ಅಂಬಿಕಾ ತನಯ ದತ್ತ ಎಂದೇ ತಾಯಿಯ ಹೆಸರಿನಿಂದಲೇ ಗುರುತಿಸಿಕೊಂಡ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು ನವೋದಯ ಸಾಹಿತ್ಯದ ಆಧಾರ ಸ್ಥಂಭಗಳಲ್ಲಿ ಒಬ್ಬರು ಕನ್ನಡ ಮರಾಠಿಯಲ್ಲಿ ಸಮನಾದ ಪ್ರಬುತ್ವ ಹೊಂದಿದ್ದ ಬೇಂದ್ರೆಯವರು ವರಕವಿ ಎಂದೇ ಪ್ರಖ್ಯಾತರು. ಶಬ್ದ ಗಾರುಡಿಗ ಮತ್ತು ಕವಿ ಕುಲ ತಿಲಕ ಎಂದು ಇನ್ನೂ ಅನೇಕ ಬಿರುದು ಗಳನ್ನು ಹೊಂದಿರುವ ಬೇಂದೆಯವರು ಕನ್ನಡದ ಶ್ರೇಷ್ಠ ಕವಿಗಳಲ್ಲಿ ಪ್ರಮುಖರು.
ಅಂದು ಬಾಂಬೆ ಪ್ರೆಸಿಡೆನ್ಸಿಯಲ್ಲಿ ಬರುತ್ತಿದ್ದ ದಾಂಡೇಲಿಯಲ್ಲಿ ಚಿತ್ಪಾವನ ಬ್ರಾಹ್ಮಣ ಸಂಸ್ಕೃತ ಪಂಡಿತರಾಗಿದ್ದ ರಾಮಚಂದ್ರ ಬೇಂದ್ರೆ ಹಾಗೂ ಪಾರ್ವತಿ ಬಾಯಿಅಂಬವ್ವರ ಮಗನಾಗಿ 1896ರ ಜನವರಿ 31ರಂದು ಜನಿಸಿದ ಬೇಂದೆಯವರು ಬಹಳ ಮೇಧಾವಿ. ಸುಮಾರು 102 ವಿಷಯಗಳಲ್ಲಿ ಪಾಂಡಿತ್ಯವನ್ನು ಹೊಂದಿದ್ದರು ಅವುಗಳಲ್ಲಿ ಕ್ವಾಂಟಮ್ ಫಿಸಿಕ್ಸ್, ಗಣಿತ, ಹ್ಯೂಮನ್ ಫಿಸಿಯಾಲಜಿ ಮೊದಲಾದ ವಿಜ್ಞಾನದ ವಿಷಯಗಳನ್ನು ಕೂಡ ಪರಿಣಿತರ ಸಮನಾಗಿ ತಿಳಿದಿದ್ದ ಬೇಂದ್ರೆಯವರ ವಿಜ್ಞಾನಿಗಳು ಹಾಗೂ ವೈದ್ಯರೊಂದಿಗೆ ಅವರ ವಿಷಯಗಳ ಬಗ್ಗೆ ನಿರರ್ಗಳವಾಗಿ ಚರ್ಚಿಸುತ್ತಿದ್ದರು.
ಆದರೆ ಅವರು ಒಂದು ಬಾರಿ ಅವರ ಬಳಿ ಸ್ನಾತಕೋತ್ತರ ಪದವಿ ಇಲ್ಲ ಎಂಬ ಕಾರಣಕ್ಕೆ ಪ್ರಾಧ್ಯಾಪಕರಾಗಿ ಕೆಲಸ ಕೊಡಲು ಆಗುವುದಿಲ್ಲ ಎಂದಾಗ ವಿಶ್ವವಿದ್ಯಾಲಯದಲ್ಲಿ ದಾಖಲಾತಿ ಪಡೆದಾಗ ಇವರಿಗೆ ಯಾರು ಪಾಠ ಮಾಡಬೇಕೆಂಬ ಪ್ರಶ್ನೆ ಬರುತ್ತದೆ. ವಿ ಕೃ ಗೋಕಾಕರನ್ನು ಆರಿಸದಾಗ ಅವರೂ ಕೂಡ ಪಾಠವನ್ನು ನೀವೇ ಮಾಡಿರಿ ನಾವು ಕೇಳುತ್ತೇವೆ ಎಂದು ಔಪಚಾರಿಕವಾಗಿ ಅವರ ಸ್ನಾತಕ ಪದವಿಯನ್ನು ನೀಡಲು ಸಹಿ ಮಾಡಿದರೂ ಅವರನ್ನು ತಮ್ಮ ಗುರುಗಳೆಂದೇ ಭಾವಿಸಿ ಗೌರವಿಸುತ್ತಿದ್ದರು.
