ಬೆಂಗಳೂರು : ೯ ವರ್ಷದ ಅದ್ವೆöÊತ್ ಗಂಡು ಮಗು ನಿನ್ನೆ ಸಂಜೆ ೪ರ ಸುಮಾರಿಗೆ ನಾಲ್ಕನೇ ಮುಖ್ಯರಸ್ತೆ ದೇವರ ಚಿಕ್ಕನಹಳ್ಳಿ, ಡಿಯೋ ಹೈಲೈಟ್ಸ್ ಅಪಾರ್ಟ್ಮೆಂಟ್ ಮುಂಭಾಗ ಸೈಕಲ್ನಲ್ಲಿ ಹೋಗುತ್ತಿದ್ದ ಸಮಯದಲ್ಲಿ ಚೈತನ್ಯ ಶಾಲೆಯ ಬಸ್ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಮಗುವಿನ ತಲೆಯ ಮೇಲೆ ಬಸ್ಸಿನ ಮುಂದಿನ ಚಕ್ರ ಹರಿಸಿ ಮಗು ಮೃತಪಡಲು ಕಾರಣರಾಗಿರುತ್ತಾನೆ ಎಂದು ಹುಳಿಮಾವು ಸಂಚಾರಿ ಇನ್ಸ್ಪೆಕ್ಟರ್ ತಿಳಿಸಿರುತ್ತಾರೆ. ಬಸ್ ಚಾಲಕನನ್ನು ಹುಳಿಮಾವು ಸಂಚಾರಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಬಂಧಿಸಿ ಕ್ರಮ ಕೈಗೊಂಡಿರುತ್ತಾರೆ. ಮತ್ತೊಂದು ಅಪಘಾತ ಪ್ರಕರಣ ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯ ನೈಸ್ ರಸ್ತೆ ಬಳಿ ರಾತ್ರಿ ೧೧ ರ ಸುಮಾರಿಗೆ ಕಂಟೇನರ್ ಲಾರಿಗೆ ಗೂಡ್ಸ್ ವಾಹನದ ಚಾಲಕ ಅಜಯ್ ೨೫, ಅತಿ ವೇಗವಾಗಿ ಚಲಾಯಿಸಿ ಹಿಂಬದಿಯಿAದ ಡಿಕ್ಕಿ ಹೊಡೆದುಕೊಂಡು ಮೃತಪಟ್ಟಿರುತ್ತಾನೆ.
ತಲಘಟ್ಟಪುರ ಪೊಲೀಸರು ಅಪಘಾತ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.



