ಮಾಗಡಿ: ಶ್ರೀ ರಂಗ ಏತ ನೀರಾವರಿ ಯೋಜನೆಯ ಮೂಲಕ ಮಾಗಡಿಗೆ ಹೇಮಾವತಿ ನೀರು ಹರಿಯುವುದು ಸೂರ್ಯ ಚಂದ್ರರಷ್ಟೇ ಸತ್ಯ ಎಂದು ಮಾಜಿ ಸಚಿವರಾದ ಹೆಚ್.ಎಂ.ರೇವಣ್ಣ ಹೇಳಿದರು.
ತಮ್ಮ 74 ನೇ ಜನುಮದಿನದ ನಿಮಿತ್ತವಾಗಿ ಇತಿಹಾಸ ಪ್ರಸಿದ್ದ ತಿರುಮಲೆ ಶ್ರೀ ರಂಗನಾಥಸ್ವಾಮಿಗೆ ಕುಟುಂಬ ಸಮೇತರಾಗಿ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು ಹೇಮಾವತಿ ಯೋಜನೆಯ ಕಾಮಗಾರಿಯು ಕೆಲವು ರೈತರ ಅಸಹಕಾರದಿಂದ ಕುಂಠಿತವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಧಾನ ನೀಡಿದ್ದು ಸಂಸದ ಡಿ.ಕೆ.ಸುರೇಶ್ ಶಾಸಕ ಹೆಚ್.ಸಿ.ಬಾಲಕೃಷ್ಣ ಅವರು ಸಂಪೂರ್ಣ ಸಹಕಾರ ನೀಡುತ್ತಿದ್ದು ರಾಜ್ಯದಲ್ಲಿ ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್ ಸರಕಾರವಿದ್ದು ಹೇಮಾವತಿ ನದಿ ನೀರನ್ನು ತಾಲ್ಲೂಕಿನ 84 ಕೆರೆಗಳಿಗೆ ಹರಿಸಲಾಗುವುದು ಎಂದರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ 162 ಕೋಟಿ ರೂಪಾಯಿ ಖರ್ಚು ಮಾಡಿ 55 ಪ್ರಶ್ನೆಗಳನ್ನು ರಚಿಸಿಕೊಂಡು ಸಾವಿರಾರು ಜನ ಸ್ವಯಂ ಸೇವಕರು ರಾಜ್ಯದಲ್ಲಿ ಮನೆಮನೆಗೆ ತೆರಳಿ ಕ್ರೋಢೀಕರಿಸಿ ಜಾತಿಗಣತಿ ವರಧಿ ಮಾಹಿತಿಯನ್ನು ಮನೆಯಲ್ಲಿ ಕುಳಿತು ಬರೆದಿದ್ದಾರೆ ಎನ್ನುವುದು ಸಮಂಜಸವಲ್ಲ.
ತುಳಿತಕ್ಕೆ ಒಳಗಾದವರನ್ನು ಮೀಸಲಾತಿಯೇ ಅಳತೆಗೋಲು ಸಮಸಮಾಜ ನಿರ್ಮಾಣವಾಗುವವರೆಗೂ ಮೀಸಲಾತಿ ಅನಿವಾರ್ಯ.ಸರ್ವರಿಗೂ ಸಮಪಾಲು ಸಮಬಾಳು ಒದಗಿಸುವುದು ಸಂವಿಧಾನದ ಆಶಯವಾಗಿದೆ. ಸರಕಾರದ ಸವಲತ್ತಿನ ಸಿಂಹಪಾಲು ಬಳಸಿಕೊಂಡು ಮುಂದುವರೆದಿರುವ ಸಮುದಾಯಗಳು ವಿನಾಕಾರಣ ಜಾತಿಗಣತಿ ಬಗ್ಗೆ ಅಪಸ್ವರ ಎತ್ತುವುದು ಸರಿಯಲ್ಲ.ಜಾತಿಗಣತಿ ವರದಿ ಸರಕಾರದ ಕೈ ಸೇರಿದ ಮೇಲೆ ಅಧ್ಯಯನ ಮಾಡಿ ಸಮಸ್ಯೆಗಳೇನಾದರು ಇದ್ದರೆ ಸರಿಪಡಿಸಲಿ ಎಂದು ರೇವಣ್ಣ ತಿಳಿಸಿದರು.
ಶ್ರೀಮತಿ ವತ್ಸಲಾರೇವಣ್ಣ, ಚಲನಚಿತ್ರ ನಾಯಕನಟ ಅನೂಪ್ ರೇವಣ್ಣ, ಬೆಳಗುಂಬ ಗ್ರಾಪಂ ಮಾಜಿ ಅದ್ಯಕ್ಷರಾದ ಲತಾ ಜಯರಾಂ,ಕೈ ಮುಖಂಡರಾದ ನಾಗರಾಜು(ಮೊಗಣ್ಣ)ಎಲ್.ಐ.ಸಿ.ಶಿವಕುಮಾರ್, ಹೊಸಪೇಟೆ ಚಂದ್ರಯ್ಯ(ಕಿಟ್ಟಿ) ತೋಟದಮನೆ ಕೃಷ್ಣಪ್ಪ, ಕಲ್ಯಾಗೇಟ್ ಬಸವರಾಜು, ಬೋಡುರಂಗನಾಥ್, ಡ್ರೈವರ್ ನಾರಾಯಣಪ್ಪ, ಬಂಕ್ ರಾಜಣ್ಣ, ಹೊಸಪೇಟೆ ಭರತ್, ಕುಂಬಳಕಾಯಿ ಗಂಗಣ್ಣ ಸೇರಿದಂತೆ ಮತ್ತಿತರಿದ್ದರು.