ಅವರ ಸಾಹಿತ್ಯದ ಬಳಗ ಅವರ ಸಾಹಿತ್ಯದ ಕೃಷಿ ಬಹಳ ದೊಡ್ಡದು. ನವೋದಯ ಕಾಲದಲ್ಲಿ ಇದುವರೆಗೂ ಹೆಚ್ಚಿನ ಪಿ ಎಚ್‍ಡಿ ಪದವಿಗೆ ವಿಷಯವಾಗಿರುವ ಬೇಂದೆಯವರ ಸಾಧನೆಗೆ ಸಮನಾದದ್ದು ಯಾವುದೂ ಇಲ್ಲ ಎನ್ನಬಹುದು. ಬೇಂದ್ರೆಯವರು ಪ್ರಕೃತಿ, ಆಧ್ಯಾತ್ಮ ಹಾಗೂ ಜೀವನದ ಕುರಿತು ಬರೆದ ಎಲ್ಲ ಕವನಗಳೂ ಪ್ರತಿ ಬಾರಿ ಓದಿದಾಗಲೂ ಕೂಡ ಹೊಸ ಹೊಸ ಅರ್ಥವನ್ನು ನೀಡುವಂತಿವೆ. 35-36 ಕವನ ಸಂಕಲನಗಳು, 5-6 ನಾಟಕಗಳು, ಕಥಾ ಸಂಕಲನ, 10-11 ವಿಮರ್ಶಾ ಗ್ರಂಥಗಳು, 5 ಗ್ರಂಥಗಳ ಸಂಪಾದನೆ, 11 ಅನುವಾದಗಳನ್ನು ಮ್ತತು ಮರಾಠಿಯಲ್ಲಿಯೂ ಕೂಡ ತಮ್ಮ ಸಾಹಿತ್ಯದ ಕೃಷಿಯನ್ನು ಮಾಡಿರುವ ಬೇಂದ್ರೆಯವರಿಗೆ ‘ನಾಲ್ಕು ತಂತಿ’ ಕವನ ಸಂಕಲನಕ್ಕೆ ಜ್ಞಾನಪೀಠ ಪ್ರಶಸ್ತಿ, ಇದು ಅಲ್ಲದೇ ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಗೌರವಿಸಿದ್ದು ಮತ್ತು ಪದ್ಮ ಶ್ರೀ ಗೌರವಗಳು ದೊರೆತಿವೆ.
ಇಂದಿಗೂ ಇವರ ಕವನಗಳು ಪ್ರಸ್ತುತ ಹಾಗೂ ಸ್ಪೂರ್ತಿದಾಯಕವಾಗಿಯೇ ಇವೆ. ಅವರ ಮಾತುಗಳೂ ಕೂಡ ಮುತ್ತಿನಂತೆ ನೂರು ಅರ್ಥವನ್ನು ಜೀವನದ ಮರ್ಮವನ್ನು ತಿಳಿಸುತ್ತವೆ. ಅದರಲ್ಲಿ “ಸರಸವೇ ಜನನ, ವಿರಸವೇ ಮರಣ ಸಮರಸವೇ ಜೀವನ”, “ಇರೋತನಕ ದುಡಿ, ಇದ್ದಾಗ ಕುಂತು ಕುಡಿ, ಸಾವು ಬಂದಾಗ ನಡಿ”, “ಸಾವಿಗೆ ನಾ ಹೆದರೋದಿಲ್ಲ, ಯಾಕಂದರ ನಾ ಇರೋತನಕ ಅದು ಬರೋದಿಲ್ಲ, ಅದು ಬಂದಾಗ ನಾ ಇರೋದಿಲ್ಲ”, “ನಿನ್ನೊಳಗೆ ನೀ ಹೊಕ್ಕು, ನಿನ್ನ ನೀ ಕಂಡು ನೀನು ನೀನಾಗು ಗೆಳೆಯ” ….. ಇವೇ ಮೊದಲಾದ ಬಹಳಷ್ಟು ನುಡಿ ಮತ್ತುಗಳು ನಮಗೆ ಜೀವನ ನಡೆಸಲು ಮಾರ್ಗದರ್ಶನ ಮಾಡುತ್ತವೆ.
ಅವರ ಪ್ರತಿ ಮಾತು ಜೊತೆಗೆ ನಡೆಯು ಬಹಳ ಆದರ್ಶ ಪ್ರಾಯವಾಗಿಯೇ ಇದ್ದವು ಇಂತಹ ರಸ ಋಷಿಯ ಬಗೆಗೆ ತಿಳಿಯು ಬಹಳಷ್ಟು ವಿಷಯ ಗಳಿವೆ. ಎಲ್ಲವನ್ನೂ ಒಂದೇ ಸಲ ತಿಳಿಯಲು ಸಾಧ್ಯವಾಗದಷ್ಟುದೀರ್ಘಕಾಲದ ಅಧ್ಯಯನಕ್ಕೆ ವಿಷಯವಾಗಿರುವ ವರಕವಿ ಬೇಂದ್ರೆಯವರಿಗೆ ಜನುಮದಿನದಂದು ಸಣ್ಣ ನುಡಿ ನಮನ
– ಮಾಧುರಿ ದೇಶಪಾಂಡೆ, ಬೆಂಗಳೂರು
Leave a Review