ಅಹ್ಮದಾಬಾದ್: ಆರ್ಸಿಬಿಯ ಮತ್ತೊಂದು ಕಪ್ ಗೆಲವಿನ ಕನಸು ಛಿದ್ರಗೊಂಡಿದೆ. ಲೀಗ್ ಹಂತದಲ್ಲಿ ಸತತ 6 ಪಂದ್ಯಗಳನ್ನು ಗೆದ್ದು ಪ್ಲೇ ಆಫ್ ಪ್ರವೇಶಿಸಿದ ಸಂಭ್ರಮದಲ್ಲಿದ್ದ ಬೆಂಗಳೂರು ತಂಡ ಬುಧವಾರದ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ಗೆ 4 ವಿಕೆಟ್ಗಳಿಂದ ಮಂಡಿಯೂರಿ ಕೂಟದಿಂದ ನಿರ್ಗಮಿಸಿತು.
ಶುಕ್ರವಾರದ ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ ಹೈದರಾಬಾದ್-ರಾಜಸ್ಥಾನ್ ಮುಖಾಮುಖಿ ಆಗಲಿವೆ.ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಆರ್ಸಿಬಿ 8 ವಿಕೆಟಿಗೆ 172 ರನ್ ಗಳಿಸಿತು. ರಾಜಸ್ಥಾನ್ 19 ಓವರ್ಗಳಲ್ಲಿ 6 ವಿಕೆಟಿಗೆ 174 ರನ್ ಬಾರಿಸಿ ಜಯಭೇರಿ ಮೊಳಗಿಸಿತು.ರಾಜಸ್ಥಾನ್ ಚೇಸಿಂಗ್ ಬಿರುಸಿನಿಂದಲೇ ಕೂಡಿತ್ತು. ಜೈಸ್ವಾಲ್ (45)-ಕ್ಯಾಡ್ಮೋರ್ (20) 46 ರನ್ ಜತೆಯಾಟ ನಿಭಾಯಿಸಿದರು.
ಜೈಸ್ವಾಲ್-ಸ್ಯಾಮ್ಸನ್ ಜತೆಯಾಟದಲ್ಲಿ 35 ರನ್ ಒಟ್ಟುಗೂಡಿತು. 112ಕ್ಕೆ 4 ವಿಕೆಟ್ ಬಿದ್ದಾಗ ಪಂದ್ಯ ಕುತೂಹಲ ಘಟ್ಟ ತಲುಪಿತು. ಆದರೆ ಪರಾಗ್-ಹೆಟ್ಮೈರ್ ಸಿಡಿದು ನಿಂತು 45 ರನ್ ಜತೆಯಾಟ ನಿಭಾಯಿಸಿದರು.ಆರ್ಸಿಬಿ ಆಸೆಯೆಲ್ಲ ನೆಲಸಮವಾಯಿತು.ಆರ್ಸಿಬಿ ನಿಧಾನ ಆರಂಭ: ಆರ್ಸಿಬಿ ಆರಂಭ ನಿಧಾನ ಗತಿಯಿಂದ ಕೂಡಿತ್ತು. ಬೌಲ್ಟ್ ಎಸೆತಗಳು ಆರಂಭದಲ್ಲೇ ಭಾರೀ ಸ್ವಿಂಗ್ ಆಗುತ್ತಿದ್ದವು.
ಹೀಗಾಗಿ ರನ್ ಗಳಿಕೆ, ದೊಡ್ಡ ಹೊಡೆತ ಸುಲಭವಾಗಿರಲಿಲ್ಲ. ಕೊಹ್ಲಿ-ಫಾ ಡು ಪ್ಲೆಸಿಸ್ ಬಹಳ ಎಚ್ಚರಿಕೆಯಿಂದ ಆಡುತ್ತ 4.4 ಓವರ್ಗಳನ್ನು ನಿಭಾಯಿಸಿದರು. 37 ರನ್ ಒಟ್ಟುಗೂಡಿತು. ಆಗ ರೋವ¾ನ್ ಪೊವೆಲ್ ಪಡೆದ ಅದ್ಭುತ ಕ್ಯಾಚ್ಗೆ ಡು ಪ್ಲೆಸಿಸ್ (17) ವಿಕೆಟ್ ಉರುಳಿತು. ಬೌಲ್ಟ್ ಮೊದಲ ಯಶಸ್ಸು ತಂದಿತ್ತರು.
ಕ್ಯಾಮರಾನ್ ಗ್ರೀನ್ ಮತ್ತು ರಜತ್ ಪಾಟಿದಾರ್ ಕೂಡ ರಾಜಸ್ಥಾನ್ ಬೌಲಿಂಗ್ ದಾಳಿಯನ್ನು ಎಚ್ಚರಿಕೆಯಿಂದ ನಿಭಾಯಿಸತೊಡಗಿದರು.
ಅರ್ಧ ಹಾದಿ ಕ್ರಮಿಸುವಾಗ ಆರ್ಸಿಬಿ 2 ವಿಕೆಟಿಗೆ 76 ರನ್ ಮಾಡಿತ್ತು. 13ನೇ ಓವರ್ನಲ್ಲಿ ಅಶ್ವಿನ್ ಆರ್.ಸಿಬಿಗೆ ಅವಳಿ ಆಘಾತವಿಕ್ಕಿದರು. ಸತತ ಎಸೆತಗಳಲ್ಲಿ ಗ್ರೀನ್ ಮತ್ತು ಮ್ಯಾಕ್ಸ್ ವೆಲ್ ಅವರಿಗೆ ಪೆವಿಲಿಯನ್ ಹಾದಿ ತೋರಿಸಿದರು. ಗ್ರೀನ್ ಗಳಿಕೆ 27 ರನ್.