ಹೇಮಂತ್ ಪ್ರೊಡಕ್ಷನ್ಸ್ ಅಡಿ ಹೇಮಂತ್ ಕುಮಾರ್ ಅವರ ನಿರ್ದೇಶನದ, ಪೌರಾಣಿಕ ಕಥಾಹಂದರ ಒಳಗೊಂಡ “ಸಾಮ್ರಾಟ್ ಮಂಧಾತ” ಚಿತ್ರವೀಗ 50 ದಿನಗಳ ಪ್ರದರ್ಶನ ಕಂಡಿದೆ. ಬೆಂಗಳೂರು ಯಶವಂತಪುರದ ಉಲ್ಲಾಸ್ ಚಿತ್ರಮಂದಿರಲ್ಲಿ ಯಶಸ್ವಿಯಾಗಿ 50 ದಿನಗಳ ಪ್ರದರ್ಶನ ಪೂರೈಸಿದೆ.
ಸಾಮ್ರಾಟ್ ಮಾಂಧಾತ ಚಿತ್ರದ ಸುವರ್ಣ ಸಂಭ್ರಮಾಚರಣೆಯನ್ನು ಉಲ್ಲಾಸ್ ಚಿತ್ರಮಂದಿರದ ವೇದಿಕೆಯಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯ ನಿರ್ದೇಶಕ ಚಿಕ್ಕಣ್ಣ, ಉಲ್ಲಾಸ್ ಚಿತ್ತಮಂದಿರದ ಮಾಲೀಕರಾದ ವಸಂತ್ ಕುಮಾರ್ ಹಾಗೂ ಮನಿಷ್ ಜೊತೆಗೆ ಸಾಮ್ರಾಟ್ ಮಾಂಧಾತ ಚಿತ್ರದ ನಿರ್ದೇಶಕ, ನಿರ್ಮಾಪಕರು ಹಾಗೂ ಕಲಾವಿದರುಗಳು. ಉಪಸ್ಥಿತರಿದ್ದರು.ನಿರ್ದೇಶಕ ಹಾಗೂ ನಿರ್ಮಾಪಕ ಹೇಮಂತ್ ಕುಮಾರ್ ಮಾತನಾಡುತ್ತ ಬಿಡುಗಡೆಯಾದ ದಿನದಿಂದಲೂ ನಮ್ಮ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರಕುತ್ತಿದ್ದು, ಇದೀಗ 50 ದಿನಗಳನ್ನು ಮುಗಿಸಿದೆ. ಇಲ್ಲೀವರೆಗೆ ಯಾವುದೇ ಷೋ ಸಹ ಬ್ರೇಕಪ್ ಆಗದೆ ನಮ್ಮ ಚಿತ್ರ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ ಎಂದು ವಿವರಿಸಿದರು.
ವಿತರಕ ರಾಧಾಕೃಷ್ಣ, ಮಾತನಾಡಿ ಒಂದೊಳ್ಳೇ ಸಿನಿಮಾನ ಇನ್ನೂ ಹೆಚ್ಚು ಜನರಿಗೆ ತಲುಪಿಸಲು ಮಾಧ್ಯಮದವರ ಸಹಕಾರವೂ ಬೇಕು ಎಂದು ಹೇಳಿದರು.
ನಿರ್ಮಾಪಕರಲ್ಲೊಬ್ಬರಾದ ನಂಜುಂಡಪ್ಪ ಮಾತನಾಡಿ ಜನ ಫ್ಯಾಮಿಲಿ ಜೊತೆಗೆ ಬಂದು ಸಿನಿಮಾ ನೋಡ್ತಿದಾರೆ ಎಂದು ಹೇಳಿದರು. ಶನೀಶ್ವರ ಸ್ವಾಮಿ ಪಾತ್ರ ಮಾಡಿರುವ ಸುಂದರಬಾಬು ಮಾತನಾಡಿ ಕಲಿಯ ಶಾಪವಿಮೋಚನೆ ಹೇಗಾಗುತ್ತದೆ ಎಂಬ ವಿಷಯ ಇಟ್ಟುಕೊಂಡು ಮಾಡಿದ ಚಿತ್ರವಿದು ಎಂದರು.
ಚಿತ್ರದಲ್ಲಿ ಮಾಂಧಾತನಾಗಿ ರಂಗಭೂಮಿ ಕಲಾವಿದ ಬಸವರಾಜು, ಬಿಂದುಮತಿಯಾಗಿ ಭಾರತಿ, ನಾರದನಾಗಿರುವ ನಂಜುಂಡಪ್ಪ, ಶೌಭರಿ ಮಹರ್ಷಿಯಾಗಿ ನರಸಿಂಹಮೂರ್ತಿ, ಯವನಾಶ್ವನಾಗಿರುವ ಮಂಜುನಾಥ ಕಾಣಿಸಿಕೊಂಡಿದ್ದಾರೆ. ಸಾಮ್ರಾಟ ಮಾಂಧಾತ ಚಿತ್ರಕ್ಕೆ ಆರ್.ವೀರೇಂದ್ರಕುಮಾರ್ ಸಂಭಾಷಣೆ ಸಾಹಿತ್ಯ ರಚಿಸಿದ್ದಾರೆ. ಶಿವರಾಮ್ ಅವರ ಸಂಕಲನವಿದೆ.