ಬೆಂಗಳೂರು ರಾಜಾಜಿನಗರದಲ್ಲಿರುವ ಶ್ರೀಗುರು ಮಹಾಜ್ಞಾನಿ ಮಾಚಿದೇವ ಸೌಹಾರ್ದ ಕ್ರಡಿಟ್ ಕೋ. ಆ. ನಿಯಮಿತದ ಅಧ್ಯಕ್ಷ ಎಂ.ಪಿ.ಮಂಜುನಾಥ್ ರವರು ಸಭೆಯನ್ನುದ್ದೆಶಿಸಿ ಮಾತನಾಡುತ್ತ ಡಾ. ತ್ಯಾಗರಾಜ್ ರವರು ಮೂರು ದಶಕಗಳಿಂದ ಆರೋಗ್ಯ ಮತ್ತು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡು ತ್ಯಾಗಮಯಿ ಜೀವನ ನಡೆಸುತ್ತಿರುವುದು ಶ್ಲಾಘನೀಯ ಎಂದು, ಡಾ.ತ್ಯಾಗರಾಜ್ ರವರಿಗೆ `ಸಮಾಜ ಸೇವಾ ರತ್ನ’ ಪ್ರಶಸ್ತಿ ನೀಡಿ, ಡಾ.ಮಂಜುನಾಥ್ ರವರು ಸನ್ಮಾನಿಸಿದರು.
ಡಾ.ತ್ಯಾಗರಾಜ್ ರವರು ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ನಾನು ಚಿಕ್ಕ ವಯಸ್ಸಿನಲ್ಲಿ ಗ್ರಾಮೀಣ ಪ್ರದೇಶದಿಂದ ಬೆಂಗಳೂರಿನಲ್ಲಿ ವಿದ್ಯಾಭ್ಯಾಸಕ್ಕಾಗಿ ಮತ್ತು ಜೀವನ ಸಾಗಿಸಲು ಸಾಕಷ್ಟು ಆರ್ಥಿಕ ಸಂಕಷ್ಟ ಎದುರಿಸಿದ್ದೇನೆ ಇಂದು ಸಹ ಅದರ ಅರಿವು ನನಗಿದೆ ಹಾಗಾಗಿ ಈ ಸಮಾಜಕ್ಕೆ ಅಳಿಲು ಸೇವೆ ಸಲ್ಲಿಸುತ್ತಿದ್ದೇನೆ,
ಮಾಚಿದೇವ ಸಹಕಾರ ಸಂಸ್ಥೆ ಸಣ್ಣದಾದರು, ಸಾಮಾಜಿಕ ಕಾರ್ಯ ಚಟುವಟಿಕೆಯಲ್ಲಿ ಮುಂಚೂಣಿಯಲ್ಲಿದ್ದು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಸ್ವಯಂ ಉದ್ಯೋಗಕ್ಕಾಗಿ 1ಲಕ್ಷ ರೂ. ಆರ್ಥಿಕವಾಗಿ ಪಡೆಯಲು ಸುಮಾರು 2ಸಾವಿರಕ್ಕು ಹೆಚ್ಚಿನ ಜನ ನೋಂದಣಿ ಮಾಡಿರುವುದು ಹಾಗೂ ಬೀದಿ ವ್ಯಾಪಾರಿಗಳಿಗೆ 10ಸಾವಿರ ರೂ.ಗಳಂತೆ 500ಕ್ಕೂ ಹೆಚ್ಚಿನ ಜನ ಫಲಾನುಭವಿ ಪಡೆದಿದ್ದಾರೆ ಮತ್ತು 700ಕ್ಕೂ ಹೆಚ್ಚಿನ ಜನ ಯಶಸ್ವಿನಿ ಆರೋಗ್ಯ ವಿಮೆ ಪಡೆದಿದ್ದಾರೆ,
ಇದೇ ಸಂಸ್ಥೆವತಿಯಿಂದ ವಿಜಯಧ್ವಜ ಗೃಹ ನಿರ್ಮಾಣ ಸಹಕಾರ ಸಂಘದ ವತಿಯಿಂದ ಬಡವರಿಗೆ ನಿವೇಶನ ನೀಡಲು ಸಾರ್ವಜನಿಕರಿಂದ ಸದಸ್ಯತ್ವ ಪಡೆಯುತ್ತಿದ್ದಾರೆ ಈ ಕಾರ್ಯ ವೈಖರಿಯನ್ನು ಮೆಚ್ಚಿ ಡಾ.ಮಂಜುನಾಥ್ ರವರಿಗೆ ಡಾ.ತ್ಯಾಗರಾಜ್ ರವರು ಅಭಿನಂದಿಸಿದರು, ಕಾರ್ಯಕ್ರಮದಲ್ಲಿ ಬಲಿಜ ಮುಖಂಡ ಎಸ್.ಮುರಳಿ, ಜಿ.ಸರವಣ, ಸಟ್ವಾಜಿರಾವ್, ಕಾರ್ಯ ನಿರ್ವಾಹಣಾಧಿಕಾರಿ ಕೆ.ಎಸ್.ಹೆಮಂತ್ ಕುಮಾರ್ ಇತರರಿದ್ದರು.