ಬಂಗಾರಪೇಟೆ: ಮಕ್ಕಳಿಗೆ ಪೋಷಕರು ಟಿವಿ ಮೊಬೈಲ್ಗಳನ್ನು ನೀಡಬೇಡಿ, ಮೊಬೈಲ್ನಿಂದ ತಾಯಿ ಮಗುವಿನ ಸಂಬಂಧ ಅಳಿಸಿರುವ ನಿದರ್ಶನಗಳಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಕೆ ಶಶಿಕಲಾ ಹೇಳಿದರು.
ತಾಲೂಕಿನ ಮಾರುತಿ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮಾರುತಿ ಯುವಕರ ಬಳಗ ಮತ್ತು ಗ್ರಾಮಸ್ಥರು ಶಿಕ್ಷಕ ಎಂ.ಆರ್ ಆಂಜನೇಯಗೌಡ ರವರು ವರ್ಗಾವಣೆಗೊಂಡ ಕಾರಣ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಟಿವಿ ಮೊಬೈಲ್ ಗಳನ್ನು ಬಿಟ್ಟು ಅವರ ಗಮನವನ್ನು ಪೋಷಕರು ಬೇರೆ ಕಡೆ ಸೆಳೆಯಬೇಕು ಹಳೆಯ ಆಟಗಳನ್ನು ಕಲಿಸಬೇಕು, ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕು, ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಹೊಂದಿರುವ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಬೇಕು, ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕೆಂದರು.ನಿಮಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸುತ್ತೇನೆ, ಅದೃಷ್ಟವಂತ ಆಂಜನೇಯಗೌಡ ನಮ್ಮ ಸ್ನೇಹಿತರ ಬಳಗವನ್ನು ಹೊಂದಿರುತ್ತಾರೆ, ಕ್ರಿಯಾಶೀಲ ವ್ಯಕ್ತಿ ಒಳ್ಳೆಯ ಕೆಲಸವನ್ನು ಮಾಡಿದ್ದಾರೆ ಅದಕ್ಕೆ ನಿದರ್ಶನವೆಂಬAತೆ ಶಿಷ್ಯರಿಂದ ಅವರಿಗೆ ಸನ್ಮಾನಿಸಿ ಗೌರವಿಸುತ್ತಿರುವುದೇ ಸಾಕ್ಷಿಯಾಗಿದೆ ಎಂದರು.
ಜಿಲ್ಲಾ ಗೆಳೆಯರ ಬಳಗದ ಅಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ ಒಗ್ಗಟ್ಟು ಇರುವ ಕಡೆ ಅಭಿವೃದ್ಧಿ ಸಾಧ್ಯ, ಒಗ್ಗಟ್ಟಿನಿಂದ ಏನು ಬೇಕಾದರೂ ಸಾಧಿಸಬಹುದು, 20 ಪುಸ್ತಕದಿಂದ ಪ್ರಾರಂಭಿಸಿದ ಸಮಾಜ ಸೇವೆ ಇಂದು ಸಾವಿರಾರು ಮಕ್ಕಳಿಗೆ ದಾರಿದೀಪವಾಗಿದೆ, ಆಂಜನೇಯ ಗೌಡರವರು ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ನಾಯಕರನ್ನು ಬೆಳೆಸಿ ಸರ್ಕಾರಿ ಶಾಲೆಗಳನ್ನು ಉಳಿಸುವ ಕೆಲಸ ಮಾಡುತ್ತಿದ್ದಾರೆ, ಸಮಾಜ ಸೇವೆ ಮಾಡಿದರೆ ನಾವು ಸಹ ಇನ್ನಷ್ಟು ಅಭಿವೃದ್ಧಿ ಆಗುತ್ತೇವೆ ಎಂದು ಸ್ನೇಹಿತರು ಹೆಚ್ಚು ಇದ್ದಷ್ಟು