ಕಾಂಗ್ರೆಸ್ ಭವನ: ಎಸ್.ಬಿ.ಐ.ಬ್ಯಾಂಕ್ ಚುನಾವಣೆ ಬಾಂಡ್ ಹಗರಣ ವಿರುದ್ದ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತಿಭಟನೆ.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ನಿಗಮದ ಅಧ್ಯಕ್ಷರಾದ ಎಸ್.ಮನೋಹರ್, ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಜನಾರ್ಧನ್, ಜಯಸಿಂಹ, ಆನಂದ್ ಬಾಲಕೃಷ್ಣ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರುಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಎಸ್.ಮನೋಹರ್ ರವರು ಮಾತನಾಡಿ ದೇಶದ ರಾಜಕೀಯ ಇತಿಹಾಸದಲ್ಲಿ ಕರಾಳದಿನ ಇಂದು ಬಿಜೆಪಿ ಚುನಾವಣೆ ಬಾಂಡ್ ಮೂಲಕ 7000ಸಾವಿರ ಕೋಟಿಗಿಂತ ಹೆಚ್ಚು ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ.ಸುಪ್ರಿಂಕೋರ್ಟ್ ಸಹ ಚುನಾವಣೆ ಬಾಂಡ್ ಸಂಪೂರ್ಣ ಮಾಹಿತಿಯನ್ನು ಚುನಾವಣೆ ಆಯೋಗಕ್ಕೆ ನೀಡಬೇಕು ಎಂದು ಆದೇಶ ಹೊರಡಿಸಿದ ನಂತರ ಎಸ್.ಬಿ.ಐ.ಬ್ಯಾಂಕ್ ಮಾಹಿತಿ ನೀಡಿದೆ.
ಜನರು ನೀಡಿರುವ ದೇಣಿಗೆ ಸಂಪೂರ್ಣ ಮಾಹಿತಿ ಸಾರ್ವಜನಿಕರಿಗೆ ಸಿಗಬೇಕು ಅದರೆ ಚುನಾವಣೆ ಬಾಂಡ್ ಹಣ ಯಾವ ಪಕ್ಷದವರಿಗೆ ನೀಡದರು ಮತ್ತು ಯಾರು ನೀಡಿದರು ಯಾವ ಮಾಹಿತಿ ಕೊಡುವುದಿಲ್ಲ ಇದರಿಂದ ಭಷ್ರಚಾರಕ್ಕೆ ರಹದಾರಿ ಸಿಕ್ಕಂತಾಗುತ್ತದೆ.
ಚುನಾವಣೆ ಬಾಂಡ್ ಹಗರಣದಲ್ಲಿ ವಿರೋಧಿ ದೇಶದಲ್ಲಿ ಸಂಸ್ಥೆ ಮತ್ತು ಇ.ಡಿ. ಮತ್ತು ಐ.ಟಿ ದಾಳಿಗೊಳಗಾದ ಕಂಪನಿ ಸಂಸ್ಥೆಗಳಿಂದ ದೇಣಿಗೆ ಸಂಗ್ರಹಿಸಲಾಗಿದೆ.
ಚುನಾವಣೆ ಬಾಂಡ್ ಹಗರಣದಲ್ಲಿ ಬಿಜೆಪಿ ಕೇಂದ್ರ ಸರ್ಕಾರ ವಿರ್ಸಜನೆ ಮಾಡಬೇಕು, ಪ್ರಧಾನಿ ನರೇಂದ್ರಮೋದಿ ನೈತಿಕ ಹೊಣೆಹೊತ್ತು ರಾಜಿನಾಮೆ ನೀಡಬೇಕು ಎಂದು ಒತ್ತಾಯ ಎಂದು ಹೇಳಿದರು.