ಸಮಾಜ ಸೇವಕರು, ಖ್ಯಾತ ವೈದ್ಯರು, ಅನಿವಾಸಿ ಭಾರತೀಯರು ಆದ ಪಾವಗಡ ಮೂಲದ ಡಾ. ಪ್ರಭಾಕರ ರೆಡ್ಡಿ ಅವರ 86ನೇ ಜನ್ಮ ದಿನಾಚರಣೆಯನ್ನು. ಬೆಂಗಳೂರಿನ ಕನ್ನಡ ಭವನ ನಯನ ಸಭಾಂಗಣದಲ್ಲಿ ವಿಭಿನ್ನವಾಗಿ ಆಚರಿಸಲಾಯಿತು.
ಡಾ. ಪ್ರಭಾಕರ ರೆಡ್ಡಿ ಅವರ ಜೀವನ ಸಾಧನೆ ಮತ್ತು ಮಾಡಿರುವ ಸಮಾಜ ಸೇವ ಕಾರ್ಯಗಳನ್ನು ಒಳಗೊಂಡಿರುವ 30 ನಿಮಿಷಗಳ ಸಾಕ್ಷಾತ್ ಚಿತ್ರವನ್ನು ಬಿಡುಗಡೆಗೊಳಿಸಲಾಯಿತು.ತುಮಕೂರು ಜಿಲ್ಲೆಯ ಮಾಜಿ ಜಿಲ್ಲಾಧಿಕಾರಿಯಾಗಿ ವಿಶೇಷ ಸಾಧನೆ ಮತ್ತು ಜನಪ್ರಿಯತೆ ಗಳಿಸಿದ್ದ ಡಾ. ಸಿ ಸೋಮಶೇಖರ್ ಅವರು “ಸಾರ್ಥಕ ಜೀವಿ” ಸಾಕ್ಷ್ಯ ಚಿತ್ರವನ್ನು ಬಿಡುಗಡೆಗೊಳಿಸಿದರು.
ಖ್ಯಾತ ಸಾಹಿತಿಗಳು ಕ್ಷಣ ಹೊತ್ತು ಆಣಿ ಮತ್ತು ಖ್ಯಾತಿಯ ನಾಡೋಜ ಡಾ.ಎಸ್. ಷಡಕ್ಷರಿ, ಪಾವಗಡದ ಖ್ಯಾತ ವೈದ್ಯರಾದ ಡಾ. ಚಕ್ಕರ ರೆಡ್ಡಿ, ಮತ್ತು ಡಾ. ಪ್ರಭಾಕರ ರೆಡ್ಡಿ ಅವರ ಸ್ನೇಹಿತರು ಆಪ್ತರು ಹಿತೈಷಿಗಳು, ಮತ್ತು ಡಾಕ್ಟರ್ ಪ್ರಭಾಕರ ರೆಡ್ಡಿ ಚಾರಿಟೇಬಲ್ ಎಜುಕೇಶನಲ್ ಫೌಂಡೇಶನ್ ಟ್ರಸ್ನ ಉಪಾಧ್ಯಕ್ಷರಾದ ಶ್ರೀಮತಿ ಅಮ್ಮಯ್ಯ ತಿಮ್ಮರಾಜು,ವೆಂಕಟೇಶಲು ಖಜಾಂಚಿ, ಗೋವಿಂದಪ್ಪ ಜಂಟಿ ಕಾರ್ಯದರ್ಶಿ ಮುಂತಾದವರು ಭಾಗಿಯಾಗಿದ್ದರು.
ಪ್ರತಿಷ್ಠಿತ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ ಏರ್ಪಡಿಸಿದ್ದ ಶ್ರೀರಾಮರಕ್ಷಾ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯದ ಅನೇಕ ಜಿಲ್ಲೆಗಳಿಂದ ಸಾಧಕರು ಆಗಮಿಸಿದ್ದರು. ಅವರ ಸಮ್ಮುಖದಲ್ಲಿ ಪ್ರಭಾಕರ ರೆಡ್ಡಿ ಅವರ ಜನ್ಮದಿನವನ್ನು ಆಚರಿಸಲಾಯಿತು.
ಸಾಹಿತಿ ಹಾಗೂ ಚಲನಚಿತ್ರ ನಿರ್ದೇಶಕರಾದ ಡಾ. ಗುಣವಂತ ಮಂಜು, ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಆಯೋಜನೆ ಮಾಡಿದ್ದರು. ಡಾ. ಪ್ರಭಾಕರ ರೆಡ್ಡಿ ಅವರಿಗೆ ಶ್ರೀ ರಾಮರಕ್ಷಾ ಪುರುಷೋತ್ತಮ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿ ಪುರಸ್ಕರಿಸಲಾಯಿತು.