ಬೆಂಗಳೂರು: ತಾವು ಯಾವುದೇ ಕಾರಣಕ್ಕೂ ಬಿಜೆಪಿ ತೊರೆಯುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಡಿ.ವಿ. ಸದಾನಂದಗೌಡ. ತಾವು ಕಾಂಗ್ರೆಸ್ ಪಕ್ಷ ಸೇರುವುದಿಲ್ಲ ಎಂದು ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಹಲವಾರು ದಿನಗಳಿಂದ ನಾನೊಂದು ಸುದ್ದಿಗೋಷ್ಠಿ ಮಾಡುತ್ತೇನೆ ಎಂದು ಹೇಳಿದ್ದೇ.ಚುನಾವಣೆಯ ಪ್ರಕ್ರಿಯೆ ಆರಂಭವಾದ ಮೇಲೆ, ಸೀಟು ಹಂಚಿಕೆ, ಘೋಷಣೆಯಾದ ಮೇಲೆ ಇದಕ್ಕೆ ಪ್ರಾಮುಖ್ಯತೆ ಬಂದಿದೆ. ಉತ್ತರ ಕ್ಷೇತ್ರಕ್ಕೆ ನನ್ನ ಬದಲಿ ಹೆಸರು ಬಂದ ಕ್ಷಣದಿಂದ, ಬೆಂಗಳೂರು ಉತ್ತರ ಕ್ಷೇತ್ರದ ಕಣ ರಂಗೇರಿದೆ.
ಎರಡ್ಮೂರು ಪ್ರಶ್ನೆಗಳು ಭಾರೀ ಚರ್ಚೆಯಾಗುತ್ತಿತ್ತು. ನನಗೆ ಪಕ್ಷದ ಟಿಕೆಟ್ ಕೈ ತಪ್ಪಿದ್ದಕ್ಕೆ ಬೇಸರ ಆಗಿದೆ. ಅಸಮಾಧಾನ ಆಗಿದೆ ಎಂಬ ಚರ್ಚೆಗಳು ಬಂತು. ನನಗೆ ಅಸಮಾಧಾನವಾಗಿರುವುದು ನಿಜ ಟಿಕೆಟ್ ಕೈ ತಪ್ಪಿರಬಹುದು ನೋವಾಗಿದೆ.ನಾನು ಬಿಜೆಪಿ ಶುದ್ಧೀಕರಣದತ್ತ ಹೆಜ್ಜೆ ಹಾಕುತ್ತೇನೆ ಎಂದ ಡಿವಿಎಸ್ ಖಡಕ್ ಆಗಿ ಉತ್ತರಿಸಿದರು.
ನನ್ನನ್ನು ಕರೆಸಿ ಅವಮಾನ ಮಾಡಿದವರು ಮುಂದಿನ ದಿನಗಳಲ್ಲಿ ಅವರು ಪಶ್ಚಾತ್ತಾಪ ಪಡುತ್ತಾರೆ ಎಂದರು.ನನಗೆ ಹಿರಿಯರು ಹೇಳಿದ ಮಾತು ನೆನಪಾಗುತ್ತದೆ. ಸಹಿಸಿಕೊಳ್ಳುವವರಿಗೆ ತಾಳ್ಮೆ ಇದ್ದರೇ, ದುಃಖ ಕೊಟ್ಟವರು ಇದ್ದು ಸತ್ತಂತೆ.ಕಾಂಗ್ರೆಸ್ನಿಂದ ಕೆಲವರು ಸಂಪರ್ಕ ಮಾಡಿದ್ದು ನಿಜ. ನಿಮಗೆ ಯಾವ ಕ್ಷೇತ್ರ ಕೇಳಿದ್ರೂ ನಾವು ಟಿಕೆಟ್ ನೀಡುತ್ತೇವೆ ಎಂದರು.
ನಿಮ್ಮನ್ನು ಗೆಲ್ಲಿಸಿಕೊಂಡು ಬರುವುದು ನಮ್ಮ ಜವಾಬ್ದಾರಿ ಎಂದರು. ನಾನು ಎಲ್ಲಿಯೇ ಟಿಕೆಟ್ ಕೇಳಿದ್ರೂ ಕೊಡುತ್ತೇನೆ ಎಂದರು.
ನಾನು ಮುಖ್ಯಮಂತ್ರಿ, ಕೇಂದ್ರ ಸಚಿವನಾಗಿ ಕಾರ್ಯನಿರ್ವಹಣೆ ಮಾಡಿದ್ದೇನೆ. ನನಗೆ ಪಕ್ಷ ಎಲ್ಲವನ್ನೂ ಕೊಟ್ಟಿದೆ. ನಾನು ಪಕ್ಚಕ್ಕೆ ಕೊಡುವುದು ಇದೀಗ ಅಗತ್ಯವಿದೆ. ಮಾಧ್ಯಮಗಳಲ್ಲಿ ನನ್ನ ಪರ ಸುದ್ದಿ ಬಂದಿದೆ. ವಿರೋಧವು ಇದೆ. ನನ್ನ ಬಗ್ಗೆ ಬಂದ ವಿಶ್ಲೇಷಣೆಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದರು.
ನಾನು ಕೊಟ್ಟ ಕೆಲಸ ಮಾಡಿದ್ದಕ್ಕೆ 7 ವರ್ಷಗಳ ಕಾಲ ಕೇಂದ್ರದಲ್ಲಿ ಸಚಿವನಾಗಿ ಇರಲು ಆಗುತ್ತಿರಲಿಲ್ಲ. ಮತ್ತೆ ಪ್ರಧಾನಿ ನರೇಂದ್ರ ಮೋದಿ ಆಗಬೇಕು. ಇದೇ ಸಂದರ್ಭದಲ್ಲಿ ಪಕ್ಷ ಜವಾಬ್ದಾರಿ ಹೊತ್ತಿರುವರು ಸ್ವಾರ್ಥ ಪರರಾಗಿದ್ದಾರೆ. ಎಲ್ಲವೂ ತಮ್ಮ ವರಿಗೆ ತಮ್ಮ ಚೇಲಾಗಳಿಗೆ ಬೇಕು ಎನ್ನುತಾರೆ ಎಂದು ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಯಡಿಯಪ್ಪ ವಿರುದ್ಧ ಹರಿಹಾಯ್ದಿದ್ದಾರೆ.