ಬೆಂಗಳೂರು: ವೃತ್ತಿಶಿಕ್ಷಣ ಕೋರ್ಸುಗಳಿಗೆ ಪೂರ್ವ ಸಿದ್ಧತೆ ಸೇವೆಗಳನ್ನು ಒದಗಿಸುವಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಮುಂಚೂಣಿಯಲ್ಲಿರುವ ಆಕಾಶ್ ಎಜುಕೇಶನಲ್ ಸರ್ವೀಸಸ್ ಲಿಮಿಟೆಡ್ (AESL)ನ ಬೆಂಗಳೂರು ಮೂಲದ ಇಬ್ಬರು ವಿದ್ಯಾರ್ಥಿಗಳು ಜಾಯಿಂಟ್ ಎಂಟ್ರೆನ್ಸ್ ಎಕ್ಸಾಮಿನೇಷನ್ (ಎಇಇ) ಮುಖ್ಯ ಪರೀಕ್ಷೆ 2024 ರ ಎರಡನೇ ಸೆಶನ್ ನಲ್ಲಿ ಅಭೂತಪೂರ್ವ ಸಾಧನೆ ಮಾಡಿದ್ದಾರೆ.
ಂಇSಐ ನ ವಿದ್ಯಾರ್ಥಿಗಳಾದ ಸಾನ್ವಿ ಜೈನ್ ಮತ್ತು ಕೃಷ್ಣ ಸಾಯಿ ಶಿಶಿರ್ ವಿ ಉಪ್ಪಳ ಅವರು ಅಖಿಲ ಭಾರತ ಮಟ್ಟದಲ್ಲಿ ಕ್ರಮವಾಗಿ 34 ಮತ್ತು 72ನೇ ಖಚಿಟಿಞ ಪಡೆದಿದ್ದಾರೆ. ಈ ಮೂಲಕ ಸಾನ್ವಿ ಜೈನ್ ಕರ್ನಾಟಕದ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ. ಸಾನ್ವಿ ಭೌತಶಾಸ್ತ್ರ ಮತ್ತು ಗಣಿತದಲ್ಲಿ ಶೇ.100 ಕ್ಕೆ ನೂರು ಅಂಕಗಳನ್ನು ಪಡೆದಿದ್ದರೆ, ಕೃಷ್ಣ ರಾಸಾಯನಶಾಸ್ತ್ರ ಮತ್ತು ಗಣಿತದಲ್ಲಿ ಶೇ.100 ಕ್ಕೆ ನೂರು ಅಂಕಗಳನ್ನು ಪಡೆದಿದ್ದಾರೆ.
ತಮ್ಮ ಈ ಸಾಧನೆಗಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಿರುವ ಅವರು, ತಮ್ಮ ಯಶೋಗಾಥೆಯ ಈ ಪ್ರಯಾಣದಲ್ಲಿ ಆಕಾಶ್ ಸಿದ್ಧಪಡಿಸಿದ ವಿಷಯ ಮತ್ತು ತರಬೇತಿ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಇದಕ್ಕಾಗಿ ನಾವು ಆಕಾಶ್ಗೆ ಋಣಿಯಾಗಿದ್ದೇವೆ. ಆಕಾಶ್ ನ ಬೋಧಕ ಸಿಬ್ಬಂದಿಯ ಅಚಲವಾದ ಮಾರ್ಗದರ್ಶನವಿಲ್ಲದೇ ಮತ್ತು ಅವರು ಕಾಲಮಿತಿಯಲ್ಲಿ ನಮಗೆ ಹಲವಾರು ವಿಷಯಗಳನ್ನು ಕಲಿಸಿಕೊಡದಿದ್ದಲ್ಲಿ ನಮಗೆ ಈ ಪರೀಕ್ಷೆ ದುಸ್ತರವಾದ ಸವಾಲಾಗಿರುತ್ತಿತ್ತು ಎಂದು ಹೇಳುತ್ತಾರೆ.
ಆಕಾಶ್ ಎಜುಕೇಶನಲ್ ಸರ್ವೀಸಸ್ ಲಿಮಿಟೆಡ್ (AESL) ನ ಚೀಫ್ ಅಕಾಡೆಮಿಕ್ ಅಂಡ್ ಬ್ಯುಸಿನೆಸ್ ಹೆಡ್ ಧೀರಜ್ ಮಿಶ್ರಾ ಅವರು ಮಾತನಾಡಿ, ಈ ವಿದ್ಯಾರ್ಥಿಗಳ ಅಭೂತಪೂರ್ವ ಸಾಧನೆಯು AESLನ ಬದ್ಧತೆಗೆ ಸಾಕ್ಷಿಯಾಗಿದೆ. ನಮ್ಮ ಸಂಸ್ಥೆಯು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ತೋರುತ್ತಿರುವ ಕಾಳಜಿ ಮತ್ತು ಸಮರ್ಪಣೆಯನ್ನು ಈ ಸಾಧನೆ ತೋರಿಸುತ್ತದೆ. ವಿದ್ಯಾರ್ಥಿಗಳಿಗೆ ಸಮಗ್ರ ಕೋಚಿಂಗ್ ಮತ್ತು ನಾವೀನ್ಯತೆಯ ಕಲಿಕಾ ಪರಿಹಾರಗಳನ್ನು ಒದಗಿಸುವ ಮೂಲಕ ಅವರನ್ನು ನಾವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧಗೊಳಿಸುತ್ತೇವೆ. ಈ ಸಾಧನೆ ಮಾಡಿರುವ ವಿದ್ಯಾರ್ಥಿಗಳ ಭವಿಷ್ಯ ಇನ್ನೂ ಯಶಸ್ವಿಯಾಗಲಿ ಮತ್ತು ಉಜ್ವಲವಾಗಿರಲಿ ಎಂದು ಹಾರೈಸುತ್ತೇವೆ ಎಂದರು.