ಪೀಣ್ಯ ದಾಸರಹಳ್ಳಿ: ದೈನಂದಿನ ಬದುಕಿನ ಜಂಜಾಟಗಳನ್ನು ಮರೆಸಿ ಸಂಬಂಧ, ಬಾಂಧವ್ಯಗಳು ವೃದ್ಧಿಯಾಗುವುದರ ಮೂಲಕ ಉತ್ಸವಗಳಿಂದ ಜನರ ಉತ್ಸಾಹ ಹೆಚ್ಚುತ್ತದೆ. ಉತ್ಸವಗಳಿಂದ ನಮ್ಮ ಸಂಸ್ಕೃತಿಯ ಹಿರಿಮೆಯನ್ನು, ಪರಂಪರೆಯ ಶ್ರೇಷ್ಠತೆಯನ್ನು ಇಂದಿನ ಪೀಳಿಗೆಗೆ ತಿಳಿಸಿಕೊಡುವ ಸಾರ್ಥಕ ಕೆಲಸವಾಗುತ್ತದೆ.
ಇಟಗಿ ಉತ್ಸವ ಕಾರ್ಯಕ್ರಮದಲ್ಲಿ ಮೂಲತ ವಿಜಾಪುರ ಜಿಲ್ಲೆ ಇಂಡಿ ತಾಲೂಕಿನ ಬೆಂಗಳೂರು ವಾಸಿಯಾದ ಡಾ. ಸಂಗನಬಸಪ್ಪ ಬಿರಾದಾ ರವರಿಗೆ ಸಾಮಾಜಿಕ ಸೇವೆಗಾಗಿ ವಿಕ್ರಮಾದಿತ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಬಿರಾದಾರ್ ಅವರು ಸತತವಾಗಿ 20 ವರ್ಷಗಳಿಂದ ನಿರಂತರ ಸಾಮಾಜಿಕ ಧಾರ್ಮಿಕ ಸಾಂಸ್ಕೃತಿಕ ಆಧ್ಯಾತ್ಮಿಕವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಹಲವಾರು ಎಲ್ಲಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಾ ಬಂದಿರುವ ಪತ್ರಕರ್ತರ ವೇದಿಕೆ ರಾಜ್ಯಾಧ್ಯಕ್ಷರಾದ ಮಹೇಶ್ ಸುರ್ವೆ ಅವರ ಕಾರ್ಯಗಳನ್ನು ಹೆಚ್ಚಿಗೆ ವ್ಯಕ್ತಪಡಿಸಿ ಮಾತನಾಡಿದರು.
ಇಂತಹ ಉತ್ಸವಗಳಿಂದ ಯುವ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸಿಕೊಡಲು ಸಾಧ್ಯವಾಗುತ್ತದೆ. ಸಾಹಸಿ ಸಂಘಟಕರಾದ ಮಹೇಶ ಬಾಬು ಸುರ್ವೆ ಅವರು ಕಳೆದ 20 ವರ್ಷಗಳಿಂದಲೂ ಸಹ ಈ ಉತ್ಸವವನ್ನು ಆಚರಿಸಿಕೊಂಡು ಬಂದಿರುವ ಅವರ ಸಾಹಸವನ್ನು ಮೆಚ್ಚಲೇಬೇಕು ಎಂದು ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಹನುಮಂತಪ್ಪ ಅಂಡಗಿ ಚಿಲವಾಡಗಿ ಹೇಳಿದರು.
ಅವರು ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಇಟಗಿಯ ಮಹಾದೇವ ದೇವಾಲಯದ ಆವರಣದಲ್ಲಿ ಇಟಗಿ ಉತ್ಸವದ ಸಾಂಸ್ಕೃತಿಕ ಸಮಿತಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ 20ನೇ ಬಾರಿಗೆ ಹಮ್ಮಿಕೊಂಡ ಇಟಗಿ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಇಟಗಿ ಉತ್ಸವದ ವೇದಿಕೆಯಲ್ಲಿ ವಿಜಯ ಗವಿಮಠ ಇಲ್ಕಲ್ ತಂಡದಿಂದ ಸಮೂಹ ನೃತ್ಯ ಎಸ್ ಎಸ್ ಮಟದ. ಹುಬ್ಬಳ್ಳಿ-ಸಮೂಹ ನೃತ್ಯ ಭಾಗ್ಯವತಿ ಬಿರಾದರ್ ಅಥಣಿ-ನೃತ್ಯ ರೂಪಕ ಬಸವ ರೆಡ್ಡಪ್ಪ ಅಬ್ಬಿಗೇರಿ ಬಿಚ್ಚುಲಿಯಂ -ಸಮೂಹ ನೃತ್ಯ ಅವನಿ ಗಂಗಾವತಿ ಬಳ್ಳಾರಿ-ಜಾನಪದ ನೃತ್ಯ ಶೀಲಾ .ಜೀ .ವಿ. ಬೆಂಗಳೂರು-ಸಮೂಹ ನೃತ್ಯ. ರುಕ್ಮಿಣಿ ಸುರುವೆ ಎಂ ಬೆಂಗಳೂರು-ಜಾನಪದ ನೃತ್ಯ ಅನುಷಾ ಆರ್. ಬೆಂಗಳೂರು-ಸಮೂಹ ನೃತ್ಯಗಳು ನೆರೆದಿದ್ದ ಜನಮನವನ್ನು ರಂಚಿಸಿದವು.
