ಆನೇಕಲ್: ಸಮರ್ಥನಂ ಅಂಗವಿಕಲರ ಸಂಸ್ಥೆ ವತಿಯಿಂದ ನಗರದ ಹೆಚ್.ಎಸ್.ಆರ್. ಬಡಾವಣೆಯಲ್ಲಿರುವ ಸಮರ್ಥನಂ ಶಾಲೆಯ ಆವರಣದಲ್ಲಿ ವಿಜ್ಞಾನ ಎಕ್ಸ್ಪೋ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ವಿಜ್ಞಾನ ಮೇಳವನ್ನು ಇಸ್ರೋ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಕಿರಣ್ ಕುಮಾರ್ ರವರು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ವಿಜ್ಞಾನದ ಮೇಳವನ್ನು ಆಯೋಜನೆ ಮಾಡಿರುವುದು ಶ್ಲಾಘನೀಯವಾಗಿದೆ, ಮಕ್ಕಳು ಇದರಿಂದ ಮತ್ತಷ್ಟು ಜ್ಞಾನ ಬಳಸಿಕೊಂಡು ಓದಿನಲ್ಲಿ ಚುರುಕಾಗಲು ಹಾಗೂ ಕಲಿಯುವ ಉತ್ಸಾಹವನ್ನು ತೋರಲು ಇಂತಹ ವಿಜ್ಞಾನ ಮೇಳಗಳು ನಡೆಯುತ್ತಾ ಇರಬೇಕು ಎಂದು ತಿಳಿಸಿದರು.
ಇನ್ನೂ ವಿಜ್ಞಾನ ಎಕ್ಸ್ಪೋ ಕಾರ್ಯಕ್ರಮದಲ್ಲಿ ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು ಹಾಗೂ ಎಕ್ಸ್ಪೋದಲ್ಲಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿಜ್ಞಾನ ಪ್ರಯೋಗಗಳನ್ನು ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಏರೋನಾಟಿಕಲ್ ಸೊಸೈಟಿ ಆಫ್ ಇಂಡಿಯಾ ಅಧ್ಯಕ್ಷರಾದ ಡಾ. ಜಿ ಸತೀಶ್ ರೆಡ್ಡಿ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಸಿಇಒ ಡಾ|| ಎ ಎಂ ರಮೇಶ್, ಸಮರ್ಥನಂ ಅಂಗವಿಕಲರ ಸಂಸ್ಥೆ ವ್ಯವಸ್ಥಾಪಕ ಸಂಸ್ಥಾಪಕರಾದ ಡಾ|| ಜಿ.ಕೆ ಮಹಾಂತೇಶ ಹಾಗೂ ಮತ್ತಿತರರು ಹಾಜರಿದ್ದರು.