ಆಡಿದ ಎರಡೂ ಪಂದ್ಯಗಳನ್ನು ಸೋತಿರುವ ಕೋಲ್ಕತಾ ನೈಟ್ ರೈಡರ್ಸ್ ತಂಡವು ಆಡಿರುವ ಎರಡೂ ಪಂದ್ಯಗಳನ್ನು ಗೆದ್ದರುವ ಬಲಿಷ್ಠ ಪಂಜಾಬ್ ಕಿಂಗ್ಸ್ ವಿರುದ್ಧ ಇದೀಗ ಸೆಣಸಾಟಕ್ಕೆ ಸಿದ್ಧವಾಗಿದೆ. ಐತಿಹಾಸಿಕ ಈಡನ್ ಗಾರ್ಡನ್ ಪಿಚ್ ನಲ್ಲಿ ಏಪ್ರಿಲ್ 6ರ ಸೋಮವಾರದಂದು ನಡೆಯಲಿರುವ ಪಂದ್ಯವನ್ನು ಗೆದ್ದು ಗೆಲುವಿನ ಹಾದಿಯನ್ನು ಕಂಡುಕೊಳ್ಳಬೇಕು ಎಂಬ ನಿರೀಕ್ಷೆಯಲ್ಲಿ ಕೆಕೆಅರ್ ಕಣಕ್ಕಿಳಿಯುತ್ತಿದೆ. ಇದೇ ವೇಳೆ ಪಂಜಾಬ್ ಕಿಂಗ್ಸ್ ಸತತ ಮೂರು ಪಂದ್ಯಗಳನ್ನು ಗೆದ್ದು ಐಪಿಎಲ್ ಅಂಕಪಟ್ಟಿಯಲ್ಲಿ ತನ್ನ ಸ್ಥಾನವನ್ನು ಉತ್ತಮಪಡಿಸಿಕೊಳ್ಳುವತ್ತ ದೃಷ್ಟಿ ನೆಟ್ಟಿದೆ.
ಕೋಲ್ಕತಾ ತಂಡದ ವಿಚಾರಕ್ಕೆ ಬಂದಾಗ ಕಳೆದ ಸೀಸನ್ ನಲ್ಲಿ ಶ್ರೇಯಸ್ ಅಯ್ಯರ್ ತಂಡವನ್ನು ತೊರೆದ ಬಳಿಕ ಎಲ್ಲವೂ ಅಂದುಕೊAಡAತೆ ನಡೆಯುತ್ತಿಲ್ಲ. ನಾಯಕ ಅಜಿಂಕ್ಯ ರಹಾನೆ ವಿಚಾರವಾಗಿಯೂ ಅಪಸ್ವರಗಳು ಕೇಳಿಬರುತ್ತಿರುವುದು ತಂಡದ ಆತ್ಮವಿಶ್ವಾಸಕ್ಕೂ ಪೆಟ್ಟು ನೀಡುತ್ತಿದೆ. ಒಂದು ವೇಳೆ ಈ ಹೊತ್ತಲ್ಲಿ ಫ್ರಾಂಚೈಸಿಯು ನಾಯಕತ್ವದ ಬದಲಾವಣೆ ಮಾಡಲು ಹೊರಟು ರಿಂಕು ಸಿಂಗ್ ಅವರನ್ನು ನಾಯಕ ಪಟ್ಟದಲ್ಲಿ ಕುಳ್ಳಿರಿಸಿದರೆ ಅದು ತಂಡದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆಂಬುದನ್ನು ಊಹಿಸುವುದು ಸಹ ಕಷ್ಟ. ಹೀಗಾಗಿ ಏನೇ ಮಾತುಗಳು ಕೇಳಿಬಂದರೂ ಟೂರ್ನಿಯ ಮಧ್ಯೆಯೇ ನಾಯಕತ್ವ ಬದಲಾವಣೆಯ ಸಾಹಸವನ್ನು ಕೆಕೆಆರ್ ತಂಡದ ಮ್ಯಾನೇಜ್ ಮೆಂಟ್ ಮಾಡಲಿಕ್ಕಿಲ್ಲ. ಹೀಗಿರುವಾಗ ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ ವಿರುದ್ಧದ ಒಂದು ಗೆಲುವು ಕೋಲ್ಕತಾ ಕಳೆದುಕೊಂಡ ಮಾನವನ್ನು ಮರಳಿ ಪಡೆಯಲು ಹೊಸ ದಾರಿಯನ್ನು ನಿರ್ಮಿಸೀತು.