ಎಂ ಎನ್ ಕೋಟೆ: ಗ್ರಾಮೀಣ ಭಾಗದ ಮಹಿಳೆಯರನ್ನು ಜೀರೋ ಇದ್ದವರನ್ನು ಸದೃಢಗೊಳಿಸಿ ಅವರನ್ನು ಹೀರೋ ಮಾಡುವ ಮೂಲಕ ಸ್ವಾವಲಂಬಿ ಜೀವನ ನಡೆಸಲು ಅವಕಾಶ ಕಲ್ಪಿಸುವ ದ್ಯೆಯೋದ್ದೇಶವೇ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆ ಪ್ರಮುಖ ಸಂಕಲ್ಪವಾಗಿದೆ ಎಂದು ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲ್ಲೂಕಿನ ಕಸಬಾ ಹೋಬಳಿ ಮಡೇನಹಳ್ಳಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆಯ ಕೊಪ್ಪ ವಲಯದ ವತಿಯಿಂದ ಎರಡು ನೂತನ ಸಂಘಗಳನ್ನು ರಚಿಸಿ ನಂತರ ದೀಪ ಬೆಳಗಿಸುವ ಮೂಲಕ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ರಾಜ್ಯದ ವಿವಿಧ ಗ್ರಾಮೀಣ ಭಾಗಗಳಲ್ಲಿ ಧರ್ಮಸ್ಥಳ ಸಂಘಗಳಿಂದ ಸಾಲ ಪಡೆದು ಅಭಿವೃದ್ದಿಯಾದವರು ಸಾಕಷ್ಟು ಮುಂದೆ ಕಾಣಸಿಗುತ್ತಾರೆ ಹಾಗಾಗಿ ಜೀರೋ ಇದ್ದವರನ್ನು ಹೀರೋ ಮಾಡಿ ಮಹಿಳೆಯರಿಗೆ ವಿವಿಧ ರೀತಿಯ ಅನುಕೂಲ ಕಲ್ಪಿಸುವ ಗುರಿ ನಮ್ಮ ಸಂಘದ ಮುಖ್ಯ ಉದ್ದೇಶವಾಗಿದೆ ಎಂದರು.
ಕೇವಲ ಸಾಲ ಕೊಟ್ಟು ಮಹಿಳೆಯರನ್ನು ಸಾಲಗಾರರನ್ನಾಗಿ ಮಾಡದೆ ಹೈನುಗಾರಿಕೆ, ಬ್ಯೂಟಿ ಪಾರ್ಲರ್, ಟೈಲರಿಂಗ್, ಹಾಗೂ ಇನ್ನಿತರ ಉಚಿತ ತರಬೇತಿಗಳನ್ನ ನೀಡುವ ಮೂಲಕ ಜೀವನ ಶೈಲಿಯನ್ನು ಅಭಿವೃದ್ಧಿಪಡಿಸುವ ಮೂಲಕ ಆರ್ಥಿಕ ಸ್ಥಿತಿವಂತರನ್ನಾಗಿ ಮಾಡಲು ಉತ್ತೇಜಿಸಲಾಗುವುದು ಎಂದರು.
ಹಲವು ದೇವಸ್ಥಾನಗಳ ಅಭಿವೃದ್ಧಿಗೆ ಅನುದಾನ ನೀಡಿದ್ದು ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ ನಿರ್ಗತಿಕರಿಗೆ ಮಾಶಾಸನ ಕೊಡುವುದರ ಮೂಲಕ 10 ಹಲವು ಕಾರ್ಯಗಳನ್ನ ನಮ್ಮ ಧರ್ಮಸ್ಥಳ ಸಂಘ ಇಂದಿಗೂ ನಿರಂತರವಾಗಿ ಮಾಡುತ್ತಿರುವುದು ಹೆಗ್ಗಳಿಕೆಯ ವಿಷಯವಾಗಿದೆ ಎಂದು ತಿಳಿಸಿದರು.
ತಾಲ್ಲೂಕು ಯೋಜನಾಧಿಕಾರಿ ರಾಜೇಶ್ ಮಾತನಾಡಿ ಗ್ರಾಮಗಳ ಅಭಿವೃದ್ಧಿಗೆ ಪೂರಕವಾಗಿ ಉತ್ತಮ ಗುಣಮಟ್ಟದ ಸಂಘಗಳು ಗ್ರಾಮೀಣ ಭಾಗಗಳಲ್ಲಿ ರಚನೆಯಾಗಬೇಕು ಆಗ ಮಾತ್ರ ಉತ್ತಮ ಪರಿಸರ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿದಂತಾಗುತ್ತದೆ ಈಗಾಗಲೇ ಧರ್ಮಸ್ಥಳ ಸಂಘ ನಿರ್ಮಾಣವಾಗಿ ಸುಮಾರು 47 ವರ್ಷಗಳು ಕಳೆದಿದ್ದು ಗುಬ್ಬಿ ತಾಲೂಕಿನ ಪೈಕಿ 3 ಸಾವಿರದ 42 ಸಂಘಗಳು ರಚನೆಯಾಗಿದ್ದು ಸಂಘದ ಎಲ್ಲಾ ಸದಸ್ಯರಿಗೂ ಆರೋಗ್ಯ, ಶಿಕ್ಷಣ ಸೇರಿದಂತೆ ಕಡಿಮೆ ಬಡ್ಡಿ ಧರದಲ್ಲಿ ಸಾಲ ಸೌಲಭ್ಯ,
ಮಕ್ಕಳ ಉನ್ನತ ಶಿಕ್ಷಣಕ್ಕೆ ಸ್ಕಾಲರ್ಶಿಪ್, ಜೊತೆಗೆ ಗ್ರಾಮದ ನಿರ್ಗತಿಕರಿಗೆ ಕ್ಷೇತ್ರದ ವತಿಯಿಂದ ಪ್ರತಿ ತಿಂಗಳು ಸಹಾಯಧನ ಕಲ್ಪಿಸುವ ಕೆಲಸವನ್ನ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ವತಿಯಿಂದ ನಿರಂತರವಾಗಿ ಕಲ್ಪಿಸಲಾಗುತ್ತಿದೆ ಎಂದರು.ಇದೇ ಸಂದರ್ಭದಲ್ಲಿ ಸಂಘದ ಸದಸ್ಯರಿಗೆ ದಾಖಲಾತಿಗಳನ್ನ ಉಚಿತವಾಗಿ ಹಸ್ತಾಂತರ ಮಾಡಿದರು. ಗ್ರಾಮ ಪಂಚಾಯಿತಿ ಸದಸ್ಯರಾದ ಕಮಲಮ್ಮ ಸೇರಿದಂತೆ ವಲಯ ಮೇಲ್ವಿಚಾರಕಿ ಗಾಯತ್ರಿ, ವಿಭಾಗದ ಸೇವಾ ಪ್ರತಿನಿಧಿ ಮಂಜುಳಾ ಸೇರಿದಂತೆ ಎರಡು ಸಂಘಗಳ ಎಲ್ಲಾ ಸದಸ್ಯರು ಸ್ಥಳದಲ್ಲಿ ಹಾಜರಿದ್ದರು.