ಬೆಂಗಳೂರು: ರಾಜಾಜಿನಗರ ವಿಧಾನಸಭಾ ಕ್ಷೇತ್ರ: ದಯಾನಂದನಗರ ಸಂವಿಧಾನ ಶಿಲ್ಪಿ, ಭಾರತರತ್ನ ಡಾ||ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದ ನವೀಕರಣ ಮತ್ತು ಹೊನಲು-ಬೆಳಕಿನ ದೀಪದ ವ್ಯವಸ್ಥೆ ಕಾಮಗಾರಿ, ಡಾಂಬರೀಕರಣ ಕಾಮಗಾರಿ ಹಾಗೂ ಬೋರ್ ವೆಲ್ ಕೊರೆಸುವ ಕಾಮಗಾರಿ, ನಾಮಫಲಕ ಆಳವಡಿಕೆ ಕಾಮಗಾರಿಗಳ ಗುದ್ದಲಿಪೂಜೆಯನ್ನು ಮಾಜಿ ಶಿಕ್ಷಣ ಸಚಿವರು, ಶಾಸಕರಾದ ಎಸ್.ಸುರೇಶ್ ಕುಮಾರ್ ರವರು ನೇರವೆರಿಸಿದರು, ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಸಾರ್ವಜನಿಕರ ಆಶಯದಂತೆ ಕಾಮಗಾರಿಗಳ ಆನುಷ್ಠಾನ, ತೆರಿಗೆ ಹಣ ಸಮರ್ಪಕ ಬಳಕೆ ಉದ್ದೇಶದಿಂದ ಕಾಮಗಾರಿಗಳ ಅನುಷ್ಠಾನ ಮಾಡಲಾಗುತ್ತಿದೆ.
ಕಳೆದ ೩೫ವಾರಗಳಿಂದ ಜನರೊಂದಿಗೆ ಜನಸೇವಕ ಕಾರ್ಯಕ್ರಮದಿಂದ ಸಾರ್ವಜನಿಕರ ಸಾವಿರಾರು ಸಮಸ್ಯೆಗಳ ಪರಿಹಾರ ಸಿಕ್ಕಿದೆ. ಇದೀಗ ದಿನಕ್ಕೂಂದು ವಾರ್ಡ್ ಅಭಿಯಾನ ಆರಂಭಿಸಲಾಗಿದೆ. ಪ್ರತಿ ದಿನ ಒಂದೊAದು ವಾರ್ಡ್ ಗಳಿಗೆ ಭೇಟಿ ಮಾಡಿ ಸಾರ್ವಜನಿಕ ಸಮಸ್ಯೆಗಳ ಸಮಸ್ಯೆಗಳನ್ನು ಅಲಿಸಲಾಗುತ್ತಿದೆ ಎಂದು ಹೇಳಿದರು. ಬಿಬಿಎಂಪಿ ಮಾಜಿ ಸದಸ್ಯರಾದ ಎಂ.ಮುನಿರಾಜು, ಮತ್ತು ಮಂಡಲ ಅಧ್ಯಕ್ಷರಾದ ಸುದರ್ಶನ್, ಪ್ರಧಾನ ಕಾರ್ಯದರ್ಶಿ ಗಿರೀಶ್ ಗೌಡ, ಮಂಡಲ ಯುವ ಮೋರ್ಚಾ ಅಧ್ಯಕ್ಷರಾದ ಸಂಜಯ್ ಕುಮಾರ್, ದಯಾನಂದನಗರ ವಾರ್ಡ್ ಬಿಜೆಪಿ ಪ್ರಮುಖ ಮುಖಂಡರುಗಳು, ಸ್ಥಳೀಯ ಸಾರ್ವಜನಿಕರು ಭಾಗವಹಿಸಿದ್ದರು.