This is the title of the web page
This is the title of the web page

ಐಪಿಎಲ್ 2023: ಧೋನಿಗೆ ಈಗ ಸಂಜು ಸ್ಯಾಮ್ಸನ್ ಎದುರಾಳಿ..!

ಚೆನ್ನೈ: ಐಪಿಎಲ್ 2023 ರಲ್ಲಿ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ.

ಧೋನಿ ಪಡೆ ಮೊದಲ ಪಂದ್ಯದಲ್ಲಿ ಸೋತರೂ ಬಳಿಕ ಗೆಲುವಿನ ಹಳಿಗೆ ಮರಳಿತ್ತು. ಕಳೆದ ಎರಡು ಪಂದ್ಯಗಳಿಂದ ಹಳೆಯ ಸಿಎಸ್ ಕೆ ನೆನಪಿಸುವಂತೆ ಆಡುತ್ತಿದೆ. ಋತುರಾಜ್ ಗಾಯಕ್ ವಾಡ್, ಅಜಿಂಕ್ಯಾ ರೆಹಾನ್, ರವೀಂದ್ರ ಜಡೇಜಾ ಸಿಎಸ್ ಕೆ ಬಲ ತುಂಬಿದ್ದಾರೆ. ಅತ್ತ ರಾಜಸ್ಥಾನ್ ತಂಡ ಕಳೆದ ಮೂರು ಪಂದ್ಯಗಳ ಪೈಕಿ ಒಂದು ಸೋತು ಉಳಿದೆರಡು ಪಂದ್ಯಗಳಲ್ಲಿ ಗೆಲುವು ಕಂಡಿದೆ.

ಎಲ್ಲರೂ ಫಾರ್ಮ್ ನಲ್ಲಿದ್ದರೂ ನಾಯಕ ಸಂಜು ಮಾತ್ರ ಕಳೆದ ಪಂದ್ಯದಲ್ಲಿ ಕಳೆಗುಂದಿದ್ದರು. ವಿಶೇಷವೆಂದರೆ ಎರಡೂ ತಂಡಗಳಿಗೆ ವಿಕೆಟ್ ಕೀಪರ್ ನಾಯಕತ್ವ. ಹೀಗಾಗಿ ಇಂದಿನ ಕದನದಲ್ಲಿ ಯಾರ ಕೈ ಮೇಲಾಗುತ್ತದೆ ನೋಡಬೇಕಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗುವುದು.