ಬೆಂಗಳೂರು: ಬೆಂಗಳೂರಿನಲ್ಲಿ ಟನಲ್ ರೋಡ್ ನಿರ್ಮಾಣ ವಿಚಾರಕ್ಕೆ ಸಂಬಂಧಪಟ್ಟಂತೆ ಮಲ್ಲೇಶ್ವರಂನಲ್ಲಿರುವ ಸ್ಯಾಂಕಿ ಕೆರೆಯ ಬಳಿ ಬಿಜೆಪಿ ನಾಯಕರುಗಳು ಜಮಾವಣೆಗೊಂಡರು.
ಶೋಭಾ ಕರಂದ್ಲಾಜೆ, ಆರ್.ಅಶೋಕ್, ಡಾ.ಸಿ.ಎನ್. ಅಶ್ವತ್ಥ್ನಾರಾಯಣ್ ನೇತೃತ್ವದಲ್ಲಿ ವಾಕರ್ಸ್ ಅಸೋಸಿಯೇಷನ್ ಸದಸ್ಯರು ಭೇಟಿ ಮಾಡಿದರು. ಬೆಂಗಳೂರಿಗೆ ಟನಲ್ ರಸ್ತೆ ಅವೈಜ್ಞಾನಿಕ. ಇದರ ನಿರ್ಮಾಣಕ್ಕೆ ಮುಂದಾಗಬಾರದು ಎಂದು ಸಹಿ ಸಂಗ್ರಹಕ್ಕೆ ಬಿಜೆಪಿ ನಾಯಕರುಗಳು ಮುಂದಾದರು. ಸ್ಯಾಂಕಿ ಟ್ಯಾಂಕ್ ವಾಕರ್ಸ್ ಅಸೋಸಿಯೇಷನ್ ಸದಸ್ಯರ ಜೊತೆಗೆ ಕೆರೆ ಉಳಿಸಿ ಎಂದು ಸಹಿ ಸಂಗ್ರಹ ನಡೆಸಿದರು. ಸ್ಯಾಂಕಿ ಕೆರೆ ಉಳಿಸಿ ಎಂದು ಬರೆದು ಸಹಿ ಮಾಡಿದ ಆರ್.ಅಶೋಕ್.ಶೋಭಾ ಕರಂದ್ಲಾಜೆ ಅವರಿಂದ ಕೆರೆ ಉಳಿಸಿ ಅಭಿಯಾನಕ್ಕೆ ಸಾಥ್ ನೀಡಿದರು. ಟನಲ್ ರಸ್ತೆಯ ನಿರ್ಮಾಣದ ನಕ್ಷೆ ಹಿಡಿದು ಸ್ಯಾಂಕಿ ಕೆರೆ ಬಳಿ ವೀಕ್ಷಣೆ, ಪರಿಶೀಲನೆ ನಡೆಸಿದರು.
ಇದೊಂದು ಅವೈಜ್ಞಾನಿಕ ಕಾಮಗಾರಿ. ಬಿಜೆಪಿಯವರು ಕಾಮಗಾರಿಗೆ ವಿರೋಧವಿಲ್ಲ. ವಿರೋಧ ವ್ಯಕ್ತಪಡಿಸುವುದಿಲ್ಲ. ಆದ್ರೆ, ಈ ಸರ್ಕಾರ ಅವೈಜ್ಞಾನಿಕ ಕಾಮಗಾರಿಗೆ ಮುಂದಾಗಿದೆ. ಟನಲ್ ರೋಡ್ ಮಾಡಲು ಸರ್ಕಾರಕ್ಕೆ ವರದಿ ಕೊಟ್ಟಿದ್ದು ಯಾರು? ಆತುರಾತುರವಾಗಿ ಅವೈಜ್ಞಾನಿಕವಾಗಿ ಕಾಮಗಾರಿ ಮಾಡುವುದು ಎಷ್ಟರಮಟ್ಟಿಗೆ ಸರಿ?ಕೆಂಪೇಗೌಡ ಕಟ್ಟಿದ್ದ ಜಾಗಗಳನ್ನೇ ಡಿಕೆಶಿ ಟಾರ್ಗೆಟ್ ಮಾಡಿಕೊಳ್ಳುತ್ತಿದ್ದಾರೆ. ಲಾಲ್ಬಾಗ್ ಆಯ್ತು, ಈಗ ಸ್ಯಾಂಕಿ ಕೆರೆಯ ಸರದಿ. ಸ್ಯಾಂಕಿ ಕೆರೆ ಈ ಹಿಂದೆ ಗಂಧದ ಕೆರೆ ಎಂಬ ಹೆಸರಿನಿಂದ ಇತ್ತು. ಕೆರೆಯ ಜಾಗವನ್ನು ಪಾರ್ಕ್ ಜಾಗವನ್ನು ಕಬಳಿಸಲು ಈ ಹುನ್ನಾರ ಮಾಡಲಾಗುತ್ತಿದೆ. ನಾವು ಅಭಿವೃದ್ಧಿಗೆ ವಿರೋಧ ಇಲ್ಲ.