ಕೋಲ್ಕತಾಗೆ ಬೌಲಿಂಗ್ ಚಿಂತೆ ಇನ್ನು ತಂಡಗಳ ಬಲಾಬಲಗಳ ಕಡೆಗೆ ಗಮನ ಹರಿಸಿದರೆ, ನಾಯಕ ಅಜಿಂಕ್ಯ ರಹಾನೆ ಅವರು ಮುಂಬೈ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಗಳಿಸಿ ಮಿಂಚಿದ್ದರು. ಅವರಿಂದ ತಂಡ ಅಂತಹದ್ದೇ ಇನ್ನಿಂಗ್ಸ್ ಅನ್ನು ಎದುರು ನೋಡುತ್ತಿದೆ. ಇನ್ನು ಅಂಗರಿಕ್ಷ್ ರಘುವಂಶಿ ಉತ್ತಮ ಫಾರ್ಮ್ ನಲ್ಲಿರುವುದು ತಂಡಕ್ಕೆ ಪ್ಲಸ್ ಪಾಯಿಂಟ್. ಬೌಲಿಂಗ್ ವಿಭಾಗದಲ್ಲಿ ಮಾತ್ರ ಬಹಳ ಸಮಸ್ಯೆಯಿದೆ. ಆಕಾಶ್ ದೀಪ್, ಹರ್ಷಿತ್ ರಾಣಾ ಅವರ ಅನುಪಸ್ಥಿತಿ ತಂಡವನ್ನು ಕಾಡುತ್ತಿದೆ. ಮಿಸ್ಟರಿ ಸ್ಪಿನ್ನರ್ ಗಳಾದ ವರುಣ್ ಚಕ್ರವರ್ತಿ, ಸುನಿಲ್ ನರೈನ್ ಅವರಿಂದ ಮ್ಯಾಚ್ ವಿನ್ನಿಂಗ್ ಪ್ರದರ್ಶನಗಳು ಬಾರದೇ ಇರುವುದು ದೊಡ್ಡ ತಲೆನೋವಾಗಿದೆ.ಪಿಚ್ ವರದಿ ಈಡನ್ ಗಾರ್ಡನ್ ಕ್ರೀಡಾಂಗಣದ ಪಿಚ್ ಚುಟುಕು ಕ್ರಿಕೆಟ್ ಹೇಳಿ ಮಾಡಿಸಿದಂತಿದೆ. ಬ್ಯಾಟರ್ ಗಳು ಪಂದ್ಯದುದ್ದಕ್ಕೂ ಇಲ್ಲಿ ರನ್ ಹೊಳಯನ್ನೇ ಹರಿಸಬಹುದು. ಬೌಂಡರಿ ಗಾತ್ರ ಸಹ 65 ರಿಂದ 68 ಮೀಟರ್ಗಳಿಗೆ ಸೀಮಿತವಾಗಿರುವುದರಿಂದ ಸಿಕ್ಸರ್ ಬಾರಿಸಲು ಬ್ಯಾಟರ್ ಗಳು ಹೆಚ್ಚು ಕಷ್ಚ ಪಡಬೇಕಿಲ್ಲ. ಇಲ್ಲಿ ಸರಾಸರಿ ಸ್ಕೋರ್ 209 ರನ್ಗಳ ಬೃಹತ್ ಪ್ರಮಾಣದ್ದಾಗಿದೆ ಬೌಲರ್ ಗಳಿಗೆ ಪಿಚ್ ದೊಡ್ಡ ನೆರವನ್ನೇನೂ ಕೊಡದು.
ಈಡನ್ ಗಾರ್ಡನ್ಸ್ನಲ್ಲಿ ರನ್ ಹೊಳೆ ಖಚಿತ



