ಹೊಸಕೋಟೆ: ಕರ್ನಾಟಕ ರಾಜ್ಯವು ಚೋಳರು,ಮೌರ್ಯರು, ಕದಂಬರು, ಚಾಳುಕ್ಯರು ಆಳಿದ,ಸರ್ವ ಶ್ರೇಷ್ಠ ಬಸವಣ್ಣನವರು, ಕನಕದಾಸ ರಂತಹ ಮಹಾನ್ ಜನಿಸಿ ನಾಡಾಗಿದ್ದು ಇಡೀದೇಶದಲ್ಲಿ ವಿಭಿನ್ನತೆಯಲ್ಲಿ ಏಕತೆಯನ್ನು ಹೊಂದಿರುವ ಹೆಗ್ಗಳಿಕೆಯನ್ನು ಪಡೆದಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ನಗರದ ತಾಲೂಕು ಕಚೇರಿ ಆವರಣದಲ್ಲಿ ಕನ್ನಡ ಭಾವುಟ ದ್ವಜಾರೋಹಣ ಹಾಗೂ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪನಮನ ಸಮರ್ಪಿಸಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಸಮಾನತೆಯ ಸಮಾಜ ಸೃಷ್ಠಿಗೆ
ಕಾರಣರಾದ ಬಸವಣ್ಣನವರ ತತ್ವವು ಪ್ರತಿಯೊಬ್ಬರಲ್ಲಿದೆ.
ಜಿಡಿಪಿಯಲ್ಲಿ ಬೆಂಗಳೂರು ಒಂದೇಶೇಕಡ 7 ರಷ್ಟು ಆದಾಯ ತರುವ ಮೂಲಕ ದೇಶದ ಅಭಿವೃದ್ದಿಯಲ್ಲಿ ಪಾಲುದಾರಿಕೆ ಹೊಂದಿದೆ. ಪ್ರಗತಿಪರ ಚಿಂತನೆಯಾದ ಹಸಿರು ಕ್ರಾಂತಿ ಹಾಗೂ ಬಿಳಿ ಕ್ರಾಂತಿಗೆ ಮುನ್ನುಡಿ ಬರೆದ ನಾಡಾಗಿ ದೇಶಕ್ಕೆ ಮಾರ್ಗದರ್ಶನ ನೀಡುತ್ತಾ ಬಂದಿದೆ, ವಿದೇಶದಲ್ಲಿ ದೇಶದ ರಾಜದಾನಿ ದೆಹಲಿ ಎಂಬುದನ್ನು ಕೆಲವರುತಿಳಿಯದಿರಬಹುದು, ಆದರೆ ಭಾರತದ ಮಾಹಿತಿ
ತಂತ್ರಜ್ಞಾನದ ರಾಜಧಾನಿ ಬೆಂಗಳೂರು ಎಂಬುದು ಎಲ್ಲರಿಗೂ ತಿಳಿದಿದ್ದು ನಾಡಿನ ಘನತೆಯನ್ನು ಎತ್ತಿಹಿಡಿಯುವಲ್ಲಿ ಯಶಸ್ವಿಯಾಗಿದೆ.
ಇಂತಹ ನಗರವನ್ನು ಕೆಂಪೇಗೌಡರು ಮುಂದಾಲೋಚನೆಯಿಂದ ಕಟ್ಟಿ ಬೆಳೆಸಿದ್ದು ಇಂದು ನಮ್ಮೆಲ್ಲರ ಹೆಮ್ಮೆಯಾಗಿದೆ. ರಾಜ್ಯಕ್ಕೆ ಸುಮಾರು 7 ಸಾವಿರ ವರ್ಷದ ಇತಿಹಾಸವಿದ್ದು ಕನ್ನಡಿಗರು ಉದಾರ ಮನಸ್ಸಿಗರು ಎಲ್ಲಾ ಭಾಷೆಯನ್ನು ಕಲಿಯುತ್ತಾರೆ, ಬೇರೆ ಭಾಷಿಕರನ್ನು ಸೋದರರಂತೆ ಕಾಣುತ್ತಾರೆ, ಆದರೆ ಕನ್ನಡ ಭಾಷೆಯ ಮೇಲಿನ ಅಭಿಮಾನವನ್ನು ಎಂದಿಗೂ ಬಿಡುವುದಿಲ್ಲ.