ಕಷ್ಟ ಸುಖ ಕಡಿಮೆಯಾಗುತ್ತದೆ ಎಂದರು. ಗೆಳೆಯರ ಬಳಗದ ವತಿಯಿಂದ ತಾಲೂಕಿಗೆ ಎಲ್ಲ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಆರ್ ಆಂಜನೇಯಗೌಡ ಸನ್ಮಾನ ಸ್ವೀಕರಿಸಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಖಾಸಗಿ ಶಾಲೆಗಳ ಹಾವಳಿ ಹೆಚ್ಚಾದ್ದರಿಂದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಗೆ ಕಾರಣವಾಗಿದೆ ಅದರ ಪ್ರತಿಫಲವಾಗಿ ನಾನು ಹೆಚ್ಚುವರಿಯಾಗಿ ಹೋಗಿರುತ್ತೇನೆ, ನನ್ನ 25 ವರ್ಷಗಳ ಅಧಿಕಾರ ಅವಧಿಯಲ್ಲಿ ಶಾಲೆಯ ಅಭಿವೃದ್ಧಿಗಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಶ್ರಮಿಸಿದ್ದೇನೆ, ಶಾಲೆಗೆ 10 ಗುಂಟೆ ಜಮೀನನ್ನು ದಾಸಪ್ಪನವರ ಕುಟುಂಬದವರು ದಾನ ನೀಡಿದ್ದು, ಇಲ್ಲಿ ಶಾಲಾ ಕಟ್ಟಡ, ಅಡುಗೆಮನೆ ಎಲ್ಲರ ಸಹಕಾರದಿಂದ ನಿರ್ಮಾಣ ಮಾಡಲಾಗಿದೆ, ನನ್ನ ಅಧಿಕಾರ ಅವಧಿಯಲ್ಲಿ ಸಹಕಾರ ನೀಡಿದ ಎಲ್ಲಾ ಗ್ರಾಮಸ್ಥರಿಗೂ ಪೋಷಕರಿಗೂ ಮಾರುತಿ ಯುವಕರ ಬಳಗದವರಿಗೂ ಶಿಷ್ಯವೃಂದಕ್ಕೂ ಅಭಿನಂದನೆ ಸಲ್ಲಿಸಿದರು. ಈ ವೇಳೆಯಲ್ಲಿ ವರ್ಗಾವಣೆಗೊಂಡ ಶಿಕ್ಷಕರಾದ ಎಂ.ಆರ್ ಆಂಜನೇಯಗೌಡ ಹಾಗೂ ಅವರ ಧರ್ಮಪತ್ನಿ ಶಿಕ್ಷಕಿ ನಾಗರತ್ನ ರವರನ್ನು ಆತ್ಮೀಯವಾಗಿ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಈ ವೇಳೆ ಶಿಕ್ಷಕರ ಮುಖಂಡರುಗಳಾದ ಸಂಜೀವಪ್ಪ, ಗನ್ನೇರಹಳ್ಳಿ ಶ್ರೀನಿವಾಸ್, ನಿವೃತ್ತ ಶಿಕ್ಷಕರಾದ ಬಿ.ಎಂ ಚಂದ್ರಪ್ಪ, ಎಸ್ಡಿಎಂಸಿ ಮಾಜಿ ಅಧ್ಯಕ್ಷ ರಾಮಚಂದ್ರಪ್ಪ, ಟಿ.ಆರ್ ಮುನಿನಾರಾಯಣಪ್ಪ, ಆಂಜನೇಯ ಗೌಡರವರ ಕಾರ್ಯ ವೈಖರಿಯನ್ನು ಶ್ಲಾಘಿಸಿದರು.ಮಾರುತಿ ಗೆಳೆಯರ ಬಳಗದ ಕಾಂತರಾಜು, ಬಸವರಾಜು, ಉಮಾಶ್ರೀ ಮಾತನಾಡಿ ತಮ್ಮ ಗುರುಗಳ ಬಗ್ಗೆ ಗುಣಗಾನ ಮಾಡಿದರು.
ವೇದಿಕೆಯಲ್ಲಿ ನಿವೃತ್ತ ಶಿಕ್ಷಕಿ ವಿಶಾಲಾಕ್ಷಿ, ಮಂಜುನಾಥ್, ರಾಮಚಂದ್ರಪ್ಪ, ಎ.ರಮೇಶ್, ನಾಗೇಂದ್ರ, ದೇವರಾಜ್, ನಾರಾಯಣಸ್ವಾಮಿ, ಪದ್ಮಮ್ಮ ಸೇರಿದಂತೆ ಇನ್ನೂ ಅನೇಕ ಮುಖಂಡರುಗಳು ಹಾಜರಿದ್ದರು.
ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ದಾಖಲಿಸಿ, ಸರ್ಕಾರಿ ಶಾಲೆ ಉಳಿಸಿ: ಶಶಿಕಲಾ



