ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನಿವಾಸಕ್ಕೆ ಹುಸಿ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿರುವ ತಮಿಳುನಾಡಿನ ಖದೀಮನ ಬಂಧನಕ್ಕೆ ನಗರ ಪೊಲೀಸರು ಶೋಧಕೈಗೊಂಡಿದ್ದಾರೆ.
ಆರ್ನಾ ಅಶ್ವಿನ್ ಶೇಖರ್ಎಂಬಾತನಐಡಿಯಿದ ಡಿಸಿಎಂ ಡಿಕೆ ಶಿವಕುಮಾರ್ ಇ-ಮೇಲ್ಐಡಿಗೆ ಬಾಂಬ್ ಬೆದರಿಕೆ ಸಂದೇಶ ಕಳುಹಿಸಲಾಗಿದೆ. ಆರುಆರ್ಡಿಎಕ್ಸ್ ಬಾಂಬ್ಗಳು ಇಬ್ಬರ ಮನೆಯಲ್ಲೂ ಅಳವಡಿಸಲಾಗಿದೆ.ರಿಮೋಟ್ ಮೂಲಕ ಸ್ಫೋಟಿಸುವುದಾಗಿ ಬೆದರಿಕೆಕರೆ ಮಾಡಲಾಗಿದೆ.
ಕರೆ ಬಂದತಕ್ಷಣವೇ ಬಾಂಬ್ ನಿಷ್ಕ್ರಿಯ ದಳ ಶ್ವಾನದಳ ನಿವಾಸಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದಾಗಇದು ಹುಸಿ ಬೆದರಿಕೆಎನ್ನುವುದು ಪತ್ತೆಯಾಗಿದೆ.
ಬಾಂಬ್ಕರೆ ಸಂಬಂಧಿಸಿದಂತೆ ಅಶ್ವತ್ಥ್ ನಾರಾಯಣಸ್ವಾಮಿಎಂಬುವವರದೂರು ಆಧರಿಸಿ ಹಲಸೂರುಗೇಟ್ ಪೊಲೀಸ್ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕರೆ ಮಾಡಿದ ಖದೀಮನ ಬಂಧನಕ್ಕೆ ಶೋಧ ಕೈಗೊಳ್ಳಲಾಗಿದೆ.