ಚನ್ನರಾಯಪಟ್ಟಣ: ಶಾಲಾ ಹಂತದಲ್ಲಿ ಮಕ್ಕಳು ಕ್ರೀಡಾ ಮನೋಭಾವ ಬೆಳೆಸಿಕೊಂಡರೆ ದೈಕ್ ಆರೋಗ್ಯ ಹೆಚ್ಚುತ್ತದೆ ಎಂದು ಶಾಲಾ ಮುಖ್ಯ ಶಿಕ್ಷಕ ಮುನೇಗೌಡ ಹೇಳಿದರು.
ದೇವನಹಳ್ಳಿ ತಾಲೂಕು ಗಂಗವಾರ ಸನ್ ರೈಸ್ ಇಂಟರ್ನ್ಯಾಷನಲ್ ಶಾಲೆ ವಿದ್ಯಾರ್ಥಿಗಳು ಕಾರಹಳ್ಳಿಯಲ್ಲಿ ನಡೆದ ಅಂತರ ಶಾಲಾ ಮಟ್ಟದ ವಾಲಿಬಾಲ್ ಕ್ರೀಡಾಕೂಟದಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿ ಮಕ್ಕಳಲ್ಲಿ ಕ್ರೀಡಾ ಮನೋಭಾವ ಬೆಳೆಸಿದರೆ ಮಕ್ಕಳಲ್ಲಿ ಸಾಮಾನ್ಯ ಜ್ಞಾನ ಹೆಚ್ಚುತ್ತದೆ ಶಾಲಾ ಮಕ್ಕಳು ಬರಿ ವಿದ್ಯಾಭ್ಯಾಸದ ಕಡೆ ಗಮನ ಆರಿಸಿದರೆ ಸಾಲದು ಕ್ರೀಡೆಯಲ್ಲಿ ಆಸಕ್ತಿ ತೋರಿದರೆ ಬೇರೆ ಶಾಲೆ ಮಕ್ಕಳನ್ನು ನೋಡಿ ಕಲಿಯುವುದು ಬಹಳಷ್ಟು ಇರುತ್ತದೆ ಎಂದರು.
ಶಾಲಾ ಆಡಳಿತ ಮಂಡಳಿ ಮಂಜುನಾಥ್ ಮಾತನಾಡಿ ಮಕ್ಕಳು ಕ್ರೀಡೆಯಲ್ಲಿ ದಿನಕ್ಕೆ ಒಂದು ಗಂಟೆಯಾದರೂ ನಿರಂತರ ಅಭ್ಯಾಸ ಮಾಡಿದರೆ ಒಳ್ಳೆಯ ಕ್ರೀಡಾಪಟು ಆಗುತ್ತಾರೆ ಯಾವುದೇ ಪಂದ್ಯಾವಳಿಯಲ್ಲಿ ಭಾಗವಹಿಸಿದರೆ ವಿಜಯಶಾಲಿ ಆಗಬಹುದು ಪೋಷಕರು ಸಹ ಕ್ರೀಡೆಯನ್ನು ಉದಾಸಿನ ತೋರಬಾರದು ಬೇಡ ಮನೋಭಾವ ಬೆಳೆಸಿಕೊಂಡರೆ ರಾಜ್ಯ ರಾಷ್ಟ್ರಮಟ್ಟದಲ್ಲೂ ಕೀರ್ತಿಗೊಳಿಸಬಹುದು ಎಂದರು.ಈ ಸಂದರ್ಭದಲ್ಲಿ ಶಾಲೆಆಡಳಿತ ಮಂಡಳಿಯ ರಾಜಶೇಖರ್ ಹಾಗೂ ಶಿಕ್ಷಕರಿಂದ ದವರು ಕ್ರೀಡೆಯಲ್ಲಿ ವಿಜೇತರಾದ ಕ್ರೀಡಾಪಟುಗಳು ಇನ್ನು ಮುಂತಾದವರು ಹಾಜರಿದ್ದರು.