ಕೆಂಗೇರಿ : ಪ್ರಾಮಾಣಿಕತೆ ಮತ್ತು ಸಂಘಟನಾತ್ಮಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಜನಪರವಾದ ಕೆಲಸಗಳಲ್ಲಿ ನಿರಂತರವಾಗಿ ಕಾರ್ಯಮಗ್ನರಾಗಿರುವ ಗಂಗಾ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಅದ್ಯಕ್ಷರಾಗಿ ಸತತವಾಗಿ ಆರನೇಯ ಬಾರಿಗೆ ಅದ್ಯಕ್ಷರಾಗಿ ಹಾಗು ಉತ್ತಮ ಮಹಿಳಾ ಅದ್ಯಕ್ಷ ಪ್ರಶಸ್ತಿಗೆ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ನಂತರ ಪತ್ರಿಕೆಯೊಂದಿಗೆ ಮಾತನಾಡಿದ ಅವರು ಬಿಡಿಎ ಜ್ಞಾನಭಾರತಿ ರೆಸಿಡೆಟಲ್ ಎನ್ ಕ್ಲೈವ್ ನಿವಾಸಿಗಳು ಬಿಡಿಎ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಪ್ರಮಾಣಿಕವಾಗಿ ಕೆಲಸವನ್ನು ಮಾಡುತ್ತಿರುವ ರೂಪಾ ನಾಗರಾಜ್ ರವರು ಮತ್ತೆ ಅದ್ಯಕ್ಷರಾಗಿ ಮುಂದುವರಿಯಬೇಕು ಎಂದು ಒತ್ತಾಯ ಪೂರ್ವಕವಾಗಿ ಮನವಿ ಮಾಡಿದ ಹಿನ್ನಲೆಯಲ್ಲಿ ಅದ್ಯಕ್ಷರಾಗಿ ಮುಂದುವರಿಯಲಾಗಿದೆ ಬಿಡಿಎ ಜ್ಞಾನಭಾರತಿ ಎನ್ ಕ್ಲೈವ್ ನಲ್ಲಿ ಹಲವಾರು ಸಮಸ್ಯೆಗಳನ್ನು ಪ್ರಮಾಣಿಕವಾಗಿ ಕೆಲಸವನ್ನು ನಿರ್ವಹಿಸಿದ್ದಾರೆ ಅಲ್ಲದೆ ಸಾಮಾಜಿಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು.
ಕೆಂಗೇರಿ ಬಿಬಿಎಂಪಿ ಅರೋಗ್ಯ ಇಲಾಖೆ ಬೆಸ್ಕಾಂ ಜಲಮಂಡಲಿ ಸೇರಿದಂತೆ ನಾನಾ ಇಲಾಖೆ ಯೊಂದಿಗೆ ಸಮನ್ವಯ ಸಾಗಿಸಿಕೊಂಡು ಇಲಾಖೆಗಳಿಂದ ಆಗಬಹುದಾದ ಅಭಿವೃದ್ಧಿ ಕಾರ್ಯಗಳನ್ನು ಬಡಾವಣೆಗೆ ಮಾಡಲು ಪ್ರಮಾಣಿಕವಾಗಿ ಪ್ರಯತ್ನ ಮಾಡುತ್ತಿರುವ ನನ್ನನ್ನು ಎಲ್ಲಾ ಗಂಗಾ ಬ್ಲಾಕ್ ನಿವಾಸಿಗಳು ಮತ್ತು ಇತರೆ ಎಲ್ಲಾ ಬ್ಲಾಕಿನ ಪದಾಧಿಕಾರಿಗಳು ಅದ್ಯಕ್ಷರಾಗಿ ಅಯ್ಕೆಯಾಗಲು ಸಹಕರಿಸಿದ ಎಲ್ಲರಿಗೂ ವಿಶೇಷವಾಗಿ ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್ ಟಿ ಸೋಮಶೇಖರ್ ರವರಿಗೂ ತುಂಬು ಹೃದಯದ ಅಭಿನಂದನೆಗಳು ಎಂದು ತಿಳಿಸಿದರು.