This is the title of the web page
This is the title of the web page

`ಮೆದುಳು ಬೆಳವಣಿಗೆಯಾಗುತ್ತಿರುವ ಶಾಲಾ ಹಂತ ಮಕ್ಕಳ ಮನೋವಿಕಾಸಕ್ಕೆ ಸೂಕ್ತ ಕಾಲ’

ಬೆಂಗಳೂರು: ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲಾ ಹಂತದಲ್ಲಿ ಮಕ್ಕಳ ಮೆದುಳು ಬೆಳವಣಿಗೆಯಾಗುತ್ತಿರುವ ನಿರ್ಣಾಯಕ ಹಂತವಾಗಿದ್ದು, ಮಕ್ಕಳ ಮನೋವಿಕಾಸಕ್ಕೆ ಶಿಕ್ಷಕಿಯರ ಪಾತ್ರ ಅತ್ಯಂತ ನಿರ್ಣಾಯಕವಾಗಿದೆ ಎಂದು ಬೈನ್ ಸೆಂಟರ್ ಸಂಶೋಧನಾ ಕೇಂದ್ರದ ನಿರ್ದೇಶಕ, ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್ ತಿಳಿಸಿದ್ದಾರೆ.

ಗಿನ್ನೆಸ್ ವಿಶ್ವದಾಖಲೆ ಹೊಂದಿರುವ ಗ್ರೀನ್ಸ್ ಇನ್ನೊವೇಟರ್ ಸಂಸ್ಥೆ, ಕ್ಯಾಮ್ಸ್ ದಕ್ಷಿಣ ವಲಯ -1 ಮತ್ತು 2 ಹಾಗೂ ಬ್ರಾಹ್ಮ ಮಹಿಳಾ ಸಂಘಗಳ ಸಹಯೋಗದೊಂದಿಗೆ ಗಿರಿನಗರದ ಆವಲಹಳ್ಳಿಯ ರಾಷ್ಟ್ರಕವಿ ಕುವೆಂಪು ಕಲಾಮಂದಿರದಲ್ಲಿ ವಿಶ್ವ ಮಹಿಳಾ ದಿನದ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಮಕ್ಕಳ ಮೆದುಳು ಬೆಳವಣಿಗೆಯಾಗುತ್ತಿರುವ ಹಂತದಲ್ಲೇ ಅವರಲ್ಲಿ ಉತ್ತಮ ಅಂಶಗಳನ್ನು ಬಿತ್ತಿ ಭವಿಷ್ಯದ ಪ್ರಜೆಗಳನ್ನಾಗಿ ರೂಪಿಸಬೇಕು ಎಂದು ಕಿವಿ ಮಾತು ಹೇಳಿದರು.

ಶ್ರೀನಗರದ ಕುಸುಮ ಆಸ್ಪತ್ರೆಯಿಂದ ಮಹಿಳೆಯರಿಗಾಗಿ ಉಚಿತ ವೈದ್ಯಕೀಯ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು. ಗಿನ್ನೆಸ್ ವಿಶ್ವದಾಖಲೆ ಹೊಂದಿರುವ ರಂಗಲಕ್ಷ್ಮಿ ಶ್ರೀನಿವಾಸ್ ಅವವರಿಂದ ನಗೆಯೋಗ ಕಾರ್ಯಕ್ರಮ ನಡೆಯಿತು. ಕ್ಯಾಮ್ಸ್ ಅಧ್ಯಕ್ಷ ಜಯಪ್ರಕಾಶ್, ಪ್ರಧಾನ ಕಾರ್ಯದರ್ಶಿ ವೆಂಕಟರಮಣ ಗೌಡ, ಬ್ರಾಹ್ಮಿ ಮಹಿಳಾ ಸಂಘದ ಮುಖ್ಯಸ್ಥೆ ಉಮಾದೇವಿ, ಎಂಎಲ್‍ಇ ಶಾಲೆಯ ಸುಧಾ ಪ್ರಸನ್ನ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.