ನಮ್ಮದು ಅಭಿವೃದ್ಧಿಗೆ ಸಹಕಾರ ಕೊಡುವ ಕೆಲಸ. ಆದ್ರೆ ಸರ್ಕಾರದ ಕಿವಿ ಹಿಂಡುವ ಕೆಲಸ ಮಾಡಬೇಕಾಗುತ್ತದೆ.ಯಾವುದೇ ತಜ್ಞರನ್ನು ನೇಮಕ ಮಾಡಿಕೊಳ್ಳದೇ ಇಂತಹ ದೊಡ್ಡ ಪ್ರಾಜೆಕ್ಟ್ ಮಾಡುವುದು ಸರಿಯಲ್ಲ.ಟನಲ್ ರೋಡ್ ಕಾಮಗಾರಿ ವಿಚಾರವಾಗಿ ಸರ್ಕಾರ ವಿರುದ್ಧ ಆರ್.ಅಶೋಕ್ ವಾಗ್ದಾಳಿ ನಡೆಸಿದರು. ಬೆಂಗಳೂರಿನಲ್ಲಿ ಈಗ ಮೆಟ್ರೋ ಸಂಚಾರ ಮಾಡುತ್ತಿದೆ. ಮೆಟ್ರೋ ಲಾಭವನ್ನು ಪ್ರತಿನಿತ್ಯ ಸರಾಸರಿಯಾಗಿ ೬೦ ಲಕ್ಷ ಮಂದಿ ಸದ್ಭಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಟನಲ್ ರೋಡ್ ಮಾಡಿ ಅದಕ್ಕೆ ಟೋಲ್ ಕಟ್ಟಿ ಓಡಾಟ ಮಾಡಬೇಕಾಗುತ್ತದೆ. ಟನಲ್ ರೋಡ್ನಲ್ಲಿ ಟೋಲ್ ಕಟ್ಟುವ ಬದಲಿಗೆ ಒಂದು ಕಾರನ್ನೇ ಖರೀದಿಸಬಹುದು.
೨೦ ಸಾವಿರ ಪ್ರತಿ ತಿಂಗಳು ಟೋಲ್ಗೆ ಹೋಗುತ್ತದೆ. ಈ ಹಣದಲ್ಲಿ ಕಾರನ್ನೇ ಖರೀದಿಸಬಹುದು. ಸರ್ಕಾರ ತಜ್ಞರನ್ನು ಭೇಟಿ ಮಾಡದೇ ಇಂತಹ ಅವೈಜ್ಞಾನಿಕ ಕಾಮಗಾರಿ ಮಾಡಬಾರದು ಎಂದ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಯಾಂಕಿ ಕೆರೆಯ ಬಳಿ ಟನಲ್ ರೋಡ್ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸ್ಯಾಂಕಿ ಕೆರೆ ಪುರಾತನವಾಗಿರುವುದು. ಈ ಸರ್ಕಾರದ ಕಣ್ಣು ಸ್ಯಾಂಕಿ ಕೆರೆ ಮೇಲೆ ಬಿದ್ದಿದೆ. ಸ್ಯಾಂಕಿ ಜೆರೆ ಉಳಿಸಿ ಎಂದು ನಾವು ಅಭಿಯಾನ ಮಾಡುತ್ತಿದ್ದೇವೆ. ನಾವು ಯಾವುದೇ ಕಾರಣಕ್ಕೂ ಸ್ಯಾಂಕಿ ಕೆರೆ ಕಳೆದುಕೊಳ್ಳುವುದಿಲ್ಲ. ಇದೊಂದು ಅವೈಜ್ಞಾನಿಕ. ಈ ವರದಿ ಕೊಟ್ಟಿದ್ದು ಯಾರು? ಡಿಪಿಆರ್ ಮಾಡಿದ್ದು ಯಾರು? ಯಾರ ವರದಿಯನ್ನಾಧರಿಸಿ ಈ ಕಾಮಗಾರಿ ಶುರು ಮಾಡಲು ಹೊರಟಿದ್ದೀರಿ? ಈ ಕಾಮಗಾರಿ ಕೈ ಬಿಡಬೇಕು.ಇಂದು ಸ್ಯಾಂಕಿ ಕೆರೆಯ ಬಳಿ ಸಹಿ ಸಂಗ್ರಹ ಮಾಡುತ್ತಿದ್ದೇವೆ. ನಾವು ಪರಿಸರ ಹಾಳಾಗುವುದನ್ನು ಒಪ್ಪಲ್ಲ. ಪರಿಸರವನ್ನು ರಕ್ಷಿಸಬೇಕು ಎಂದು ಹೇಳಿದ್ದಾರೆ.



