ಜೈಪುರ: ಐಪಿಎಲ್ 2024 ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಅದ್ಭುತವಾಗಿ ಮುನ್ನಡೆಸುತ್ತಿರುವ ಸಂಜು ಸ್ಯಾಮ್ಸನ್ ಇದೀಗ ನಿಷೇಧದ ಭೀತಿಯಲ್ಲಿದ್ದಾರೆ. ಅದಕ್ಕೆ ಕಾರಣವೇನು ಇಲ್ಲಿದೆ ಡೀಟೈಲ್ಸ್. ಒಟ್ಟು 9 ಪಂದ್ಯಗಳಲ್ಲಿ 8 ಪಂದ್ಯಗಳನ್ನು ಗೆದ್ದಿರುವ ರಾಜಸ್ಥಾನ್ ರಾಯಲ್ಸ್ ಇದೀಗ ಪ್ಲೇ ಆಫ್ ಸನಿಹವಿದೆ.
ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಸ್ವತಃ ನಾಯಕ ಸಂಜು ಸ್ಯಾಮ್ಸನ್ ಅದ್ಭುತ ಫಾರ್ಮ್ ನಲ್ಲಿದ್ದಾರೆ. ಇದರ ನಡುವೆಯೇ ಸಂಜು ಸ್ಯಾಮ್ಸನ್ ಗೆ ಒಂದು ಪಂದ್ಯದ ನಿಷೇಧದ ಭೀತಿ ಎದುರಾಗಿದೆ.ಐಪಿಎಲ್ ನಲ್ಲಿ ಒಂದು ತಂಡ ಒಂದು ಬಾರಿ ನಿಧಾನಗತಿಯ ಓವರ್ ಮಾಡಿದರೆ ನಾಯಕನಿಗೆ 12 ಲಕ್ಷ ರೂ., ಎರಡನೇ ಬಾರಿ ಅದೇ ತಪ್ಪು ಮಾಡಿದರೆ 24 ಲಕ್ಷ ರೂ. ದಂಡ ವಿಧಿಸಲಾಗುತ್ತದೆ.
ಸಂಜು ಸ್ಯಾಮ್ಸನ್ ಈಗಾಗಲೇ ಎರಡು ಬಾರಿ ನಿಧಾನಗತಿಯ ಓವರ್ ಮಾಡಿದ್ದಕ್ಕೆ 24 ಲಕ್ಷ ರೂ. ದಂಡ ತೆತ್ತಿದ್ದಾರೆ. ಇದೀಗ ಮೂರನೇ ಬಾರಿಗೆ ಸಂಜು ಸ್ಯಾಮ್ಸನ್ ಅದೇ ತಪ್ಪು ಮಾಡಿದರೆ ನಿಷೇಧಕ್ಕೊಳಗಾಗಬಹುದಾಗಿದೆ. ಐಪಿಎಲ್ ನಿಯಮದ ಪ್ರಕಾರ ಈಗ ಸಂಜು ಸ್ಯಾಮ್ಸನ್ ಕೂಡಾ ನಿಷೇಧದ ಭೀತಿಯಲ್ಲಿದ್ದಾರೆ. ಸದ್ಯಕ್ಕೆ ಸಂಜು ಸ್ಯಾಮ್ಸನ್ ಅದ್ಭುತ ಫಾರ್ಮ್ ನಲ್ಲಿದ್ದು, ತಂಡದ ಕೀ ಆಟಗಾರರಾಗಿದ್ದಾರೆ.ಈ ನಿರ್ಣಾಯಕ ಹಂತದಲ್ಲಿ ನಿಷೇಧಕ್ಕೊಳಗಾಗದರೆ ಅದು ತಂಡದ ಮೇಲೆ ಪರಿಣಾಮ ಬೀರಬಹುದಾಗಿದೆ.