ಮಳವಳ್ಳಿ: ಹೆಣ್ಣು ಭ್ರೂಣ ಹತ್ಯೆ ತಡೆಗೆ ಜಾಗೃತ ದಳ ರಚನೆ ಜಿಲ್ಲಾಧಿಕಾರಿ ಡಾ: ಕುಮಾರ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ತಾಲೂಕಿನ ಜಾಗೃತ ದಳ ಪಟ್ಟಣದ ಸ್ಕ್ಯಾನಿಂಗ್ ಸೆಂಟರ್ ರಕ್ತಪರೀಕ್ಷಾಲಯ ಕ್ಲಿನಿಕ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲೂಕು ಮಟ್ಟದ ಜಾಗೃತ ದಳದ ಅಧ್ಯಕ್ಷರಾದ ತಹಸಶೀಲ್ದಾರ್ ಲೋಕೇಶ್ ತಾಲ್ಲೂಕು ಪಂಚಾಯತಿ ಕಾರ್ಯ ನಿರ್ವಹಣಾಧಿಕಾರಿ ಸಹ ಅಧ್ಯಕ್ಷರದ ಮಮತ ಶಿಶು ಅಭಿವೃದ್ಧಿ ಅಧಿಕಾರಿ ಸದಸ್ಯರಾದ ದೀಪು ತಾಲ್ಲೂಕು ಆರೋಗ್ಯ ಅಧಿಕಾರಿ ಸದಸ್ಯ ಕಾರ್ಯದರ್ಶಿಯಾಗಿ ಡಾ. ವೀರಭದ್ರಪ್ಪ ಪೋಲಿಸ್ ಇಲಾಖೆಯ ಪಿ ಎಸ್ ಐ ಶ್ರವಣ ರೆಡ್ಡಿ ಸೇರಿದ ತಂಡವು ಸ್ಕ್ಯಾನಿಂಗ್ ರಕ್ತಪರಿಕ್ಷಾ ಕೇಂದ್ರಗಳಿಗೆ ಬೇಟೆ ನೀಡಿ ಪರಿಶೀಲಿನ ನಡೆಸಿದರು.
ತಾಲೂಕು ಮಟ್ಟದ ಜಾಗೃತ ದಳದ ಅಧ್ಯಕ್ಷರಾದ ತಹಶೀಲ್ದಾರ್ ಲೋಕೇಶ್ ರವರು ಮಾತನಾಡಿ ಪಟ್ಟಣದಲ್ಲಿ ಸ್ಕ್ಯಾನಿಂಗ್ ಸೆಂಟರ್ ಕ್ಲಿನಿಕ್ ಲ್ಯಾಬ್ ಭೇಟಿ ನೀಡಿದ್ದೇವೆ ಕೆಲವರು ಅನಧಿಕೃತವಾಗಿ ಲ್ಯಾಬ್ ನಡೆಸುತ್ತಿದ್ದು ಅಂತಹವರನ್ನು ಮುಚ್ಚುವಂತೆ ಆದೇಶಿಸಲಾಗಿದೆ. ಅರ್ಹತೆ ಇಲ್ಲದ ವ್ಯಕ್ತಿಗಳು ಸೆಂಟರ್ ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಕ್ರಮ ವಹಿಸಲು ಸೂಚಿಸಿದ್ದೇನೆ ಎಂದರು.