ಮುಂಬೈ: ನಿನ್ನೆ ವಿಮಾನ ದುರಂತದಲ್ಲಿ ದುರ್ಮರಣಕ್ಕೀಡಾದ ಮಹಾರಾಷ್ಟçದ ಡಿಸಿಎಂ ಅಜಿತ್ ಪವಾರ್, ಅವರ ಅಂತ್ಯಕ್ರಿಯೆ ಇಂದು ನಡೆಯಲಿದೆ. ವಿಷಯ ಏನೆಂದರೆ, ಅಂತ್ಯಕ್ರಿಯೆಗೂ ಮುನ್ನವೇ, ಅಜಿತ್ ಪವಾರ್ ಅವರ ಉತ್ತರಾಧಿಕಾರಿ ಯಾರು? ಎಂಬ ಚರ್ಚೆಗಳು ಮುನ್ನೆಲೆಗೆ ಬಂದಿದೆ.
ನಿನ್ನೆ ಅಪಘಾತದಲ್ಲಿ ದುರಂತ ಅಂತ್ಯ ಕಂಡ ಎನ್ಸಿಪಿ ಮುಖ್ಯಸ್ಥ ಅಜಿತ್ ಪವಾರ್, ಮಹಾರಾಷ್ಟç ರಾಜ್ಯದ ಸರ್ಕಾರದಲ್ಲಿ ಉಪ- ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ರು. ಇದರ ಜೊತೆಗೆ ಮಹತ್ವದ ಹಣಕಾಸು, ರಾಜ್ಯ ಯೋಜನೆ ಹಾಗೂ ಅಬಕಾರಿ ಇಲಾಖೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಇದೀಗ ಅವರ ನಿಧನದಿಂದ ಮಹಾರಾಷ್ಟç ರಾಜ್ಯದ ರಾಜಕಾರಣದ ಮೇಲೆ ಬೀರಿದೆ. ರಾಜ್ಯದಲ್ಲಿ ೪೧ ಶಾಸಕರ ಸಂಖ್ಯಾ ಬಲವನ್ನು ಎನ್ಸಿಪಿ ಹೊಂದಿದೆ. ಈಗ ಅಜಿತ್ ಪವಾರ್ ಅವರ ನಿಧನದಿಂದ ಅದು ೪೦ ಕ್ಕೆ ಇಳಿಕೆಯಾಗಿದೆ. ಈಗ ೪೦ ಮಂದಿಗೆ ನಾಯಕರು ಯಾರಾಗಬೇಕೆಂಬ ಚರ್ಚೆ ಆರಂಭವಾಗಿದ್ದು, ದಿ.ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಹಾಗೂ ಅವರ ಪುತ್ರ ಪಾರ್ಥ ಪವಾರ್ ಹೆಸರುಗಳು ಕೇಳಿ ಬಂದಿದೆ.
ಸುನೇತ್ರಾ ಪವಾರ್ ಅವರು ಎನ್ಸಿಪಿ ನಾಯಕರಾದ್ರೆ, ಸರ್ಕಾರದಲ್ಲಿ ಉಪ- ಮುಖ್ಯಮಂತ್ರಿ ಜೊತೆಗೆ ಮಹತ್ವದ ಇಲಾಖೆಗಳ ಜವಾಬ್ದಾರಿ ಪಡೆದುಕೊಳ್ಳಬಹುದು. ಇಲ್ಲ ಅವರ ಪುತ್ರ ಪಾರ್ಥ ಪವಾರ್ ಬಂದರೆ ಅವರಿಗೂ ಉಪ- ಮುಖ್ಯಮಂತ್ರಿ ಸ್ಥಾನ ಒಲಿಯುವ ಸಾಧ್ಯತೆಯಿದೆ ಎನ್ನಲಾಗಿದೆ.
ಇದೆಲ್ಲದರ ಜೊತೆಗೆ ಎನ್ಸಿಪಿ ಪಕ್ಷವನ್ನು ಶರದ್ ಪವಾರ್ ಅವರ ಪಕ್ಷದ ಜೊತೆಗೆ ವಿಲೀನ ಮಾಡಿಕೊಳ್ಳಲು ಚರ್ಚೆ ಆರಂಭವಾಗಿದೆ.
ಸದ್ಯ ಅಜಿತ್ ಪವಾರ್ ಅವರ ನಿಧನರಾಗಿರುವ ಕಾರಣ, ಉತ್ತರಾಧಿಕಾರಿಯ ಹುಡುಕಾಟ ಶುರು ಆಗಿದೆ.



