಿಜಯಪುರ: ಬಂಧನಕ್ಕೆ ತೆರಳಿದ್ದ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ರೌಡಿಶೀಟರ್ ಒಬ್ಬ ಪೊಲೀಸರ ಗುಂಡಿಗೆ ಬಲಿಯಾದ ಘಟನೆ ಸಿಂದಗಿ ತಾಲೂಕಿನ ರಾಂಪೂರ ಗ್ರಾಮದಲ್ಲಿ ಹೊರ ಭಾಗದಲ್ಲಿ ನಡೆದಿದೆ. ಯುನಸ್ ಪಟೇಲ್ (೩೫) ಎನ್ ಕೌಂಟರ್ಗೆ ಬಲಿಯಾದ ನಟೋರಿ ಯಸ್ ರೌಡಿಯಾ ಗಿದ್ದಾನೆ.
ಈತ ವಿಜಯಪುರ ನಗರದ ಗಾಂಧಿ ಚೌಕ್ ವ್ಯಾಪ್ತಿಯಲ್ಲಿ ಅ.೧೭ ರಂದು ಓರ್ವನಿಗೆ ಚಾಕು ತೋರಿಸಿ ೨೫ ಸಾವಿರ ಹಣ ದರೋಡೆ ಮಾಡಿದ್ದ. ನಂತರ ಆತನ ಸ್ಕೂಟಿಯನ್ನೇ ದರೋಡೆ ಮಾಡಿ ಪರಾರಿಯಾಗಿದ್ದ. ಈ ಸಂಬಂಧ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿ ಆಲಮೇಲ ತಾಲೂ ಕಿನ ದೇವಣಗಾಂವ್ ಗ್ರಾಮದತ್ತ ತೆರಳುತ್ತಿರೋ ಮಾಹಿತಿ ಅರಿತ ಪೊಲೀಸರು ಸೆರೆ ಹಿಡಿಯಲು ತೆರಳಿದ್ದರು.