ಭಾರತದ ಆಟಗಾರರಾದ ಸತೀಶ್ ಕುಮಾರ್ ಕರುಣಾಕರನ್ ಮತ್ತು ಆಕರ್ಷಿ ಕಶ್ಯಪ್, ಜರ್ಮನ್ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬುಧವಾರ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್ ಎರಡನೇ ಸುತ್ತಿಗೆ ಮುನ್ನಡೆದಿದ್ದಾರೆ.
ವಿಶ್ವ ಕ್ರಮಾಂಕದಲ್ಲಿ 50ನೇ ಸ್ಥಾನದಲ್ಲಿರುವ ಕರುಣಾಕರನ್ 21-18, 19-21, 21-19 ರಿಂದ 45ನೇ ಕ್ರಮಾಂಕದಲ್ಲಿರುವ ಮಿಶಾ ಜಿಲ್ಬರ್ಮನ್ (ಇಸ್ರೇಲ್) ಅವರನ್ನು ಸೋಲಿಸಿದರು.
ಆಕರ್ಷಿ ಕಶ್ಯಪ್ 21-23, 21-17, 21-11 ರಿಂದ ಉಕ್ರೇನ್ನ ಪೊಲಿನಾ ಬುಹ್ರೋವಾ ಅವರನ್ನು 63 ನಿಮಿಷಗಳಲ್ಲಿ ಸೋಲಿಸಿದರು. ವಿಶ್ವ ಕ್ರಮಾಂಕದಲ್ಲಿ 43ನೇ ಸ್ಥಾನದಲ್ಲಿರುವ ಆಕರ್ಷಿ ಮುಂದಿನ ಪಂದ್ಯದಲ್ಲಿ ಡೆನ್ಮಾರ್ಕ್ ಆಟಗಾರ್ತಿ ಮಿಯಾ ಬ್ಲಿಚ್ಫೆಲ್ಡ್ ಅವರನ್ನು ಎದುರಿಸಲಿದ್ದಾರೆ.