ಕೆಂಪ, ಕರಿಯ 2, ಗಣಪ ಹೀಗೆ ಮಾಸ್ ಚಿತ್ರಗಳ ಮೂಲಕವೇ ಗುರುತಿಸಿಕೊಂಡಿದ್ದ ನಟ ಸಂತೋಷ್ ಬಾಲರಾಜ್ ಬಹಳ ದಿನಗಳ ನಂತರ ಫ್ಯಾಮಿಲಿ ಎಂಟರ್ ಟೈನರ್ ಚಿತ್ರದ ಮೂಲಕ ಮರಳಿದ್ದಾರೆ. 40 ವರ್ಷಗಳ ಹಿಂದೆ ರಾಜಮನೆತನವೊಂದರಲ್ಲಿ ನಡೆದ ಕಳಂಕದಿಂದಾಗಿ ಆ ಇಡೀ ವಂಶವೇ ಬಲಿಯಾದ ದಂತಕಥೆಯೊಂದನ್ನು ನಿರ್ದೇಶಕ ಅಶೋಕ್ ಕಡಬ ಅವರು ‘ಸತ್ಯಂ’ ಹೆಸರಿನಲ್ಲಿ ತೆರೆಮೇಲೆ ತರುತ್ತಿದ್ದಾರೆ. ಶ್ರೀಮಾತಾ ಕ್ರಿಯೇಶನ್ಸ್ ಮೂಲಕ ಮಹಂತೇಶ್ ವಿಕೆ. ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಎರಡು ಕಾಲಘಟ್ಟದಲ್ಲಿ ನಡೆಯುವ ಕಥೆ ಇದಾಗಿದ್ದು ಈ ಚಿತ್ರದ ಮೋಷನ್ ಪೋಸ್ಟರ್ ಹಾಗೂ ಫಸ್ಟ್ ಲುಕ್ ಅನಾವರಣ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ರಾಜ್ ಕುಟುಂಬದ ಎಸ್.ಎ.ಗೋವಿಂದರಾಜು ಪೋಸ್ಟರ್ ಲಾಂಚ್ ಮಾಡಿದರು. ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಭಾಮ ಹರೀಶ್, ಕುಶಾಲ್ ಚಂದ್ರಶೇಖರ್, ಟಿಪಿ. ಸಿದ್ದರಾಜು, ನಿರ್ದೇಶಕ ಜಡೇಶ್ ಹಂಪಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ನಿರ್ಮಾಪಕ ಮಹಂತೇಶ್, ಇದು ನನ್ನ ನಿರ್ಮಾಣದ 2ನೇ ಚಿತ್ರ.
ಒಬ್ಬ ಜಮೀನ್ದಾರರ ಮನೆಯಲ್ಲಿ ನಡೆಯುವ ಕಥೆ,ನಾಯಕಿಯಾಗಿ ರಂಜನಿ ರಾಘವನ್, ಅಲ್ಲದೆ ಹಿರಿಯನಟ ಸುಮನ್, ಅವಿನಾಶ್, ಸಯ್ಯಾಜಿ ಶಿಂಧೆ, ವಿನಯಾ ಪ್ರಸಾದ್ ಹೀಗೆ ಅತ್ಯುತ್ತಮ ಕಲಾವಿದರೇ ನಮ್ಮ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಒಬ್ಬ ಪ್ರೇಕ್ಷಕನಾಗಿ ಚಿತ್ರ ಚೆನ್ನಾಗಿ ಬಂದಿದೆ ಅಂತ ಹೇಳಬಲ್ಲೆ. ಉಳಿದ ಮಾಹಿತಿಗಳನ್ನು ಹಂತ ಹಂತವಾಗಿ ತಿಳಿಸುತ್ತೇವೆ. ಒಂದೊಳ್ಳೆ ಪ್ರಾಡಕ್ಟ್ ನ್ನು ಜನರಿಗೆ ತಲುಪಿಸುತ್ತಿದ್ದೇವೆ ಎಂದರು. ನಿರ್ದೇಶಕ ಅಶೋಕ್ ಕಡಬ, ನಾಯಕ ಸಂತೋಷ್ ಮಾತನಾಡಿದರು.
Leave a Review