ನವದೆಹಲಿ: ಅನುಭವಿ ಜಿ.ಸತ್ಯನ್, ಲೆಬನಾನ್ನ ರಾಜಧಾನಿ ಬೇರೂತ್ನಲ್ಲಿ ನಡೆದ ಡಬ್ಲ್ಯುಟಿಟಿ ಫೀಡರ್ ಸರಣಿಯ ಟೂರ್ನಿಯಲ್ಲಿ ಪುರುಷರ ಸಿಂಗಲ್ಸ್ ಟ್ರೋಫಿ ಗೆದ್ದುಕೊಂಡರು. ಈ ಸಾಧನೆ ಮಾಡಿದ ಭಾರತದ ಮೊತ್ತಮೊದಲ ಆಟಗಾರ ಎನ್ನುವ ಶ್ರೇಯಸ್ಸು ಅವರದಾಯಿತು.
11ನೇ ಶ್ರೇಯಾಂಕ ಪಡೆದಿದ್ದ ಸತ್ಯನ್, ಗುರುವಾರ ರಾತ್ರಿ ನಡೆದ ಅಂತಿಮ ಪಂದ್ಯದಲ್ಲಿ ಸ್ವದೇಶದ ಮಾನವ್ ಠಕ್ಕರ್ ಅವರನ್ನು 3-1 ರಿಂದ (6-11, 11-7, 11-7, 11-4 ರಿಂದ ಸೋಲಿಸಿದರು. ಫೈನಲ್ಗೇರುವ ಹಾದಿಯಲ್ಲಿ ಅವರು ಐದನೇ ಶ್ರೇಯಾಂಕ ಪಡೆದಿದ್ದ ಸ್ವದೇಶದ ಆಟಗಾರ ಹರ್ಮಿತ್ ದೇಸಾಯಿ ಅವರನ್ನು 15-13, 6-11, 11-8, 13-11 ರಿಂದ ಮಣಿಸಿದ್ದರು.
ನಂತರ ಅಗ್ರ ಶ್ರೇಯಾಂಕದ ಚುವಾಂಗ್ ಚಿ ಯುವಾನ್ (ತೈವಾನ್) ಅವರನ್ನು 11-8, 11-13, 11-8, 11-9 ರಿಂದ ಹಿಮ್ಮೆಟ್ಟಿಸಿದರು. 2021ರ ನಂತರ ಸತ್ಯನ್ ಮೊದಲ ಬಾರಿ ಅಂತರರಾಷ್ಟ್ರೀಯ ರ್ಯಾಂಕಿಂಗ್ ಟೂರ್ನಿಯಲ್ಲಿ ಗೆದ್ದಂತಾಗಿದೆ. ಆ ವರ್ಷ ಅವರು ಐಟಿಟಿಎಫ್ ಇಂಟರ್ನ್ಯಾಷನಲ್ ಓಪನ್ನಲ್ಲಿ ಚಾಂಪಿಯನ್ ಆಗಿದ್ದರು.