ದೇವನಹಳ್ಳಿ: ಸವಿತಾ ಮಹರ್ಷಿ ಸಮಾಜದ ಶ್ರೇಷ್ಟತೆಗೆ ಶ್ರಮಿಸಿದ ಮಹಾನ್ ಪುರುಷ. ಪ್ರತಿ ರಥಸಪ್ತಮಿ ದಿನದಂದು ಶಿವನ ಬಲಗಣ್ಣಿನಿಂದ ಜನ್ಮ ತಾಳಿದ್ದರಿಂದ ಪ್ರತಿ ವರ್ಷ ಅದೇ ದಿನದಲ್ಲಿ ಜಯಂತಿಯನ್ನು ಆಚರಿಸಲಾಗುತ್ತದೆ ಎಂದು ಸವಿತ ಸಮಾಜದ ರಾಜ್ಯ ಕಾರ್ಯಧ್ಯಕ್ಷ ಎಸ್.ಕಿರಣ್ಕುಮಾರ್ ತಿಳಿಸಿದರು.
ದೇವನಹಳ್ಳಿ ಪಟ್ಟಣದ ತಾಲೂಕು ಆಡಳಿತ ಸೌಧದ ನ್ಯಾಯಾಲಯ ಸಭಾಂಗಣದಲ್ಲಿ ಹಮ್ಮಿ ಕೊಂಡಿದ್ದ ಸವಿತಾ ಮಹರ್ಷಿ ಹಾಗೂ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಇಬ್ಬರು ಮಹಾನ್ ವ್ಯಕ್ತಿಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು
ಮಾತನಾಡಿದರು.
ಸವಿತಾ ಸಮಾಜದ ಮೂಲ ಪುರಷ ಮಹರ್ಷಿಯವರಾಗಿದ್ದಾರೆ. ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಹಿಂದುಳಿದವರ ಉದ್ದಾರ
ಕ್ಕಾಗಿ ಶ್ರಮಿಸಿದ್ದಾರೆ. ಇವರು ಕ್ಷತ್ರಿಯ, ವೈದ್ಯ, ಕ್ಷೌರಿಕ,ಸಂಗೀತ ವಾದ್ಯ ನುಡಿಸುವವರು ಹಾಗೂ ಆಯುಷ್ಕರ್ಮ ಮಾಡುವ ಕಾಯಕ ಶೂರರಾಗಿದ್ದರು. 12ನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣ ಅವರಿಗೆಆಶ್ರಯ ನೀಡಿದ ಸವಿತಾ ಸಮಾಜದ ದೊರೆ ಬಿಜ್ಜಳ ಎಂಬುವುದು ಹೆಮ್ಮೆಯ ಸಂಗತಿ ಎಂದರು.
ಸವಿತಾ ಸಮಾಜದ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ರಾಮಮೂರ್ತಿ ಮಾತನಾಡಿ, ಸವಿತಾ ಮಹರ್ಷಿ ಸಮಾಜ ಮುಖಿಯಾಗಿ ಬೆಳೆದು ದಾರಿದೀಪವಾಗಿದ್ದಾರೆ. ಇಂತಹ ಮಾಹತ್ಮರ ಜಯಂತಿಗಳನ್ನು ಆಚರಿಸುವ ಮೂಲಕ ಸರಕಾರ ಇವರ ಆದರ್ಶಗಳ ಹಾದಿಯಲ್ಲಿ ನಡೆಯಲು ನಮಗೆ ಬೆಳಕು ತೋರಿಸಿದೆ. ಜನಸಾಮಾನ್ಯರು ಸವಿತಾ ಮಹರ್ಷಿ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಮಾಜಿ ಜಿಲ್ಲಾಧ್ಯಕ್ಷ ಕೋರಮಂಗಲ ವೆಂಕಟೇಶಪ್ಪ, ಸವಿತ ಸಮಾಜದ ದೇವರಾಜ್, ಲೋಕೇಶ್, ರಾಘವೇಂದ್ರ, ಚಿನ್ನಿ, ಗಿಡ್ಡಿಬಾಗಿಲು ವೆಂಕಟೇಶ್, ಮಂಜುನಾಥ್, ಚಂದ್ರಶೇಖರ್, ರವಿ, ಕೃಷ್ಣಪ್ಪ ಇನ್ನಿತರರು ಇದ್ದರು.ಸವಿತಾ ಮಹರ್ಷಿ ಮತ್ತು ಸರ್ವಜ್ಞನ ಭಾವಚಿತ್ರಕ್ಕೆ ಸವಿತಾ ಸಮಾಜದ ವತಿಯಿಂದ ಪುಷ್ಪನಮನ ಸಲ್ಲಿಸಲಾಯಿತು.