ಸಂಪೂರ್ಣ ಬೌಲರ್ ಗಳ ಪಂದ್ಯವಾಗುವ ಎಲ್ಲಾ ಸೂಚನೆಯಿದ್ದ ವೇಳೆ ಅದ್ಬುತ ಬ್ಯಾಟಿಂಗ್ ಪ್ರದರ್ಶಿಸಿದ ಸಮೀರ್ ರಿಝ್ವಿ ಅವರು ಲಖನೌ ಸೂಪರ್ ಜೈಂಟ್ಸ್ ಲೆಕ್ಕಾಚಾರವನ್ನೇ ಬುಡುಮೇಲು ಮಾಡಿದರು. ಅವರ ಸೊಗಸಾದ ಅರ್ಧ ಶತಕದ ನೆರವಿನಿಮದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಲಖನೌ ವಿರುದ್ಧ 6 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿತು.
ಲಖನೌನ ಏಕನಾ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಖನೌ ಸೂಪರ್ ಜೈಂಟ್ಸ್ ತಂಡ 18.4 ಓವರ್ ಗಳಲ್ಲಿ 145 ರನ್ ಗಳನ್ನು ಗಳಿಸಿತು. ಈ ಮೊತ್ತವನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ 17 ಎಸೆತಗಳು ಬಾಕಿ ಉಳಿದಿರುವಂತೆ 4 ವಿಕೆಟ್ ಗಳನ್ನು ಕಳೆದುಕೊಂಡು ತಲುಪಿತು.ಸಾಧಾರಣ ಮೊತ್ತ ಬೆಂಬತ್ತಿ ಹೊರಟಿದ್ದ ಡೆಲ್ಲಿ ತಂಡ ಒಂದು ಹಂತದಲ್ಲಿ 26 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ಅಕ್ಷರಶಃ ಸಂಕಷ್ಟದಲ್ಲಿ ಸಿಲುಕಿತ್ತು. ಅನುಭವಿ ಕೆಎಲ್ ರಾಹುಲ್ ಅವರು ಮೊಹಮ್ಮದ್ ಶಮಿ ಬೌಲಿಂಗ್ ನಲ್ಲಿ ಗೋಲ್ಡನ್ ಡಕ್ ಆಗಿ ಪೆವಿಲಿ.ನ್ ಮರಳಿದರೆ ಮತ್ತೊಬ್ಬ ಆರಂಭಕಾರ ಪಥುಮ್ ನಿಸ್ಸಾಂಕಾ ಒಂದು ರನ್ ಗಳಿಸಿದ್ದೇ ಸಾಧನೆಯಾಯಿತು. ಕ್ರೀಸ್ ನಲ್ಲಿ ನಿತೇಶ್ ರಾಣಾ ಅವರು ಅವರು 15 ರನ್ ಔಟಾದರು. ನಾಯಕ ಅಕ್ಷರ್ ಪಟೇಲ್ ಅವರು ಸಹ ಗೋಲ್ಡನ್ ಡಕ್ ಆದಾಗ ಡೆಲ್ಲಿ ಕತೆ ಮುಗಿಯಿತು ಎಂದೇ ಎಲ್ಲರೂ ಅಂದುಕೊAಡಿದ್ದರು. ಆದರೆ ತ್ರಿಸ್ಟನ್ ಸ್ಟಬ್ಸ್ ಅವರೊಂದಿಗೆ 5ನೇ ವಿಕೆಟ್ ಗೆ ಮುರಿಯದ 119 ರನ್ ಗಳ ಜೊತೆಯಾಟ ಆಡಿದ ರಿಝ್ವಿ ಅವರು ತಂಡವನ್ನು ಗೆಲುವಿನ ದಡ ತಲುಪಿಸಿದರು.ರಿಝ್ವಿ-ಸ್ಟಬ್ಸ್ ಶತಕದ ಜೊತೆಯಾಟ
ಬಹಳ ಜಾಗ ರೂಕತೆಯಿಂದ ಆಡಿದ ಇವರಿಬ್ಬರು ಎದುರಾಳಿ ಬೌಲರ್ ಗಳಿಗೆ ವಿಕೆಟ್ ಕೀಳಲು ಅವಕಾಶವನ್ನೇ ನೀಡಲಿಲ್ಲ. ಹೀಗಾಗಿ ಲಖನೌ ಬೌಲರ್ ಗಳು ಸಾಂಘಿಕ ಪ್ರಯತ್ನ ನಡೆಸಿದರೂ ಡೆಲ್ಲಿ ಗೆಲುವನ್ನು ತಡೆಯಲು ಸಾಧ್ಯವಾಗಿಲಲ್ಲ. 47 ಎಸೆತಗಳನ್ನು ಎದುರಿಸಿದ ರಿಝ್ವಿ ಅವರು 5 ಬೌಂಡರಿ ಮತ್ತು 4 ಸಿಕ್ಸರ್ ಗಳನ್ನು ಒಳಗೊಂಡಿದ್ದ ಅಜೇಯ 70 ರನ್ ಬಾರಿಸಿದರು. ಇನ್ನು ಸ್ಟಬ್ಸ್ ಅವರು 32 ಎಸೆತಗಳಿಂದ 3 ಬೌಂಡರಿ ಮತ್ತು 1 ಸಿಕ್ಸರ್ ಗಳನ್ನು ಒಳಗೊಂಡ 39 ರನ್ ಗಳಿಸಿ ನಾಟೌಟ್ ಆಗಿ ಉಳಿದರು.ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಲಖನೌ ಸೂಪರ್ ಜೈಂಟ್ಸ್ ತಂಡ ಡೆಲ್ಲಿ ವೇಗಿಗಳಾದ ಲುಂಗಿ ಎನ್ ಗಿಡಿ ಮತ್ತು ಟಿ ನಟರಾಜನ್ ಅವರ ಮಾರಕ ದಾಳಿಗೆ ಕುಸಿಯಿತು. ಆರಂಭಿಕ ಮಿಚೆಲ್ ಮಾರ್ಷ್(28 ಎಸೆತದಲ್ಲಿ 35) ಮತ್ತು ಮಧ್ಯಮ ಕ್ರಮಾಂಕದಲ್ಲಿ ಅಬ್ದುಲ್ ಸಮದ್ (25 ಎಸೆತದಲ್ಲಿ 36) ಅವರನ್ನು ಹೊರತುಪಡಸಿದರೆ ಯಾರೂ ಡೆಲ್ಲಿ ಬೌಲಿಂಗ್ ದಾಳಿಯನ್ನು ದಿಟ್ಟವಾಗಿ ಎದುರಿಸಲಿಲ್ಲ. ಹೀಗಾಗಿ ತಂಡ ನಿಗದಿತ ಓವರ್ ಗೆ ಮುಂಚಿತವಾಗಿಯೇ ಸಾಧಾರಣ ಮೊತ್ತಕ್ಕೆ ಆಲೌಟ್ ಆಯಿತು.
ಬೌಲರ್ಗಳ ಮೆರೆದಾಟದ ಬಳಿಕ ಮಿಂಚಿದ ಸಮೀರ್ ರಿಝ್ವಿ



