ರಘು ಕೋವಿನಿರ್ದೇಶನದ ಚಿತ್ರದ ಮೂಲಕ ಡೈರೆಕ್ಟರ್ ಕುರ್ಚಿ ಅಲಂಕರಿಸಿದ್ದಾರೆ. ಅವರ ಚೊಚ್ಚಲ ಸಿನಿಮಾದ ಟೈಟಲ್ ಮೋಷನ್ ಪೋಸ್ಟರ್ ಬಿಡುಗಡೆ ಆಗಿದೆ. ನಟ ರಾಮ್ ಗೌಡ
ಮಾತನಾಡಿ, ರಘು ಅವರು ಬಂದು ಕಥೆ ಹೇಳಿದಾಗ ನನಗೆ ತುಂಬಾ ಇಷ್ಟವಾಯ್ತು. ನನ್ನ ಪಾತ್ರ ಹಾಗೂ ಇಡೀ ತಂಡ ಚೆನ್ನಾಗಿದೆ. ಆರ್ ಪಿ ಸರ್ ಮ್ಯೂಸಿಕ್ ಮಾಡ್ತಾ ಇರುವುದು ನನಗೆ ಖುಷಿಯಾಯ್ತು. ನಿರ್ಮಾಪಕರು ತುಂಬಾ ಫ್ಯಾಷನೇಟ್ ಆಗಿದ್ದಾರೆ. ಚಿತ್ರಕ್ಕೆ ಏನೂ ಬೇಕು ಎಲ್ಲವನ್ನೂ ಕೊಟ್ಟಿದ್ದಾರೆ ಎಂದರು.
ನಿರ್ದೇಶಕ ರಘು ಕೋವಿ ಮಾತನಾಡಿ, ನನ್ನ ಕನಸಿಗೆ ಇಬ್ಬರು ನಿರ್ಮಾಪಕರು ಸಾಥ್ ಕೊಟ್ಟಿದ್ದಾರೆ. ಒಂದು ಲವ್ ಸ್ಟೋರಿಯನ್ನು ಮ್ಯೂಸಿಕ್ ಮೂಲಕ ಹೇಳಲು ಸಾಧ್ಯವಿದೆ. ಅದನ್ನು ಆರ್ ಪಿ ಪಟ್ನಾಯಕ್ ಅವರಂತಹ ದೊಡ್ಡ ಮ್ಯೂಸಿಕ್ ಡೈರೆಕ್ಟರ್ ಹೇಳಿದ್ದಾರೆ. ನಾಯಕ ರಾಮ್ ಕಥೆ ಮತ್ತು ಕಲೆ ಬಗ್ಗೆ ಆಸಕ್ತಿ ಇರುವ ವ್ಯಕ್ತಿ. ಹೈದ್ರಾಬಾದ್ ನಲ್ಲಿ ನಡೆದ ನೈಜ ಘಟನೆಯನ್ನು
ರೂಬಿ ಸಿನಿಮಾ ಮೂಲಕ ಹೇಳಲು ಹೊರಟ್ಟಿದ್ದೇವೆ. ಚಿತ್ರದಲ್ಲಿ ಐದು ಹಾಡುಗಳು ಇವೆ. ಶೇ. ೫೦ರಷ್ಟು ಶೂಟಿಂಗ್ ಮುಕ್ತಾಯಗೊಂಡಿದೆ ಎAದರು. ಸಂಗೀತ ನಿರ್ದೇಶಕ ಆರ್ ಪಿ ಪಟ್ನಾಯಕ್ ಮಾತನಾಡಿ, ಕಥೆ ತುಂಬಾ ಚೆನ್ನಾಗಿದೆ. ಇದು ಕನ್ನಡ ಇಂಡಸ್ಟಿçಯಲ್ಲಿ ಬೆಸ್ಟ್ ಸಿನಿಮಾವಾಗಲಿದೆ. ರಾಮ್-ವೈಭವಿ ರಾಷ್ಟçಪ್ರಶಸ್ತಿ ಸಿಗುವಷ್ಟು ಚೆನ್ನಾಗಿ ನಟಿಸಿದ್ದಾರೆ.
ಈ ಮ್ಯೂಸಿಕಲ್ ಚಿತ್ರದ ಭಾಗವಾಗಿ ಇರುವುದು ನನಗೆ ತುಂಬಾ ಖುಷಿ ಇದೆ. ಚಿತ್ರದಲ್ಲಿ ಒಳ್ಳೆ ಟೆಕ್ನಿಷಿಯನ್ ತಂಡವಿದೆ ಎಂದರು. ರಾಮ್ ಗೌಡ ರೂಬಿಯಲ್ಲಿ ನಾಯಕರಾಗಿ ಅಭಿನಯಿಸುತ್ತಿದ್ದು, ವೈಭವಿ ಶಾಂಡಿಲ್ಯ ನಾಯಕಿಯಾಗಿದ್ದಾರೆ. ಆರ್ಪಿ ಪಟ್ನಾಯಕ್ ರೂಬಿಗೆ ಸಂಗೀತ ಒದಗಿಸಿದ್ದಾರೆ. ಛಾಯಾಗ್ರಾಹಕ ವೆಂಕಟೇಶ್ ಅಂಗುರಾಜ್ ದೃಶ್ಯಗಳನ್ನು ಸೆರೆ ಹಿಡಿಯುತ್ತಿದ್ದಾರೆ.