ಪ್ರತಿಯೊಬ್ಬ ವಿದ್ಯಾವಂತ ಕನ್ನಡಿಗರೂ ಸಹ ಒಬ್ಬೊಬ್ಬ ಅನ್ಯಭಾಷಿಕರಿಗೆ ಕನ್ನಡದ ಬಗ್ಗೆ ಅಭಿಮಾನ ಮೂಡಿಸಿ ಭಾಷೆಯನ್ನು ಕಲಿಸುವ ಕಾರ್ಯ ಕೈಗೊಂಡಲ್ಲಿ ಮಾತ್ರ ಇಂತಹ ಆಚರಣೆಗಳು ಸಹ ಸಾರ್ಥಕವಾಗಲಿದೆ ಎಂದರು.ರಾಜ್ಯದ ಕಾಂಗ್ರೆಸ್ ನೇತೃತ್ವದ ಸರ್ಕಾರ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಆಡಳಿತದಲ್ಲಿ ರಾಜ್ಯದ ಬಡವರಿಗೆ 5 ಯೋಜನೆಗಳಿಂದ ಪ್ರತಿ ತಿಂಗಳು 6 ರಿಂದ 7 ಸಾವಿರ ಆದಾಯದೊರೆಯುವಂತೆ ಮಾಡಿ ಸಮಾನತೆ ಹಾಗೂ ಸಾಮಾಜಿಕ ಭದ್ರತೆ ಒದಗಿಸಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯ ಕನ್ನಡದ ವಿಷಯದಲ್ಲಿ ಶೇಕಡ 100 ರಷ್ಟು ಅಂಕ ಪಡೆದ 5 ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ನೀಡಿ ಗೌರವಿಸಲಾಯಿತು.ಕನ್ನಡ ಪರ ಸಂಘಟನೆಗಳು ಶಾಲಾ ವಿದ್ಯಾರ್ಥಿಗಳು ಹಾಗೂ ಕನ್ನಡಾಭಿಮಾನಿಗಳು ಶಾಸಕ ಶರತ್ ಬಚ್ಚೇಗೌಡರೊಂದಿಗೆ ಸೇರಿ ಕಲಾ ತಂಡಗಳು, ಶಾಲಾ ವಿದ್ಯಾರ್ಥಿಗಳ ಸಾಂಸ್ಕøತಿಕ ವೇಷಭೂಷಣಗಳ ಮೆರವಣಿಗೆ ಯೊಂದಿಗೆ ಕಾಲ್ನಡಿಗೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದರು.
ನಗರದ ಸಿಟಿಜನ್ ಪ್ರೌಢಶಾಲೆಯ ವಿದ್ಯಾರ್ಥಿಗಳ ಕನ್ನಡ ಭಾಷೆಗೆ 8 ಜ್ಞಾನಪೀಠ ಪ್ರಶಸ್ತಿ ಪಡೆದ ಕವಿಗಳ ವೇಷಭೂಷಣದ ಸ್ತಬ್ಧಚಿತ್ರ ಸಾರ್ವಜನಿಕರ ಪ್ರಶಂಸೆ ಗಳಿಸಿತು.ತಹಶೀಲ್ದಾರ್ ವಿಜಯಕುಮಾರ್, ತಾಪಂ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್, ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ್, ಡಿವೈಎಸ್ಪಿ ಶಂಕೇಗೌಡ ಅಣ್ಣಪ್ಪ ಸಾಹೇಬ್ ಪಾಟೀಲ್, ನಗರಸಭೆ ಪೌರಾಯುಕ್ತ ಜಹೀರ್
ಅಬ್ಬಾಸ್, ಕನ್ನಡ ಸಂಘದ ಅಧ್ಯಕ್ಷ ಹೊ.ರಾ. ವೆಂಕಟೇಶ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎಂ. ಮುನಿರಾಜು, ಮುಖಂಡರಾದ ಬಿ.ವಿ. ಬೈರೇಗೌಡ, ಚಿಕ್ಕಹುಲ್ಲೂರು ಬಚ್ಚೇಗೌಡ, ವಿಜಯಕುಮಾರ್ ಇನ್ನಿತರರು ಭಾಗವಹಿಸಿದ್ದರು.