ಹೊಸಕೋಟೆ: ಸನಾತನ ಹಿಂದೂ ಧರ್ಮಕ್ಕೆ ಯುಗಗಳ ಇತಿಹಾಸವಿದ್ದು ಮಾನವನಿಗೆ ತ್ರೇಥಾಯುಗದಲ್ಲಿ ಮಹಾ ಋಷಿ ವಾಲ್ಮೀಕಿ ರಾಮಾಯಣ ರಚಿಸಿದರು, ದ್ವಾಪರ ಯುಗದಲ್ಲಿ ವ್ಯಾಸರು ಮಹಾಭಾರತ ರಚಿಸಿ ಮನುಷ್ಯನಿಗೆ ಸನಾತಮ ಧರ್ಮದ ಸಾರವನ್ನು ತಿಳಿಸಿದ್ದಾರೆ, ಇಂತಹ ಧರ್ಮದ ಬಗ್ಗೆ ತಮಿಳುನಾಡಿನ ಸ್ಟಾಲಿನ್ ಮತ್ತು ಇತರರು ಅವಹೇಳನಕಾರಿ ಹೇಳಿಕೆ ನೀಡಿರುವುದು ಖಂಡನೀಯ ಎಂದು ಸಂಸದ ಬಿ ಎನ್ ಬಚ್ಚೇಗೌಡ ತಿಳಿಸಿದರು.
ನಗರದ ತಾಲೂಕು ಕಚೇರಿಯ ಆವರಣದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಮರ್ಪಿಸಿ ಮಾತನಾಡಿದರು.ವಾಲ್ಮೀಕಿ ಸಮುದಾಯ ಪರಿಶಿಷ್ಟ ಪಂಗಡದ ಸಮುದಾಯಕ್ಕೆ ಸೇರಿದ್ದು ಸಮಾಜದಲ್ಲಿ ಸಮಾನತೆ ಬೇಕಾದರೆ ಮೊದಲು ಶಿಕ್ಷಣ ಪಡೆಯಬೇಕು,
ಸರಖಾರಗಳು ಶಿಕ್ಷಣಕ್ಕೆ ಹೆಚ್ಚಿನ ಸಹಕಾರ ನೀಡುತಿದ್ದು ನಿಮ್ಮ ಮನೆಯ ಪ್ರತಿಯೊಂದು ಮಗುವಿಗೂ ಉತ್ತಮ ಶಿಕ್ಷಣ ನೀಡಿದಲ್ಲಿ ಸಮಾಜದಲ್ಲಿ ಸಮಾನತೆ ಸಾಧಿಸಿ ಸರ್ವಾಂಗೀಣ ಅಭಿವೃದ್ದಿ ಹೊಂದಬಹುದು. ನಗರದಲ್ಲಿ ವಾಲ್ಮೀಕಿ ಸಮುದಾಯ ಭವನ ನಿರ್ಮಾಣ ಪ್ರಗತಿಯಲ್ಲಿದ್ದು ಆರ್ಥಿಕ ಕೊರತೆ ಎದುರಾದಲ್ಲಿ ನನ್ನ ಸಂಸದ ನಿಧಿಯಿಂದ 20 ಲಕ್ಷ ರೂ. ಹಣ ಬಿಡುಗಡೆ ಮಾಡಿಸುವುದಾಗಿ ಆಶ್ವಾಸನೆ ನೀಡಿದರು. ಸರಕಾರದ ಸವಲತ್ತುಗಳನ್ನು ಸಮರ್ಪಕವಾಗಿ ಪಡೆದುಕೊಳ್ಳಲು ಜನಾಂಗದಲ್ಲಿ ಅರವು ಮೂಡಿಸುವಲ್ಲಿ ಸಂಘ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸಬೇಕಾಗಿದ್ದು ಸಂಘಟನೆಗೆ ಆದ್ಯತೆ ನೀಡಬೇಕು ಎಂದರು.
ತಹಸೀಲ್ದಾರ್ ವಿಜಯಕುಮಾರ್ ಮಾತನಾಡಿ ರತ್ನಾಕರ ಸಮಾಜಕ್ಕೆ ಒಳಿತು ಮಾಡಲಿ ಎಂಬ ಉದ್ದೇಶದಿಂದ ನಾರದ ಮಹರ್ಷಿಗಳು ವಾಲ್ಮೀಕಿಯಾಗಿ ಪರಿವರ್ತಿಸಿ ರಾಮ ದೇವರನ್ನು ಒಲಿಸಿಕೊಳ್ಳಲು ವಾಲ್ಮೀಕಿ ತಪಸ್ಸು ಮಾಡುವಂತೆ ಮಾಡಿ ಸಮಾಜಕ್ಕೆ ಉತ್ತಮ ಕೊಡುಗೆ ಮಾಡಿದರು, ಅದೇ ರೀತಿ ಪೋಷಕರು ನಾರದ ಮಹರ್ಷಿಯಂತೆ ತಮ್ಮ ಮಕ್ಕಳ ತಪ್ಪುಗಳನ್ನು ತಿದ್ದಿ ಮಕ್ಕಳಿಗೆ ಉತ್ತಮ ವಿಧ್ಯಾಭ್ಯಾಸ ನೀಡಿದಲ್ಲಿ ಮಾತ್ರ ಸಮಾಜದಲ್ಲಿ ಸಮಾನತೆ ಸಾದಿಸಬಹುದಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಸಮುದಾಯದ ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು ಹಾಗೂ ತಾಲೂಕಿನ ಗ್ರಾಮ ಪಂಚಾಯತಿಗಳಲ್ಲಿ ಆಯ್ಕೆಯಾದ ಸಮುದಾರದ ಸದಸ್ಯರುಗಳನ್ನು ಸನ್ಮಾನಿಸಲಾಯಿತು.
ವಾಲ್ಮೀಕಿ ಸಂಘದ ಅಧ್ಯಕ್ಷ ಹನುಮರಾಜು, ಮುಖಂಡರಾದ ಗೋಪಾಲಗೌಡ, ಬಿ.ವಿ ರಾಜಶೇಖರಗೌಡ, ಸಿ ಮುನಿಯಪ್ಪ, ಡಿ.ಟಿ. ವೆಂಕಟೇಶ್, ಎಡಕನಹಳ್ಳಿ ಮಂಜು, ನಾಗರಾಜ್, ಮುನಿಯಪ್ಪ, ದೇವರಾಜ್, ಮಾಜಿ ಪುರಸಭೆ ಉಪಾಧ್ಯಕ್ಷೆ ಶೀಲಾವತಿ, ಸಂಪನ್ಮೂಲ ವ್ಯಕ್ತಿ ಕೆಂಪೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಾರಾಜು ಇನ್ನಿತರರು ಭಾಗವಹಿಸಿದ್ದರು.