ರಾಜಸ್ತಾನ ರಾಯಲ್ಸ್ ತಂಡವನ್ನು ತೊರೆಯಲು ಒಂದು ಕಾಲು ಹೊರಗಿಟ್ಟಿದ್ದಾರೆಂದೇ ಹೇಳಲಾಗುತ್ತಿರುವ ಸಂಜು ಸ್ಯಾಮ್ಸನ್ ಅವರು ಚೆನ್ನೈ ಸೂಪರ್ ಕಿಂಗ್ಸ್ ಸೇರ್ತಾರಾ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಹೊತ್ತಲ್ಲೇ ಡೆಲ್ಲಿ ಕ್ಯಾಚಿಟಲ್ಸ್ ಗೆ ಮರಳುವುದರಿಂದ ಜಸ್ಟ್ ಮಿಸ್ ಆದರು ಎಂಬ ಬಗ್ಗೆ ವರದಿಯಾಗಿದೆ. ಈ ಬಗ್ಗೆ ರಾಜಸ್ಥಾನ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಗ ನಡುವಿನ ಮಾತುಕತೆ ಸಣ್ಣ ಲೆಕ್ಕಾಚಾರದಿಂದಾಗಿ ಕೈತಪ್ಪಿದೆ ಎನ್ನಲಾಗುತ್ತಿದೆ.
೨೦೨೬ರ ಐಪಿಎಲ್ ಸೀಸನ್ಗೂ ಮುನ್ನ ಸಂಜು ಸ್ಯಾಮ್ಸನ್ ಅವರು ಬೇರೆ ತಂಡಕ್ಕೆ ಸೇರಲು ಚಿಂತನೆ ನಡೆಸುತ್ತಿದ್ದಾರೆ ಎಂದು ಕಳೆದ ನಾಲ್ಕೈದು ತಿಂಗಳಿಂದ ಚರ್ವಿತ ಚರ್ವಣ ಆಗಿಬಿಟ್ಟಿದೆ. ಆದರೆ ಸ್ಯಾಮ್ಸನ್ ಅವರು ಡೆಲ್ಲಿ ಕ್ಯಾಪಿಟಲ್ಸ್ಗೆ ವರ್ಗಾವಣೆಯಾಗುವ ಹತ್ತಿರದಲ್ಲಿದ್ದರು. ಆದರೆ, ಕೊನೆಯ ಹಂತದಲ್ಲಿ ಆ ಒಪ್ಪಂದ ಮುರಿದುಬಿತ್ತು. ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ನಂತರ ಸಮೀರ್ ರಿಜ್ವಿ ಅವರನ್ನು ರಾಜಸ್ಥಾನ್ ರಾಯಲ್ಸ್ ಕೇಳಿದ್ದರಿಂದ ಈ ಮಾತುಕತೆ ಮುರಿದು ಬಿತ್ತು.
ಡೆಲ್ಲಿ ಕ್ಯಾಪಿಟಲ್ಸ್ ಜೊತೆಗಿನ ಮಾತುಕತೆ ಕೈಬಿಟ್ಟ ನಂತರ, ರಾಜಸ್ಥಾನ್ ರಾಯಲ್ಸ್ ಈಗ ಚೆನ್ನೈ ಸೂಪರ್ ಕಿಂಗ್ಸ್ ಕಡೆಗೆ ಗಮನ ಹರಿಸಿದೆ. ಸಂಜು ಸ್ಯಾಮ್ಸನ್ ಬದಲಿಗೆ ರಾಜಸ್ಥಾನ ತಂಡವು ರವೀಂದ್ರ ಜಡೇಜಾ ಮತ್ತು ಮಾಥೀಶ್ ಪಥಿರಾನ ಅವರನ್ನೂ ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಆಸಕ್ತಿ ಹೊಂದಿದೆ ಎಂದು ವರದಿಗಳು ತಿಳಿಸಿವೆ. ಹೀಗಾಗಿ ಮಾತುಕತೆ ವಿಳಂಬ ಆಗುತ್ತಿದೆ ಎಂದು ತಿಳಿದು ಬಂದಿದೆ. ಏತನ್ಮಧ್ಯೆ ರವೀಂದ್ರ ಜಡೇಜಾ ಅವರು ತಮ್ಮ ಇನ್ ಸ್ಟಾಗ್ರಾಂ ಪೋಸ್ಟ್ ನಲ್ಲಿ ವಿಶೇಷ ಅರ್ಥ ಬರುವ ಪೋಸ್ಟ್ ಅನ್ನು ಹಾಕಿದ್ದಾರೆ.
ಹೀಗಾಗಿ ಅವರನ್ನು ಚನ್ನೈ ಸೂಪರ್ ಕಿಂಗ್ಸ್ ಈಗ ಸಂಜು ಸ್ಯಾಮ್ಸನ್ ಗಾಗಿ ಬಿಟ್ಟುಕೊಡುತ್ತದಾ ಎಂಬ ಕುತೂಹಲ ಹೆಚ್ಚಾಗಿದೆ. ಇನ್ನೊಂದು ವಿಷಯ ಎಂದರೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ತನ್ನ ಅಧಿಕೃತ ಎಕ್ಸ್ಖಾತೆಯ ಮೂಲಕ ಗಾಳಿಸುದ್ದಿಗಳನ್ನು ನಂಬಬೇಡಿ ಎಂಬರ್ಥದ ಪೋಸ್ಟ್ ಮಾಡಿದೆ. ಹೀಗಾಗಮ ಯಾವುದನ್ನು ನಂಬಬೇಕು, ಯಾವುದನ್ನು ಬಿಡಬೇಕು ಎಂಬ ಬಗ್ಗೆ ಕ್ರಿಕೆಟ್ ಪ್ರೇಮಿಗಳೂ ಗೊಂದಲದಲ್ಲಿ ಇದ್ದಾರೆ. ೨೦೨೫ರ ಐಪಿಎಲ್ ಸೀಸನ್ಗೂ ಮುನ್ನ, ರಾಯಲ್ಸ್ ತಂಡವು ಸ್ಯಾಮ್ಸನ್ ಅವರನ್ನು ೧೮ ಕೋಟಿ ರೂ.ಗೆ ಉಳಿಸಿಕೊಂಡಿತ್ತು. ಆದರೆ, ಬೆರಳಿನ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದ ಕಾರಣ, ಅವರು ಪ್ರಾರಂಭದ ಕೆಲವು ಪಂದ್ಯಗಳಿಗೆ ಇಂಪ್ಯಾಕ್ಟ್ ಸಬ್ಸ್ಟಿಟ್ಯೂಟ್ ಆಗಿ ಆಡಬೇಕಾಯಿತು.



