ಪ್ಯಾರಿಸ್: ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಬಹುಮಾನ ಮೊತ್ತವನ್ನು ಸಂಘಟಕರು ಹೆಚ್ಚಿಸಿದ್ದು, ಈ ಬಾರಿ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್ ವಿಭಾಗದ ಚಾಂಪಿಯನ್ನರು ತಲಾ ರೂ.20.60 ಕೋಟಿ ಪಡೆಯಲಿದ್ದಾರೆ.
‘ಈ ಬಾರಿಯ ಟೂರ್ನಿಯು ಒಟ್ಟು ರೂ.444 ಕೋಟಿ ಬಹುಮಾನ ಮೊತ್ತ ಒಳಗೊಂಡಿರಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಬಹುಮಾನ ಮೊತ್ತವನ್ನು ಶೇ 12.3 ಹೆಚ್ಚಿಸಲಾಗಿದೆ’ ಎಂದು ಸಂಘಟಕರು ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದ್ಧಾರೆ. 2022ರ ಟೂರ್ನಿಯ ಸಿಂಗಲ್ಸ್ ವಿಭಾಗದ ಚಾಂಪಿಯನ್ನರು ರೂ.19.69 ಕೋಟಿ ನಗದು ಬಹುಮಾನ ಪಡೆದುಕೊಂಡಿದ್ದರು.
‘ಸಿಂಗಲ್ಸ್ ವಿಭಾಗದ ಒಟ್ಟು ಬಹುಮಾನ ಮೊತ್ತವನ್ನು ಕಳೆದ ಬಾರಿಗಿಂತ ಶೇ 9.1 ಹೆಚ್ಚಿಸಲಾಗಿದೆ. ಮೊದಲ ಮೂರು ಸುತ್ತುಗಳಲ್ಲಿ ಸೋಲು ಅನುಭವಿಸುವ ಆಟಗಾರರು ಪಡೆಯುವ ಮೊತ್ತ ಈ ವರ್ಷ ಶೇ 11 ರಿಂದ 13 ಏರಿಕೆಯಾಗಿದೆ’ ಎಂದಿದ್ದಾರೆ. ಫ್ರೆಂಚ್ ಓಪನ್ ಟೂರ್ನಿ ಮೇ 28 ರಿಂದ ಜೂನ್ 11ರ ವರೆಗೆ ನಡೆಯಲಿದೆ.
Leave a Review