ಇಟಗಿ ಉತ್ಸವ ಸಮಿತಿಯ ಗೌರವಾಧ್ಯಕ್ಷರಾದ ಎಂ.ಬಿ. ಅಳವಂಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮೂರನೇ ಯುವ ಸಾಂಸ್ಕೃತಿಕ ಸಮ್ಮೇಳನದ ಅಧ್ಯಕ್ಷರಾದ ಕುದಾನ್ ಮುಲ್ಲಾ, ಉತ್ಸವದ ಸಂಚಾಲಕರಾದ ಮಹೇಶಬಾಬು ಸುರ್ವೆ, ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷರಾದ ಅಂದಪ್ಪ ಹುರುಳಿ, ತಾಲೂಕ ಅಧ್ಯಕ್ಷರಾದ ಮಂಜುನಾಥ ಛಬ್ಬಿ, ಗೌರವ ಅಧ್ಯಕ್ಷರಾದ ಮಲ್ಲಿಕಾರ್ಜುನ ಹುಳುಗಣ್ಣವರ ರೈತ ಮುಖಂಡರಾದ ಬಸನಗೌಡ ಪಾಟೀಲ, ವಜೀರಸಾಬ ತಳಕಲ, ಇಟಗಿ ಗ್ರಾಮ ಘಟಕದ ಅಧ್ಯಕ್ಷರಾದ ಬಸಪ್ಪ ಮಂಡಲಗಿರಿ,
ರೈತ ಮುಖಂಡರಾದ ಬಸಪ್ಪ ಹೊಂಬಳ, ಹುಚ್ಚಪ್ಪ ಸಣ್ಣ ನಿಂಗಣ್ಣವರ, ವೀರಯ್ಯ ಕಳ್ಳಿಮಠ, ಪೀರಪ್ಪ ಲಮಾಣಿ, ಹನುಮಪ್ಪ ಸಣ್ಣ ನಿಂಗಣ್ಣವರ, ಲಕ್ಕಪ್ಪ ಗುಳಗಣ್ಣವರ, ಮಹದೇವಪ್ಪ ಕೌದಿ, ಈರಪ್ಪ ಗುಳಗಣ್ಣನವರ, ಹನುಮಂತ ಸುಣಗಾರ, ಕಂಡೆಪ್ಪ ಲಮಾಣಿ, ಬಸವರಾಜ ಪೂಜಾರ, ಮಹದೇವಪ್ಪ ಗೊಂಡಬಾಳ, ಭರಮಪ್ಪ ಹಿರೇನಿಂಗಣ್ಣವರ, ಶರಣಯ್ಯ ಕೋಮಾರ, ಶರಣಪ್ಪ ಹೊಂಬಳ, ಶಿವಪ್ಪ ಗುಳಗಣ್ಣವರ, ಬಸವರಾಜ ಚೌಡಿ, ನಿಂಗಪ್ಪ ಕರೆ ಬಾಲಪ್ಪನವರ, ಚಂದ್ರಪ್ಪ ಹಡಪದ, ಅನೀಲ ಹುಜರತ್ತಿ, ಲಕ್ಷ್ಮಪ್ಪ ಕೋರಿ, ಗದಿಗೆಪ್ಪ ಕೋರಿ, ವೀರನಗೌಡ ಸಾದರ, ಚೆನ್ನಪ್ಪ ಮಂಡಲಗೇರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಉತ್ಸವದ ಸಂಚಾಲಕ ಮಹೇಶ್ ಬಾಬು ಸುರ್ವೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪತ್ರಕರ್ತರ ವೇದಿಕೆಯ ಪದಾಧಿಕಾರಿ ಬಸವರಾಜ ಜಮಾದಾರ್ , ಜಿ ನಂದೀಶ್ ಜೊತೆಗಿದ್ದು ಹಾಗೂ ಬಸನಗೌಡ ಹಳ್ಯಾಳ ನಿರೂಪಣೆ ಮಾಡಿದರು ಶಿಕ್ಷಕ ಉಮೇಶ್ ಬಾಬು ವಂದಿಸಿದರು.