ಬೆಂಗಳೂರು: ಕನ್ನಡಾಂಬೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ಎಳ್ಳು ಬೆಲ್ಲ ಹಂಚೋಣ ಒಳ್ಳೆ ಕವಿತೆ ಕೇಳೋಣ ಎಂಬ ಕಾರ್ಯಕ್ರಮ ನಡೆಯಿತು.
ಮತ್ತು ನಡೆದಾಡುವ ದೇವರು ತ್ರಿವಿಧ ದಾಸೋಹಿ ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾ ಸ್ವಾಮೀಜಿಯವರ ಸಂಸ್ಮರಣೆ ಜರುಗಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಮತಿ ರಾಜೇಶ್ವರಿ ಅವರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಡಾ. ಎಸ್. ಅಕ್ಬರ್ ಭಾಷಾ, ಶ್ರೀ ಸದಾಶಿವಯ್ಯ ಜರಗನಹಳ್ಳಿ, ಡಾ. ಮಂಜಣ್ಣ ಗುರೂಜಿ, ಶ್ರೀಮತಿ ರಜನಿ ಪೈ, ಶ್ರೀ ಬಿ ಆರ್ ಪ್ರದೀಪ್ ಕುಮಾರ್, ಡಾ. ಬಿಎಸ್ಏನ್ಎಲ್ ಶ್ರೀಧರ್, ಡಾ. ಟಿ ಗೋವಿಂದರಾಜು, ಡಾ. ಸರಸ್ವತಿ ಚಂದ್ರಶೇಖರ ರಾವ್, ಶ್ರೀಮತಿ ಜಯಶ್ರೀ ರಾಜು, ಮುಂತಾದವರು ಭಾಗವಹಿಸಿದ್ದರು. ಡಾ. ಪ್ರದೀಪ್ ದುಬೆ ಅವರ ಸ್ಪೂರ್ತಿದಾಯಕ ಉಪನ್ಯಾಸ ನಡೆಯಿತು. ಕುಮಾರಿ ಲಿತ್ಯ ಅವರ ಭರತನಾಟ್ಯ, ಶ್ರೀಮತಿ ಶಿಲ್ಪಾ ಗಾಳಿ ಅವರ ನಿರೂಪಣೆ ಇತ್ತು. ೩೦ಕ್ಕೂ ಅಧಿಕ ಕವಿಗಳು ಕರ್ನಾಟಕ ರಾಜ್ಯದ ವಿವಿಧ ಭಾಗದಿಂದ ಆಗಮಿಸಿ ತಮ್ಮ ಕವಿತೆಗಳನ್ನು ವಾಚನ ಮಾಡಿದರು. ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ವರಲಕ್ಷಿ÷್ಮ ಗುಣವಂತ ಮಂಜು ಅವರು ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಾಹಿತಿ ಡಾ. ಗುಣವಂತ ಮಂಜು ಸೊಗಡು ತುಂಬಿರಬೇಕು ಬದುಕಿನಲ್ಲಿ ಸಂಕ್ರಾAತಿಯAತೆ ಭಾವ ತುಂಬಿರಬೇಕು ಅನುಗಾಲವು ಎಳ್ಳು ಬೆಲ್ಲದoತೆ, ಸಂಕ್ರಾAತಿ ಎಂದರೆ ಬದುಕಿನ ಭವ್ಯತೆಯ ಹೂರಣ” ಎಂದು ಅಭಿಪ್ರಾಯಪಟ್ಟರು.
`ಬದುಕಿನ ಭವ್ಯತೆಯ ಹೂರಣವೇ ಸಂಕ್ರಾಂತಿ’



