ಯಲಹಂಕ: ನಗರದ ನಾಗರಬಾವಿ 3ನೇ ಬ್ಲಾಕ್ 8ನೇ ಅಡ್ಡರಸ್ತೆಯಲ್ಲಿರುವ ಜ್ಞಾನಸೌಧ ಸಭಾಂಗಣದಲ್ಲಿ ಉತ್ತರ ಕರ್ನಾಟಕ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸಂಕ್ರಾಂತಿ ಸಮ್ಮಿಲನ ಕಾರ್ಯಕ್ರಮ ಅದ್ದೂರಿಯಿಂದ ಜರುಗಿತು.
ಸುಂದರ ಸಮಾರಂಭದಲ್ಲಿ ಪರಮಪೂಜ್ಯ ಅನಂತಶ್ರೀ ವಿಭೂಷಿತ ಶಿವ ಸುಜ್ಞಾನ ತೀರ್ಥ ಮಹಾಸ್ವಾಮಿಗಳವರು ಧಿವ್ಯ ಸಾನಿಧ್ಯ ವಹಿಸಿದ್ದು, ಸಂಘದ ಅಧ್ಯಕ್ಷರಾದ ನಾಗೇಂದ್ರ ಜಿ ಕಮಾರ್, ಅಧ್ಯಕ್ಷತೆ ವಹಿಸಿದ್ದು, ಶಿವಣ್ಣ ಬಡಿಗೇರ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ವಿಶ್ವಕರ್ಮ ನಿಗಮದ ಮಾಜಿ ಅಧ್ಯಕ್ಷ ಬಾಬು ಪತ್ತಾರ್, ಕೆ .ಆರ್ ಬಡಿಗೇರ, ವಸಂತ ದೇವಪುರ, ಶ್ರೀಮತಿ ಲಕ್ಷ್ಮೀಬಾಯಿ ಹಳಿಸಾಗರ, ಕೃಷ್ಣಮೂರ್ತಿ ಮಾಯಾಚಾರ್, ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು ಪರಮಪೂಜ್ಯರನ್ನು ಸನ್ಮಾನಿಸಿ ಗೌರವಿಸಿದರು. ವೇದಿಕೆ ಗಣ್ಯರನ್ನು ಪೂಜ್ಯಶ್ರೀಗಳಾದ ಶಿವಸುಜ್ಞಾನ ತೀರ್ಥ ಮಹಾಸ್ವಾಮಿಗಳು ಸನ್ಮಾನಿಸಿ ಆಶೀರ್ವದಿಸಿದರು. ವಿಶೇಷಸನ್ಮಾನಿತರಾದ ಮೌನೇಶ್ವರ ಘೋಡಗೇರಿ ದಂಪತಿ ಹಾಗೂ ಮಾರುತಿ ಹೆಚ್ ಸೋನಾರ್ ದಂಪತಿ ಗಳನ್ನು, ಪೂಜ್ಯಶ್ರೀಗಳು ಸನ್ಮಾನಿಸಿ, ಗೌರವಿಸಿದರು.
ಈ ವೇಳೆಯಲ್ಲಿ ಸಂಘದ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು. ಹೆಚ್ಚುಅಂಕ ಪಡೆದು ಸಮುದಾಯಕ್ಕೆ ಕೀರ್ತಿ ತಂದ ವಿದ್ಯಾರ್ಥಿ ಗಳನ್ನು ಗುರುತಿಸಿ, ಸನ್ಮಾನಿಸಿ ಪುರಸ್ಕರಿಸಲಾಯಿತುಸಂಘದ ಪ್ರಧಾನ ಕಾರ್ಯದರ್ಶಿ ಡಾ:: ಮಹಾರುದ್ರಪ್ಪ ಮನುವಾಚಾರ್ಯ ಮತ್ತಿತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಸಾಮಾನ್ಯ ಸದಸ್ಯರು ಮತ್ತು ಅವರ ಕುಟುಂಬ ವರ್ಗದವರು ಸ್ನೇಹಿತರು, ಅಭಿಮಾನಿಗಳು, ಹಿತೈಷಿಗಳು, ಹಾಜರಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.