ಚಿಂತಾಮಣಿಯ ಪ್ರತಿಷ್ಠಿತ ರಾಯಲ್ ವಿದ್ಯಾಸಂಸ್ಥೆಯ ಪ್ರೌಢಶಾಲಾ ವಿಭಾಗದ ೧೪ ಹಾಗೂ ೧೭ನೇ ವಯಸ್ಸಿನ ಒಳಗಿರುವ ಮಕ್ಕಳ ಟೇಬಲ್ ಟೆನಿಸ್ ಜಿಲ್ಲಾಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿದ್ಯಾರ್ಥಿಗಳು ವಿಭಾಗÀ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈ ಕ್ರೀಡೆಗಳಲ್ಲಿ ಪ್ರೌಡಶಾಲಾ ವಿಭಾಗದ ೧೭ ವಯೋಮಿತಿ ಒಳಗಿನ ಸ್ಪರ್ಥೆಯಲ್ಲಿ ಮಣಿಕಂಠ ಮತ್ತು ತಂಡ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ. ೧೪ ವಯೋಮಿತಿ ಒಳಗಿನ ಸ್ಪರ್ಥೆಯಲ್ಲಿ ಹಿರಿಯ ಪ್ರಾಥಮಿಕ ಅಂತದ ಮಟ್ಟದಲ್ಲಿ ಹರಿವಿಲಾಸ್ ಮತ್ತು ತಂಡ ಪ್ರಥಮ ಸ್ಥಾನ ಪಡೆದಿದ್ದಾರೆ.
ವಿಭಾಗ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ದೈಹಿಕಶಿಕ್ಷಕರಾದ ನಾಗಮಣಿ ಮತ್ತು ಶ್ರೀನಿವಾಸ್ ರವರನ್ನು ಸಮಸ್ಥೆಯ ಅಧ್ಯಕ್ಷರಾದ ರಾಮಕೃಷ್ಣ ಕೆ, ಕಾರ್ಯದರ್ಶಿ ಶ್ರೀಮತಿ ಪ್ರೇಮಲತಾ ಕೆ ಆರ್ ಅಭಿನಂದಿಸಿದ್ದಾರೆ.